Friday, April 5, 2019

ಯುಗಾದಿ


                               ಯುಗದ ಆದಿ



ಮತ್ತೆ ಬಂತು ಯುಗಾದಿ
ಬದಲಾಗಲಿ ಜೀವನದ ಹಾದಿ
ಪ್ರಕೃತಿಯೇ ಕಟ್ಟಿಹಳು ಹಸಿರು ತೋರಣವ..
ಮೆತ್ತನೆಯ ಹಸಿರು ನೆಲ ಹಾಸಿಗೆಯ


ಕೇಳಿತು ಕೋಗಿಲೆ ದನಿಯ ಇಂಪು
ಚಿಗುರು ಮಾವಿನ ಕಂಪು
ಹೊತ್ತು ತಂತು ತಂಗಾಳಿಯ ತಂಪು.
.
ಬೇವು ತರಲು ಮರ ಹತ್ತಿಹನು ರಾಮಣ್ಣ..
ಮೈಗೆ ಹಚ್ಚಿದ ಎಣ್ಣೆಯಲ್ಲಿ ಪ್ರಕಾಶಿಸಿತು ಸೂರ್ಯನ ಕಿರಣ
ತೋರಣಕೆ ಎಲೆ ಜೊತೆಗೆ ಕಿತ್ತನು ಹಣ್ಣ...                                             

ಮನೆ ಮನೆಗೂ ತಳಿರು ತೋರಣ
ಪ್ರಾರಂಭ ಪಂಚಾಂಗ ಶ್ರವಣ..
ತಯಾರಿಹುದು ಹೋಳಿಗೆಯ ಹೂರಣ
ತಯಾರು ಬೇವು ಬೆಲ್ಲದ ಮಿಶ್ರಣ

ವಿದೇಶಿ ಕೇಳಿದ ಇದರ ಕಾರಣ...

.ಕಹಿ ತಿನ್ನೋದು ಕಷ್ಟವೇ..
ಸಿಹಿ ತಿನ್ನೋದು ಇಷ್ಟವೇ..
ಕಹಿಯ ಕಷ್ಟಕೆ ಕುಗ್ಗದೆ...ಸಿಹಿಯ ಸುಖದಿ ಹಿಗ್ಗದೆ...
ಬದುಕಿ ಬಾಳೆಂದು ಸಾರಿದೆ ಈ ಮಿಶ್ರಣ...

ಬನ್ನಿ ಯುಗದ ಆದಿಯ ಸಂಭ್ರಮಿಸೋಣ...

                    ರಚನೆ
        ಶ್ಯಾಮ್ ಪ್ರಸಾದ್ ಭಟ್


No comments:

Post a Comment