Sunday, February 4, 2024

ಕ್ಷಣ ಕ್ಷಣ ಬೇಕು ಶಿಕ್ಷಣ

 

ಕ್ಷಣ ಕ್ಷಣ ಬೇಕು ಶಿಕ್ಷಣ 


ಬೇವಿನಹಳ್ಳಿ ಎಂಬ ಪುಟ್ಟ ಗ್ರಾಮವಿತ್ತು ಅಲ್ಲಿ ರಾಮು ..ಭೀಮು..ದಾಮು ಎಂಬ ಮೂರು ಜನ ಪ್ರಾಣ ಸ್ನೇಹಿತರು ಇದ್ದರು ...ಎಲ್ಲರೂ ಬೇವಿನಹಳ್ಳಿಯ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದರು..

ರಾಮು ಬೆಳಗ್ಗೆ ಬೇಗ ಎದ್ದು ಭಿಮುವಿನ ಮನೆಗೆ ಹೋಗಿ ಲೋ ಬೀಮ ...ಲೋ ಭೀಮಾ ಹೊರ್ಟೇನೋ ಲೇಟಾಗುತ್ತೇ ಬೇಗ ಬಾರೋ ಎಂದು ಭೀಮುವಿನ ಮನೆ ಬಳಿ ಬಂದು ಕೂಗಲಾರಂಭಿಸಿದ .....ಭೀಮ ನ ಅಮ್ಮ ಅ ರಾಮುವನ್ನ ನೋಡಿ ಕಲಿ ಇವತ್ತು ಶನಿವಾರ ಮಾರ್ನಿಂಗ ಕ್ಲಾಸ್ ಅನ್ನೋದನ್ನು ಮರ್ತು ಮಲಗಿದ್ಯಲ್ಲ ಆ ರಾಮು ನೋಡು ಬೇಗ ಹೊರಟು ಬಂದಿದ್ದಾನೆ ಎಂದೊಡನೆ ಭೀಮಾ ನಕ್ಕು ಅವನು ಇವತ್ತು ಮಾತ್ರ ಬೇಗ ಹೊರಟು ಬರೋದು ಬಿಡಮ್ಮಾ ಎಂದು ...ಅಮ್ಮ ನಿಗೆ ಹೋಗ್ ಬರ್ತೀನಿ ಅಮ್ಮಾ ಎಂದು ಹೇಳಿ ರಾಮು ಜೊತೆ ಶಾಲೆಗೆ ಹೊರಟರು ದಾಮು ದಾರಿಯಲ್ಲಿ ಜೊತೆಯಾದನು...

ರಾಮು ಶಾಲೆಗೆ ಬರುತ್ತಿದ್ದದು ಶನಿವಾರ ಮಾತ್ರ ಅದಕ್ಕೂ ಕಾರಣವಿತ್ತು ಶನಿವಾರ ವೆಜಿಟೇಬಲ್ ಬಾತ್ ... ಚಿತ್ರಾನ್ನ ...ಮದ್ಯಾಹ್ನ ಬಿಸಿ ಊಟಕ್ಕೆ ಮಾಡುತ್ತಿದ್ದರು.

ಹಾಗಾಗಿ ತಪ್ಪದೇ ಶನಿವಾರ ಬರುತ್ತಿದ್ದ ....ಬಾನುವಾರ  ಆಟದಲ್ಲೇ ದಿನ ಕಳೆಯುತಿದ್ದ...ಭೀಮ ಮತ್ತು ದಾಮು ಆಟ ಮುಗಿಸಿ ಮೇಷ್ಟ್ರು ಭಯಕ್ಕೆ ಓದೋದಕ್ಕೆ ಕೂರುತಿದ್ದರು....ಆದರೆ ರಾಮು ಮಾತ್ರ ಮೇಷ್ಟ್ರು ಭಯವಿಲ್ಲದಿರುವುದರಿಂದ ಓದುವುದರ ಕಡೆ ಗಮನ ಕೊಡುತ್ತಿರಲಿಲ್ಲ.....ಬತ್ತವನ್ನು ಅಕ್ಕಿಯಾಗಿಸುವ ರೇಸ್ ಮಿಲ್ ನಲ್ಲೇ ಹೆಚ್ಚಿನ ಕಾಲ ಕಳೆಯುತಿದ್ದ...ಕಾಲ ಕಳೆದಂತೆ ಅಲ್ಲೇ ಕಸ ಗುಡಿಸುವ ಕೆಲಸಕ್ಕೆ ಸೇರಿದ ....ದಿನಗಳು ತಿಂಗಳಾದವು ತಿಂಗಳುಗಳು ವರ್ಷವಾದವು ಕಸಗುಡಿಸುತ್ತಿದ್ದ ರಾಮು ಮೂಟೆ ಹೊರುವ ಕೆಲಸ ಮಾಡುತ್ತ ಅಲ್ಲೇ ಜೀವನ ಕಟ್ಟಿಕೊಂಡ ..

  ಸಂಬಳದ ದಿನ ಸಾಹುಕಾರ್ರು ನೀಡಿದ 4000 ರೂಗಳನ್ನ ಬೇವಿನಹಳ್ಳಿಯ ಪಕ್ಕದ ಊರಾದ ಸೋಮನಹಳ್ಳಿಯ ಬ್ಯಾಂಕಿಗೆ ಹೋಗಿ ಅಕೌಂಟ್ ಗೆ ಹಣ ಕಟ್ಟಲು ಚಲನ್ ಪಡೆದು ಅಕ್ಕ ಪಕ್ಕ ನೋಡಿದ ಎಲ್ಲರೂ ಅವರ ಪಾಡಿಗೆ ಅವರ ಚಲನ್ ಬರೆಯುವುದರಲ್ಲಿ ಮಗ್ನರಾಗಿದ್ದರು ಅವರ  ಹತ್ತಿರ ಹೋಗಿ ಸ್ವಲ್ಪ ಈ ಚಲನ್ ಬರ್ತಿ ಮಾಡಿಕೊಡಿ ಎಂದ ಆಗ ಚಲನ್ ಬರ್ತಿ ಮಾಡುತ್ತಿದ್ದ ವ್ಯಕ್ತಿ  ಹೇ ಈಗ ಆಗಲ್ಲ ಕಣಪ್ಪ ಬೇರೆ ಯಾರನ್ನಾದ್ರು ಕೇಳು ...ಎಂದು ಗದರಿದ ...ಆಫಿಸರ್ ಗಳನ್ನ ಕೇಳಿದರೆ ನಮ್ಗೇನು ಅದೇ ಕೆಲಸ ನಾ ಯಾರತ್ರ ಆದ್ರು ಬರುಸ್ಕೋ ಹೋಗಪ್ಪ ಎನ್ನುತ್ತಿದ್ದರು...

ಬೇಸರದಿಂದ ...ಆಲ್ಲೇ ಜೋಡಿಸಿದ್ದ ಕುರ್ಚಿ ಮೇಲೆ ಕುಳಿತ ....ಹಿಂದೆಯಿಂದ ಹೆಗಲಮೇಲೆ ಕೈ ಇಟ್ಟು ರಾಮು ಆ ಚಲನ್ ಕೊಡು ಎಂದ ಧ್ವನಿ ಕೇಳಿಸಿತು ರಾಮು ತಿರುಗಿ ನೋಡಿದ...ಅರೇ ಭೀಮ  ಅವರೇ ಯಾವಾಗ ಬಂದ್ರಿ  ಎಂದ ಏನೋ ರಾಮು ಬನ್ನಿ ಹೋಗಿ ಅಂತ ಮರ್ಯಾದೆ ಕೊಡ್ತಿದಿಯಾ ? ಮರ್ಯಾದೆ ನಿನಗೆ ಕೊಡ್ಲಿಲ್ಲ ಅಂದ್ರು ನೀನು ದೊಡ್ಡ ಊರಲ್ಲಿ ದೊಡ್ಡ ಸಾಹೇಬ ಆಗಿದಿರಾ ಆ ಸ್ಥಾನಕ್ಕಾದರೂ ಮರ್ಯಾದೆ ಕೊಡ್ಲೇಬೇಕಲ್ವ ....ನಿನ್ನ ಹತ್ರ ನಾನು ಸಾಮಾನ್ಯ ಭೀಮ ಕಣೋ ಎಂದು ತಬ್ಬಿಕೊಂಡ....ರಾಮು ಕಣ್ಣೊರೆಸಿಕೊಂಡು ಈ ಚಲನ್ ಸ್ವಲ್ಪ ಬರ್ತಿ ಮಾಡಿಕೊಡು ಎಂದು ಭೀಮನ ಕೈಗಿಟ್ಟ... ಬ್ಯಾಂಕಿನ ಕೆಲಸ ಮುಗಿಸಿಕೊಂಡು ರಾಮು ಭೀಮನ ಕಾರಿನಲ್ಲಿ ಊರಿಗೆ ಹೋದ....ರಾಮುವಿನ ಕೆಲಸ ಚಿಕ್ಕದಾದರೂ ಚೊಕ್ಕದಾದ ಬದುಕು ಕಟ್ಟಿಕೊಂಡ ಆದರೆ ಅಕ್ಷರ ಕಲಿಯುವ ಸಮಯದಲ್ಲಿ ಮನಸಿಟ್ಟು ಕಲಿತಿದ್ದರೆ ಬೇರೆಯವರಲ್ಲಿ ಚಲನ್ ಭರ್ತಿ ಮಾಡಿಸಲು ಪರದಾಡಬೇಕಿರಲಿಲ್ಲ...ಹಾಗಾಗಿ ಬದುಕಿನಲ್ಲಿ ಓದು ಬಹಳ ಮುಖ್ಯ ....ಓದುವ ಕಾಲದಲ್ಲಿ ಕಾಲ ಹರಣ ಮಾಡಿದರೆ ...ಕೂತು ತಿನ್ನುವ ಕಾಲದಲ್ಲಿ ತುತ್ತು ಅನ್ನಕ್ಕೂ ಪರದಾಡುತ್ತಲೇ ಇರಬೇಕಾಗುತ್ತದೆ....


      ರಚನೆ 

ಶ್ಯಾಮ್ ಪ್ರಸಾದ್ ಭಟ್ ...

No comments:

Post a Comment