ನಾನು ನಿಮ್ಮ ಊರಿನ ರೈತ
ಗೌರವದಿ ಕರೆವರೆನ್ನ ಅನ್ನದಾತ
ನೆಚ್ಚಿ ಬದುಕಿಹೆ ನೇಗಿಲ
ಭೂಮಿಯ ಮಾಳಿಗೆ ಮುಗಿಲ
ಉತ್ತು ಬೆಳೆವೆ ಬೆಳೆಯ
ಕಿತ್ತೆಸೆದು ಬೇಡದ ಕಳೆಯ
ಹೇ ದೇವ ಸುರಿಸು ಭುವಿಗೆ ಮಳೆಯ
ನಾ ನಿನ್ನನ್ನೇ ನಂಬಿರುವ ಗೆಳೆಯ
ಹೆಸರಿಗೆ ನಾನಂತೆ ಈ ದೇಶದ ಬೆನ್ನೆಲುಬು
ಊರಿಗೆ ನನ್ನದಂತೆ ಬಡ ಕಸುಬು
ಭೇದ ಮಾಡದೆ ಉಣುವಿರಿ ನಾ ಕೊಟ್ಟ ಅನ್ನದಲ್ಲಿ
ಬೇದ ತೋರುವಿರೇಕೆ ನಾ ತೊಟ್ಟ ಬಟ್ಟೆಯಲಿ
ಯಾರೇನೇ ಹೊಗಳಲಿ ತೆಗಳಲಿ
ಉಳುವುದೇ ನನ್ನ ಕುಲಕಸುಬು
ಶತಮಾನಗಳು ಉರುಳಿದರು ನಾನೇ ದೇಶದ ಬೆನ್ನೆಲುಬು
ರಚನೆ
ಶ್ಯಾಮ್ ಪ್ರಸಾದ್ ಭಟ್
No comments:
Post a Comment