Tuesday, March 12, 2019

ಭಾವನೆಗಳಿಗೆ ಬೀಗ ಜಡಿದು




ಭಾವನೆಗಳಿಗೆ ಬೀಗ ಜಡಿದು

 

womans day special poem

ಭಾವನೆಗಳಿಗೆ ಬೀಗ ಜಡಿದು
ಕುಳಿತೆ ಮಗಳ ಜಡೆ ಹೆಣೆದು

ನೆನೆಯುತ ನನ್ನ ಸ್ವತಂತ್ರದ ಬದುಕ
ನೆನೆದರೆ ಈಗಲು ತಂತು ನನಗೆ ಮೈ ಪುಳಕ
ಗಂಡ ಕೂರಿಸಿಹನಿಂದು ಸ್ವತಂತ್ರದ ಬದುಕ
ಚಿಲಕಕ್ಕೆ ತೊಡಿಸಿ ಬೀಗದ ಲೋಲಕ

ಅಂದು ಸ್ನೇಹಿತೆಯೊಡನೆ ಆಡಿದೆ ಕುಂಟೇ ಬಿಲ್ಲೆ...
ಗೆಳೆಯರೊಡನೆ ಸವಿಯುತ ಕಬ್ಬಿನ ಜಲ್ಲೆ...

ಅಂದು ನಾ ಪ್ರೀತಿಸಿದ ನಲ್ಲ
ಮುದ್ದಿಸುತಿದ್ದ ಹಿಂಡುತ ನನ್ನ "ಗಲ್ಲ"
ಹಾಡಿ ಹೊಗಳುತಿದ್ದ ನೀನೇ ಎನ್ನ ರಸಗುಲ್ಲ

ಮದುವೆ ಮಾಡಿದೆ ಬೇರೊಬ್ಬ ವರನಿಗೆ ನೀಡಿ ಕಪ್ಪ
ಒಮ್ಮೆಯಾದರೂ ಕೇಳಲಿಲ್ಲ ನನಗೆ ಒಪ್ಪ - ತಪ್ಪ

ನನ್ನ ಆಸೆಗಳಿಗೆ ನೀ ವಿಧಿಸಿ"ಗಲ್ಲ"
ಅಪ್ಪ ಮದುವೆ ಮಾಡಿ ನೀ ದೂಡಿದೆಯಲ್ಲ

ಖರ್ಚು ಮಾಡಿ ಮದುವೆಗೆಂದು ಖಾಲಿಯಾಯ್ತು ನಿನ್ನ "ಗಲ್ಲ"
ನೀ ಬಂದು ನೋಡಲಿಲ್ಲ ನನ್ನ ಸಂಸಾರ ನೆಟ್ಟಗಿಲ್ಲ....

                        ರಚನೆ
            ಶ್ಯಾಮ್ ಪ್ರಸಾದ್ ಭಟ್

2 comments: