ಹೊರಟೆ ಹಿಡಿದು ಜೋಳಿಗೆ
ರಕ್ತಾಕ್ಷಿ ಆಗಸದಿ ರಮಿಸುತ್ತಿದ್ದ ಮುಂಜಾನೆ ಕಾಲ
ರಾತ್ರಿ ಕಳೆದು ಹಗಲು ಮೂಡುವ ಪುಣ್ಯಕಾಲ
ನಡೆದೆ ಸ್ಪರ್ಧೆಯಲಿ ಮುನ್ನಡೆಸುತ್ತ ನನ್ನ ಕಾಲ
ಹೊರಟದ್ದು ಎಲ್ಲಿಗೆ?
ಕೊಯ್ದು ತರಲು ಮಲ್ಲಿಗೆ
ಮಲ್ಲಿಗೆ ಬನವನೊಕ್ಕಿ ಮೆಲ್ಲಗೆ
ಕೊಯ್ದು ತುಂಬಿತು ನನ್ನ ಜೋಳಿಗೆ
ಹಿಂತಿರುಗುವಾಗಲೇ ಕರಗಿತ್ತು ಕರಿ ಮೋಡ
ದಾರಿಯಲ್ಲಿ ಜೊತೆಯಾದ ನಮ್ಮೂರ ಕರೀಗೌಡ
ನಮ್ಮನೆಯ ಗೌರಿ ಹಸು ಮೇವಿಗೆಂದು ಹೊರಟಿತ್ತು ಹೊಲದತ್ತ
ದೂರದಿಂದ ನನ್ನ ಕಂಡು ನಿಂತಿತು ನೋಡುತ್ತ ನನ್ನತ್ತ
ಗೌಡ ನಾನು ಇಬ್ಬರು ಜೊತೆಯಾಗಿ ಹೊರಟೆವು ಮನೆಯತ್ತ
ಬೆಳಗಿನ ಪೂಜೆಗೆಂದು ತಂದ ಮಲ್ಲಿಗೆ
ಹೆಣೆಯುತ್ತ ಕುಳಿತೆ ಮಲ್ಲಿಗೆಗೆ ಹಾಕಿ ದಾರದ ನುಲಿಗೆ
ಆ ದಿನ , ನುಲಿದ ಮಲ್ಲಿಗೆ ಹಾರ
ವಿಷಕಂಠಗಾಯಿತು ಚೆಂದದ ಕಂಠೀಹಾರ
ಹೊತ್ತಿರುವ ಜಗದ ಭಾರ
ಬೇಡಲು ಕಳೆವ ಮನದ ಭಾರ
ರಚನೆ
ಶ್ಯಾಮ್ ಪ್ರಸಾದ್ ಭಟ್