ಪಡಸಾಲೆ
ಈ ಚಿತ್ರವನ್ನು ದಿಟ್ಟಿಸಿ ನೋಡಿದಾಗ ನಮ್ಮ ಕಣ್ಣ ಮುಂದೆ ಹಳ್ಳಿಯ ಚಿತ್ರಣ ಹಾದು ಹೋಗುತ್ತದೆ....ಹಳ್ಳಿಯಲ್ಲಿ ಈ ಜಗಲಿ..ಹಜಾರ..ದ ಉಪಯೋಗ ಬಹಳ...ನನ್ನ ಅಜ್ಜಿ ಮನೆಯಲ್ಲಿ ನನ್ನ ನೆನಪಿನ ಬುತ್ತಿ ಬಿಚ್ಚಿಡುವುದಾದರೆ......ನನ್ನ ಮುತ್ತಜ್ಜಿ ಇದೇ ಕಟ್ಟೆಯ ಮೇಲೆ...ಕುಳಿತು ಎಲೆ ಅಡಿಕೆ ಜಗಿಯುತ್ತ...ಬಂದ ಸಮಾನ ವಯಸ್ಕರೊಡನೆ...ಹರಟುತ್ತ....ದುಃಖ ತೋಡಿಕೊಳ್ಳುವ ಜಾಗ...
ಬೇಸಿಗೆಯಲ್ಲಿ ಒಳ ಮನೆಯಲ್ಲಿ ಮಲಗಲಾಗದೆ...ನಾನು..ನನ್ನ ಮಾವ ಚಾಪೆ ಹಾಸಿ ಮಲಗುತ್ತಿದ್ದೆವು.. .ಹಾಗೆ ಸ್ನೇಹಿತರು ಬಂದಾಗ ....ಈ ಜಗಲಿಗೆ ಅಚ್ಚು ಮಾಡಿಸಿದ ಚೌಕದ ಮನೆಯಲ್ಲಿ...ಹುಣಸೆ ಬೀಜದ ದಾಳಗಳನ್ನು ಬಿಟ್ಟು...ಶಕುನಿಯಂತೆ..ಹಲವು ಬಾರಿ ಗೆದ್ದು ಬೀಗುತಿದ್ದೆ...
ಅಮ್ಮ ನಮಗೆ ತಲೆಗೆ ಹರಳೆಣ್ಣೆ ತಿಕ್ಕುವ
ತಂಗಿಯ ತಲೆಯ ಹೇನು ಕುಕ್ಕುವ ಕೆಲಸ ಈ ಜಗಲಿಯಲ್ಲೇ....
ನಾವು ಗಣೇಶನ ಹಬ್ಬ ಬಂದಾಗ ಗಣೇಶನನ್ನು ಕೂರಿಸಿ ಆಡುತಿದ್ದೆವು...
ಕಬ್ಬಿನ ಜಲ್ಲೆ ಜಗಿದು ಜಗಲಿ ತುಂಬಾ ಹರಹುತಿದ್ದೆವು ....ಸಂತೆ ದಿನದಂದು ತರುತ್ತಿದ್ದ ಪುರಿ ಕಾರ ವನ್ನು ಚೆಲ್ಲಾಡಿ ತಿನ್ನುತಿದ್ದೆವು....
ನಾವು ಈಗ ಕಾಣುವ ಸ್ತ್ರೀ ಶಕ್ತಿ ಸಂಘ ಗಳ ಕೇಂದ್ರ ಜಗಲಿಯೇ...
ಬದುಕು ಬೆಳೆದಂತೆ...ಹಳ್ಳಿ ಬೆಳೆದು ನಗರವಾಗಿ ಜಗಲಿ ಇದ್ದ ಸ್ಥಳ ಕಾರು ಬೈಕು ನಿಲ್ಲಿಸುವ ಸ್ಥಳವಾಗಿದೆ...ಹೊರಗಿನಿಂದ ಬಂದವರಿಗೆ ಹೊರಗೆ ಮೆತ್ತನೆಯ ಕುರ್ಚಿ ದೊರೆಯುತ್ತದೆ....ಜಗಲಿಯಲ್ಲಿ ಸಿಗುತಿದ್ದ....ತಣ್ಣನೆಯ ಅನುಭವ ಮೆತ್ತನೆಯ ಕುರ್ಚಿಯಲ್ಲಿ ಸಿಕ್ಕೀತೆ...
ಹೊಸತನಕೆ ಮರುಳಾಗಿ ಮರುಳನಾಗಿಹೆನಿಂದು..
....
ರಚನೆ
ಶ್ಯಾಮ್ ಪ್ರಸಾದ್ ಭಟ್
No comments:
Post a Comment