Monday, March 25, 2019

ಪಡಸಾಲೆ
ಈ ಚಿತ್ರವನ್ನು ದಿಟ್ಟಿಸಿ ನೋಡಿದಾಗ ನಮ್ಮ ಕಣ್ಣ ಮುಂದೆ ಹಳ್ಳಿಯ ಚಿತ್ರಣ ಹಾದು ಹೋಗುತ್ತದೆ....
ಹಳ್ಳಿಯಲ್ಲಿ  ಈ ಜಗಲಿ..ಹಜಾರ..ದ ಉಪಯೋಗ ಬಹಳ...ನನ್ನ ಅಜ್ಜಿ ಮನೆಯಲ್ಲಿ ನನ್ನ  ನೆನಪಿನ ಬುತ್ತಿ ಬಿಚ್ಚಿಡುವುದಾದರೆ......ನನ್ನ ಮುತ್ತಜ್ಜಿ ಇದೇ ಕಟ್ಟೆಯ ಮೇಲೆ...ಕುಳಿತು ಎಲೆ ಅಡಿಕೆ ಜಗಿಯುತ್ತ...ಬಂದ ಸಮಾನ ವಯಸ್ಕರೊಡನೆ...ಹರಟುತ್ತ....ದುಃಖ ತೋಡಿಕೊಳ್ಳುವ ಜಾಗ...
ಬೇಸಿಗೆಯಲ್ಲಿ ಒಳ ಮನೆಯಲ್ಲಿ ಮಲಗಲಾಗದೆ...ನಾನು..ನನ್ನ ಮಾವ ಚಾಪೆ ಹಾಸಿ ಮಲಗುತ್ತಿದ್ದೆವು.. .ಹಾಗೆ ಸ್ನೇಹಿತರು ಬಂದಾಗ ....ಈ ಜಗಲಿಗೆ ಅಚ್ಚು ಮಾಡಿಸಿದ ಚೌಕದ ಮನೆಯಲ್ಲಿ...ಹುಣಸೆ ಬೀಜದ ದಾಳಗಳನ್ನು ಬಿಟ್ಟು...ಶಕುನಿಯಂತೆ..ಹಲವು ಬಾರಿ ಗೆದ್ದು ಬೀಗುತಿದ್ದೆ...
ಅಮ್ಮ ನಮಗೆ ತಲೆಗೆ ಹರಳೆಣ್ಣೆ ತಿಕ್ಕುವ
ತಂಗಿಯ ತಲೆಯ ಹೇನು ಕುಕ್ಕುವ ಕೆಲಸ ಈ ಜಗಲಿಯಲ್ಲೇ....
ನಾವು ಗಣೇಶನ ಹಬ್ಬ ಬಂದಾಗ ಗಣೇಶನನ್ನು ಕೂರಿಸಿ ಆಡುತಿದ್ದೆವು...
ಕಬ್ಬಿನ ಜಲ್ಲೆ ಜಗಿದು ಜಗಲಿ ತುಂಬಾ ಹರಹುತಿದ್ದೆವು ....ಸಂತೆ ದಿನದಂದು ತರುತ್ತಿದ್ದ ಪುರಿ ಕಾರ ವನ್ನು ಚೆಲ್ಲಾಡಿ ತಿನ್ನುತಿದ್ದೆವು....
ನಾವು ಈಗ ಕಾಣುವ ಸ್ತ್ರೀ ಶಕ್ತಿ ಸಂಘ ಗಳ ಕೇಂದ್ರ ಜಗಲಿಯೇ...
ಬದುಕು ಬೆಳೆದಂತೆ...ಹಳ್ಳಿ ಬೆಳೆದು ನಗರವಾಗಿ ಜಗಲಿ ಇದ್ದ ಸ್ಥಳ ಕಾರು ಬೈಕು ನಿಲ್ಲಿಸುವ ಸ್ಥಳವಾಗಿದೆ...ಹೊರಗಿನಿಂದ ಬಂದವರಿಗೆ ಹೊರಗೆ ಮೆತ್ತನೆಯ ಕುರ್ಚಿ ದೊರೆಯುತ್ತದೆ....ಜಗಲಿಯಲ್ಲಿ ಸಿಗುತಿದ್ದ....ತಣ್ಣನೆಯ ಅನುಭವ ಮೆತ್ತನೆಯ ಕುರ್ಚಿಯಲ್ಲಿ ಸಿಕ್ಕೀತೆ...

ಹೊಸತನಕೆ ಮರುಳಾಗಿ ಮರುಳನಾಗಿಹೆನಿಂದು..
....
                    ರಚನೆ
   ಶ್ಯಾಮ್ ಪ್ರಸಾದ್ ಭಟ್

Tuesday, March 12, 2019

ಕಾಲ್ಪನಿಕ ಚಿತ್ರ


ಭಾವನೆಗಳಿಗೆ ಬೀಗ ಜಡಿದು




ಭಾವನೆಗಳಿಗೆ ಬೀಗ ಜಡಿದು

 

womans day special poem

ಭಾವನೆಗಳಿಗೆ ಬೀಗ ಜಡಿದು
ಕುಳಿತೆ ಮಗಳ ಜಡೆ ಹೆಣೆದು

ನೆನೆಯುತ ನನ್ನ ಸ್ವತಂತ್ರದ ಬದುಕ
ನೆನೆದರೆ ಈಗಲು ತಂತು ನನಗೆ ಮೈ ಪುಳಕ
ಗಂಡ ಕೂರಿಸಿಹನಿಂದು ಸ್ವತಂತ್ರದ ಬದುಕ
ಚಿಲಕಕ್ಕೆ ತೊಡಿಸಿ ಬೀಗದ ಲೋಲಕ

ಅಂದು ಸ್ನೇಹಿತೆಯೊಡನೆ ಆಡಿದೆ ಕುಂಟೇ ಬಿಲ್ಲೆ...
ಗೆಳೆಯರೊಡನೆ ಸವಿಯುತ ಕಬ್ಬಿನ ಜಲ್ಲೆ...

ಅಂದು ನಾ ಪ್ರೀತಿಸಿದ ನಲ್ಲ
ಮುದ್ದಿಸುತಿದ್ದ ಹಿಂಡುತ ನನ್ನ "ಗಲ್ಲ"
ಹಾಡಿ ಹೊಗಳುತಿದ್ದ ನೀನೇ ಎನ್ನ ರಸಗುಲ್ಲ

ಮದುವೆ ಮಾಡಿದೆ ಬೇರೊಬ್ಬ ವರನಿಗೆ ನೀಡಿ ಕಪ್ಪ
ಒಮ್ಮೆಯಾದರೂ ಕೇಳಲಿಲ್ಲ ನನಗೆ ಒಪ್ಪ - ತಪ್ಪ

ನನ್ನ ಆಸೆಗಳಿಗೆ ನೀ ವಿಧಿಸಿ"ಗಲ್ಲ"
ಅಪ್ಪ ಮದುವೆ ಮಾಡಿ ನೀ ದೂಡಿದೆಯಲ್ಲ

ಖರ್ಚು ಮಾಡಿ ಮದುವೆಗೆಂದು ಖಾಲಿಯಾಯ್ತು ನಿನ್ನ "ಗಲ್ಲ"
ನೀ ಬಂದು ನೋಡಲಿಲ್ಲ ನನ್ನ ಸಂಸಾರ ನೆಟ್ಟಗಿಲ್ಲ....

                        ರಚನೆ
            ಶ್ಯಾಮ್ ಪ್ರಸಾದ್ ಭಟ್

Monday, March 4, 2019

ಭಟ್ಟರ ದಿನಚರಿ ಪುಟದಿಂದ...



ಭಟ್ಟರ ದಿನಚರಿ ಪುಟದಿಂದ...


 

ಊರಿಗೆ ಹೊರಟಾಗ ರೈಲು ನಿಲ್ದಾಣದ ಬಳಿಯ ಕಬ್ಬಿನ ಹಾಲಿನಂಗಡಿಯವನ ಪ್ರಸಂಗ ಹೇಳಿದ್ದೇ....

ಹಾಗೇ ಇಂದು ಹಬ್ಬ ಮುಗಿಸಿ...ನಾನು ಹೊರಟದ್ದು ಟ್ರೈನ್ ಬರುವ ಸಮಯವಲ್ಲವಾದ್ದರಿಂದ...ಬಸ್ಸಿನಲ್ಲಿ ಪ್ರಯಾಣಿಸಬೇಕಾಯಿತು....

ಹಾಸನದಿಂದ 3.00 ಬಸ್ಸು ಹತ್ತಿದೆ...3:15 ಗೆ ಬಸ್ಸು ಹೊರಟು....ಹೊಳೆನರಸೀಪುರ ದಾಟಿ...ಕೆ.ಆರ್ ನಗರ ತಲುಪಿತು...

ಅಲ್ಲಿ..ತುಂಬಾ ಪ್ರಯಾಣಿಕರನ್ನು ತುಂಬಿಕೊಂಡು ಬಸ್ಸು ಹೊರಡುವ ವೇಳೆ ಸುಮಾರು 5:00 ಗಂಟೆ ಇಳಿ ಸಂಜೆ...
ನನ್ನ ಪಕ್ಕದಲ್ಲಿ ಕಿಟಕಿ ಪಕ್ಕ ಕೂತಿದ್ದವ ದೈತ್ಯ ಆಳು .."ಪಾನ್ ಮಸಾಲೆ" ಬಾಯಿ ತುಂಬಾ ತುಂಬಿಕೊಂಡಿದ್ದ...
ಜಿಗಿದು ಜಿಗಿದು...ಹೊರ ಉಗುಳಲೆಂದು ಮುಚ್ಚಿದ್ದ ಕಿಟಕಿಯನ್ನು ಸ್ವಲ್ಪ ಜೋರಾಗಿಯೇ ಜರುಗಿಸಿದ ....

ಇದೇ ಸಂದರ್ಭದಲ್ಲಿ ಮುಂದಿನ ಸೀಟಿನಲ್ಲಿ ಕುಳಿತಿದ್ದವ ಕಿಟಕಿ ತೆರೆದು ಕೈ ನೀಡಿ ಹೊರಗಿನ ಗಾಳಿಗೆ ಕೈ ಬೀಸಿ ಕುಳಿತಿದ್ದ....
ನನ್ನ ಪಕ್ಕದಲ್ಲಿದ್ದ ಅಪರಿಚಿತ  ದೈತ್ಯದೇಹಿ ತಳ್ಳಿದ ರಭಸಕ್ಕೆ...ಮುಂದಿನವನಿಗೆ ಇರುಕಿದಂತಾಗಿ ನೋವಿನಿಂದ ಸಿಟ್ಟಿನಿಂದ ಹಿಂದಿನ ಸೀಟಿನವನ ಮೇಲೆ ರೇಗಿದ.....
ಸ್ವಲ್ಪ ಸಮಯ ಮಾತುಕತೆ ನೆಡೆದು ಅತಿರೇಕಕ್ಕೆ ತಿರುಗಿತು....
ನನ್ನ ಪಕ್ಕದಲ್ಲಿ ಕೂತವನು ಕ್ಷಮೆ ಕೇಳಿದರು ಮುಂದಿನ ಸೀಟಿನವನು ಬೈಗುಳಗಳನ್ನು ಗೊಣಗುತ್ತಲೇ ಇದ್ದ...
ನನ್ನ ಪಕ್ಕದವನಿಗೂ ರೇಗಿ..ನನ್ನನ್ನು ಸರಿಸಿ ದಾರಿ ಮಾಡಿಕೊಂಡು ಅವನನ್ನು ಎಳೆದಾಡಿದ..." ಏನೋ ಮರಾಯ ಗಾಯ ಆಗೋಯ್ತ ???    ಬಾ ಪ್ಲಾಸ್ಟರ್ ಹಾಕ್ತಿನಿ ಬಾರ್ಲ...ಎದ್ದೇಳೋ....ಮೇಲೆ...

ಎಂದು ರೋಷ ಬಂದವನಂತೆ ಅವನ ರಟ್ಟೆ ಇಡಿದು ಎಳೆಯುತ್ತ...ಅತ್ತಿಂದಿತ್ತ ಓಡಾಡಿ...ಭಸ್ಸಿನಲ್ಲಿದ್ದ...First aid box ಬಳಿ ಬಂದ...ಅದು ಲಾಕ್ ಆಗಿರುವುದನ್ನು ಗಮನಿಸಿ...ಕಂಡಕ್ಟರ್ರೆ...ತೆಗಿರ್ರಿ ಇದನ್ನ...ಆ ಬೋಳಿಮಗಂಗೆ ಪೆಟ್ಟಾಗಿ ರಕ್ತ ಸೋರ್ತೈತಂತೆ...ತೆಗಿರ್ರಿ... ಎಂದ

ಕಂಡಕ್ಟರ್ ವಾಸ್ತವವಾಗಿ ಮುಂದಿನ ಸೀಟಿನವನಿಗೆ ಏನು ಆಗದ ಕಾರಣ ದೈತ್ಯ ನ ಮಾತನ್ನು ಅಲಕ್ಷಿಸಿದರು....

ಆದರೆ ಅಷ್ಟಕ್ಕೆ ಬಿಡದ ಇವನು...First aid box ನ್ನು ಗುದ್ದಿ ಮುರಿಯಲು ಮುಂದಾಗಿ ಗುದ್ದಿ ಕೈ ಗಾಯ ಮಾಡಿಕೊಂಡ..... ಗಾಜು ಕೈ ಗೆ ಚುಚ್ಚಿ ರಕ್ತ ತೊಟ್ಟಿಕ್ಕಿತು...

ಈಗ ಹೇಳಿ ವಾಸ್ತವವಾಗಿ First Aid ಯಾರಿಗೆ ಮಾಡಬೇಕು...

ಸಂದೇಶ-
"ಕೋಪದ ಕೈಯಲ್ಲಿ ಬುದ್ದಿ ನೀಡಬೇಡಿ"

                 
                     ರಚನೆ
        ಶ್ಯಾಮ್ ಪ್ರಸಾದ್ ಭಟ್

Friday, March 1, 2019

        ನನ್ನೊಳಗಿಹನಾರು?




ಆತ್ಮವೋ ಪ್ರೇತಾತ್ಮವೋ ದೇಹತುಂಬಿ ಕೊಂಡಿದೆ
ರಕ್ತ ..ಚರ್ಮ..ಎಲ್ಲಾ ಸೇರಿ ದೇಹವೆನಿಸಿ ಕೊಂಡಿದೆ...
ವಿಜ್ಞಾನ ಹೇಳುವಂತೆ ಜೀವ ಕೋಶದ ದೇಹವೋ..
ಈ ಹೇಹ ಆತ್ಮ ತುಂಬಿದ ಭಾವವೋ...

ಬಿಡಿಸಿದಷ್ಟು ಸುರುಳಿ ಸುತ್ತಿ ಕಾಡುತಿದೆ...
ಬಿಡಿಸಲೋದವರ ಕೊರಳ ತುಂಬಾ ಉರುಳಾಗುತಿದೆ
ಆತ್ಮ ಪಡೆಯುವುದು ಆನಂದ
ಬಿಡಿಸಿಕೊಂಡಾಗಲೇ ಇಹ ಪರದ ಬಂಧ

ಇದು ಬಿಡಿಸಿದರೆ ತುಂಬಾ ಸರಳ
ಅದ ಬಿಡಿಸುವರೇ ವಿರಳ
ಮರಳ ಮನೆಯ ಮಾಡಿ ಆಸೆ ತುಂಬಾ ಬೇಡ ಮರುಳ

ತುಂಬ ದೀರ್ಘ ಆದಿ ಜಗದ ಕಾಲ
ಇಲ್ಲಿ ನೀನಿರೋದು ಸ್ವಲ್ಪ ಕಾಲ
ತಿಳಿದರು- ತಿಳಿಯದಿದ್ದರು  ಬದುಕುವ ಮಾರ್ಗ
ತಿಳಿಯದಿರೆ ಇಲ್ಲೇ ನರಕ ತಿಳಿದರೆ ಇಲ್ಲೇ ಸ್ವರ್ಗ
                     
                ರಚನೆ
      ಶ್ಯಾಮ್ ಪ್ರಸಾದ್ ಭಟ್