ಸಮಯ ಸುಮಾರು ಬೆಳಗ್ಗೆ ಹನ್ನೊಂದು ಮೈಸೂರಿಗೆ ಬಂದು ಅದಾಗಲೇ ಎರಡು ವಾರ ಕಳೆದಿತ್ತು....ಇಂದು ಬೆಳಗ್ಗೆ ಮೊದಲೇ ನಿರ್ಧರಿಸಿದಂತೆ ಊರಿಗೆ ಹೊರಡುವ ಸಿದ್ಧತೆ ಮಾಡಿಕೊಂಡು ನನ್ನೆಲ್ಲ ಲಗ್ಗೇಜ್ ಪ್ಯಾಕ್ ಮಾಡಿಕೊಂಡು ...ಬಿ ಎಂ ಹೆಚ್ ಬಸ್ ಸ್ಟಾಪ್ ತಲುಪಿದೆ...ಅಲ್ಲೇ ಕೆಲಸದ ನಿಮಿತ್ತ ಬಂದಿದ್ದ ಗೆಳೆಯ ಬಹಳ ದಿನಗಳ ನಂತರ ಸಿಕ್ಕ ಒಂದು ನಾಲ್ಕು ಮಾತು ...ಒಂದು ಕಪ್ ಟೀ ಮುಗಿಸಿ...ಇಬ್ಬರೂ ಹೊರಟೆವು ....ನಾನು ನಮ್ಮೂರಿನ ಕಡೆಗೆ ...ಅವನು ಅವನೂರಿನ ಕಡೆಗೆ ಇಬ್ಬರದು ಮಾರ್ಗ ಬೇರೆ...
ಸ್ವಲ್ಪ ಹೊತ್ತು ಕಾಯ್ದ ನಂತರ ನನ್ನೂರಿಗೆ ಹೋಗುವ ಬಸ್ ಬಂತು ಲೆಗ್ಗೆಜ್ ಹಿಡಿದು ಪ್ರಯಾಸದಿಂದ ಬಸ್ ಹತ್ತಿದೆ....ಮೂರು ಸೀಟಿನ ದೊಡ್ಡ ಸೀಟು ಒಂದರಲ್ಲಿ ನಾನು ..ಇನ್ನೊಂದು ಸೀಟಲ್ಲಿ ಲೆಗ್ಗೇಜ್ ಇಟ್ಟು ಕುಳಿತೆ...
ಮುಂದಿನ ಸ್ಟಾಪ್ ನಲ್ಲಿ ತುಂಬಾ ಜನ ಬಸ್ ಹತ್ತಿದರು .ಲಗ್ಗೇಜ್ ಸೀಟಿನ ಮೇಲೇ ಇದ್ದರೇ....ಕಂಡಕ್ಟರ್ ಕಣ್ಣಿಗೆ ಬಿದ್ದರಂತು ಮುಗೀತು ಎಂದು...ನನ್ನ ಪಕ್ಕದ ಸೀಟ್ ನಲ್ಲಿ ಇಟ್ಟಿದ್ದ ಲಗ್ಗೇಜ್ ತೆಗೆದು ಮೇಲಿನ ಲಗ್ಗೇಜ್ ಬಾಕ್ಸನಲ್ಲಿಟ್ಟು....ಕುಳಿತೆ...
ಹತ್ತಿದವರಲ್ಲಿ ಒಂದು ಹುಡುಗಿ ನನ್ನ ಪಕ್ಕದ ಸೀಟಿನಲ್ಲಿ ಬಂದು ಕುಳಿತಳು.....ಟಿಕೇಟ್ ತೆಗೆದು ಕೊಳ್ಳುವ ಮುನ್ನ ಸ್ಯಾನಿಟೈಸರ್ ಹಾಕಿ ಕೈ ವಾಶ್ ಮಾಡಿದಳು....ಮತ್ತೆ ಗ್ಲೌಸ್ ಧರಿಸಿ ...ಟಿಕೇಟ್ ಗೆ ಹಣ ಕೊಟ್ಟು ..ಟಿಕೆಟ್ ಹಾಗೂ ಚಿಲ್ಲರೆ ಪಡೆದು ಪಡೆದ ಚಿಲ್ಲರೆ ಮೇಲೆ ಸ್ಯಾನಿಟೈಸರ್ ಸ್ಪ್ರೇ ಮಾಡಿ ಜೋಬಿನಲ್ಲಿಟ್ಟಳು....ಇಷ್ಟಾದ ಮೇಲೂ...ಈಗಾಗಲೇ ಧರಿಸಿದ್ದ ಮಾಸ್ಕ್ ಮೇಲೊಂದು ಮಾಸ್ಕ್ ಧರಿಸಿದಳು...ನಾನು ಇದಕ್ಕೆಲ್ಲ ಮೂಕ ಸಾಕ್ಷಿಯಂತೆ ನೋಡುತ್ತ ಎಂತಹ ಸ್ವಚ್ಚತೆ...ಎಂದು ಕೊಂಡು ನಿದ್ದೆ ಬರುವಂತಾದ್ದರಿಂದ ಕಿಟಕಿ ಬಳಿ ಸೀಟಲ್ಲಿ ಕುಳಿತಿದ್ದರಿಂದ ಕಿಟಕಿ ಒರಗಿ ಮಲಗಿದೆ....
ಒಂದು ಗಂಟೆ ಕಳೆದಿರ ಬಹುದು...ನನ್ನ ಹೆಗಲನ್ನು ಮುಟ್ಟಿ ಯಾರೋ ಹೆಲ್ಲೋ ಹೆಲ್ಲೋ...ಎಂದಂತಾಗಿ ಎಚ್ಚರಗೊಂಡೆ ....ನೋಡಿದರೆ ಪಕ್ಕದಲ್ಲಿದ್ದ ಹುಡುಗಿ....
ಏನು ಎಂದೆ ...ಸ್ವಲ್ಪ ಕಿಟಕಿ ಗ್ಲಾಸ್ ತೆಗಿತೀರಾ ....ತುಂಬಾ ಶೆಕೆ ಅಲ್ವ ಸೋ ಅಂದ್ಲು ಸರಿ ಎಂದು ....ಕಿಟಕಿ ಗ್ಲಾಸ್ ಸರಿಸಿದೆ ...ಅದೆಲ್ಲಿತ್ತೋ.. ಬಸ್ ತುಂಬಾ ಸ್ಪೀಡ್ ನಲ್ಲಿದ್ದರಿಂದ ಬಸ್ ಕಿಟಕಿಯಿಂದ ಗಾಳಿ ಜೋರಾಗಿ ನುಗ್ಗುತಿತ್ತು ಕಿಟಕಿ ತೆಗೆದೊಡನೆ ಹುಳುವೊಂದು ನನ್ನ ಕಣ್ಣಿಗೆ ಬಡಿಯಿತು..
ನಾನು ಒಂದು ಕಣ್ಣು ಬಿಡಲಾರದೆ...ಕಣ್ಣು ಮುಚ್ಚಿಕೊಂಡೆ....ಪಕ್ಕದಲ್ಲಿದ್ದವಳು ...ಅಯ್ಯೋ ಏನಾಯ್ತು ಸರ್ ಎಂದಾಗ ಕಣ್ಣಿಗೆ ಹುಳ ಬಡೀತು ...ಏನಿಲ್ಲ ಸರಿ ಹೋಗುತ್ತೆ ಬಿಡಿ ಎಂದೆ ....ಎಲ್ಲಿ ತೋರ್ಸಿ ಎಂದು ಕಣ್ಣಿಗೆ ಗಾಳಿ ಊದಿದಳು...ಸಿಕ್ಕಿಕೊಂಡ ಹುಳ ಹೊರ ಬಂತಾದರು...ನನಗೆ ಮುಜುಗರವೆನಿಸಿತು...ಆಕೆ ಮುಖಕ್ಕೆ ಹಾಕಿಕೊಂಡಿದ್ದ ಮಾಸ್ಕ್ ತೆಗೆದು ಕಣ್ಣಿಗೆ ಗಾಳಿ ಊದಿದಳು ನಾನು ಆಕೆ ಮುಖವನ್ನು ನೋಡಲು ಕಣ್ಣು ತುಂಬಾ ಕಣ್ಣೀರು ತುಂಬಿ ದೃಷ್ಟಿ ಅಸ್ಪಷ್ಟವಾಗಿದ್ದರಿಂದ ಆಕೆಯ ಮುಖ ನೋಡುವಷ್ಟರಲ್ಲಿ ಮಾಸ್ಕ್ ಧರಿಸಿದಳು... ...ನಾನು ಸ್ವಲ್ಪ ಸುಧಾರಿಸಿಕೊಂಡು ಆಕೆಗೆ ಥ್ಯಾಂಕ್ಯು ಹೇಳಿ ನಿದ್ದೆಗೆ ಜಾರಿದವನಂತೆ ಮತ್ತೆ ಕಿಟಕಿ ಒರಗಿ ಮಲಗಿದೆ...
ಹಾಗೇ ನಿದ್ರೆ ಬಂದು ನಿಜವಾಗಿಯೂ ಮಲಗಿದೆ...
ಸ್ವಲ್ಪ ಹೊತ್ತಿನ ನಂತರ ಬಸ್ ಬ್ರೇಕ್ ಹಾಕಿದ್ದರಿಂದ ಎಚ್ಚರಗೊಂಡೆ ಕಿಟಕಿ ಇಣುಕಿ ಬಸ್ ಯಾವ ಊರಿನಲ್ಲಿದೆ ಎಂದು ನೋಡಿ ....ಪಕ್ಕದ ಸೀಟು ನೋಡಿದೆ...ಅಬ್ಬಾ ! ಇಳಿದಿಲ್ಲ...ಸೀಟನ್ನು ಬದಲಿಸಿಲ್ಲ...ಪಕ್ಕದಲ್ಲೇ ಕುಳಿತಿದ್ದಳು....ಹಾಗೇ ಸೀಟು ಒರಗಿ ನಿದ್ರೆ ಮಾಡುತಿದ್ದಾಗ ಅವಳನ್ನು ಗಮನಿಸಿದೆ .. ಕಣ್ಣಿಗೆ ಕನ್ನಡಕ ಹಾಕಿದ್ದಳು...ಮುಂದಲೆ ಕೂದಲು ಅರ್ಧ ಮುಖವನ್ನು ಮುಚ್ಚಿತ್ತು...ಕಿಟಕಿಯಿಂದ ಬೀಸುತಿದ್ದ ಗಾಳಿಗೆ ಹಾರುತ್ತ ಆಗಾಗ ಸುಂದರ ಮೊಗದ ದರ್ಶನ ಮಾಡಿಸುತಿತ್ತು....ಆದರೆ ಮುಖದ ಅರ್ಧಕ್ಕೆ ಹಾಕಿದ್ದ ಮಾಸ್ಕ್ ಮುಖವನ್ನು ಮುಚ್ಚಿತ್ತಾದರು....ಕಣ್ಣುಗಳು ಆಕೆಯ ಅಂದವನ್ನು ವರ್ಣಿಸುತಿದ್ದವು....ಆಗ ಕಿಟಕಿಯಲ್ಲಿ ಬಂದ ಚಿಪ್ಸ್ ಮಾರುವ ಅಜ್ಜನನ್ನು ಕರೆದು ಚಿಪ್ಸ್ ತೆಗೆದುಕೊಂಡಳು....ನಾನೂ ಕೂಡ ಒಂದು ಚಿಪ್ಸ್ ಪೊಟ್ಟಣ ತೆಗೆದುಕೊಂಡೆ.....ಬಸ್ ಸ್ಟಾಪ್ ನಿಂದ ಬಸ್ ಹೊರಟಿತು....ಪಕ್ಕದಲ್ಲಿದ್ದ ಆಕೆ ಚಿಪ್ಸ್ ಪೊಟ್ಟಣ ತೆಗೆದು ಮುಖದ ಮಾಸ್ಕ್ ಸರಿಸಿ ಚಿಪ್ಸ್ ತಿನ್ನಲು ಶುರು ಮಾಡಿದಳು....ಅಷ್ಟು ಹೊತ್ತಿನಿಂದಾಗದ ಮುಖ ದರ್ಶನ ಈಗ ಆಯ್ತು ತಕ್ಷಣ ತಿರುಗಿ ನೋಡುವುದಾದರೂ ಹೇಗೆ....ಹಾಗಾಗಿ ಸುಮ್ಮನೆ ಕುಳಿತಿದ್ದೆ...ಚಿಪ್ಸ್ ತಿಂದು ಮುಗಿಸಿದ ಆವಳು....ಸ್ವಲ್ಪ ಕಿಟಕಿ ತೆಗಿತೀರಾ? ಚಿಪ್ಸ್ ಪ್ಯಾಕ್ ಹೊರಗೆ ಬಿಸಾಕ್ಬೇಕು ಎಂದಳು....ಆ ಪ್ಯಾಕ್ ಕೊಡಿ ಎಂದು ತೆಗೆದುಕೊಂಡ್ ಬ್ಯಾಗ್ ನಲ್ಲಿ ಇರಿಸಿದೆ ....ಯಾಕೆ ಕಿಟಕಿ ತೆಗುದ್ರೆ ಮತ್ತೆ ಹುಳ ಕಣ್ಣಿಗೆ ಬೀಳುತ್ತೆ ಅಂತ ಭಯಾನ ಎಂದು ನಕ್ಕಳು....ನಾನೂ ನಗುತ್ತಾ ಹಾಗಲ್ಲ ವಿಧ್ಯಾವಂತರಾಗಿ ನಾವು ಸ್ವಚ್ಛತೆ ಬಗ್ಗೆ ಗಮನ ಕೊಡ್ಬೇಕಲ್ವ ಎಂದೆ... ಹಾಗೇನಾದ್ರು ಹುಳ ಬಿದ್ರೆ ತೆಗೆಯೋಕೆ ನೀವಿದ್ದೀರಲ್ಲಾ ಎಂದು ನಾನು ನಗು ಬೀರಿದೆ....
ಹೋ ಸ್ಮಾರ್ಟ್ ಆನ್ಸರ್ ಎಂದಳು ....ಮಂದಹಾಸ ಬೀರಿದೆ...ನಿಮ್ ಹೆಸ್ರು ಎಂದಳು....ರಾಮ್ ಎಂದು ಪರಿಚಯಿಸಿಕೊಂಡೆ ಅವಳು ಪ್ರಿಯ ಎಂದಳು....ಅವಳು ಹೇಳಿದ್ದು ಅವಳ ಹೆಸರು ಎಂಬುದು ಗೊತ್ತಿದ್ದರೂ....ತಮಾಷೆಗೆ ನನ್ನ ಕರುದ್ರಾ ಎಂದೇ...ಹೋ ಯು ಹ್ಯಾವ್ ನೈಸ್ ಸೆನ್ಸ್ ಆಫ್ ಹ್ಯೂಮರ್ ಎಂದು ನಗುತ್ತಾ...ಹಾಗೇನಾದ್ರು ಕರುದ್ರೆ ಪ್ರಿಯ ಅನ್ನಲ್ಲ ಪ್ರಿಯತಮ ಅಂತ ಕರಿಬೇಕಲ್ವ ಎಂದಳು....ಇಬ್ಬರೂ ನಗುತ್ತಾ ಮುಖ ನೋಡಿಕೊಂಡೆವು....
ಎಲ್ಲಿ ನೀವು ಇಳಿಯೋದು ಎಂಬ ಧ್ವನಿ ಕೇಳಿಸಿತು...ನಾನು ನರಸೀಪುರ ಎಂದೆ....ಹೌದಾ...ಎಂದು ಮುಂದುವರೆದ ಮಾತು ನರಸೀಪುರದವರೆಗೆ ಮಾತು ಮುಂದುವರೆಯಿತು...ನಿಮ್ ಜೊತೆ ಮಾತಾಡುತ್ತಾ ಟೈಂ ಹೋಗಿದ್ದೇ ಗೊತ್ತಾಗ್ಲಿಲ್ಲ ನೋಡಿ ಎಂದಳು ನನಗೂ ಕೂಡ ಎಂದೇ....
ಸರೀ ಬರ್ತೀನಿ .. ನೈಸ್ ಟು ಮೀಟ್ ಯೂ ಎಂದು ಹೊರಟಳು....( ಇದು ಕಾಲ್ಪನಿಕ ಕಥೆ)
ಬಸ್ಸು ...ರೈಲು ಹೀಗೇ ಸಾರ್ವಜನಿಕ ಸಾರಿಗೆಗಳಲ್ಲಿ ದಿನನಿತ್ಯ ಓಡಾಡುವಾಗ ಹಲವರು ಬದುಕಿನಲ್ಲಿ ಭೇಟಿಯಾಗುತ್ತಾರೆ ಅಜ್ಜಂದಿರು...ಅಜ್ಜಿಯಂದಿರು ಅವರೇ ಮಾತು ಶುರು ಮಾಡಿ ಹೇಳುವ ಬದುಕಿನ ಪಾಠಗಳು....ಮುಂದಿನ ಸೀಟಿನಲ್ಲಿ ಕುಳಿತು ಹಿಂದಿನ ಸೀಟಿನವರ ಮೇಲೆ ಮಗು ಬೀರುವ ನಗು ...ಮುಂದಿನ ಬಸ್ ಸ್ಟಾಪಿನಲ್ಲಿ ಬಸ್ ಹತ್ತುವ ಇಷ್ಟ ಪಟ್ಟವರಿಗಾಗಿ ಬಸ್ಸಿನಲ್ಲಿ ಪಕ್ಕದ ಸೀಟು ಕಾಯ್ದಿರಿಸಿ ಅವರೊಂದಿಗೆ ಮಾತನಾಡುತ್ತಾ ಮಾಡುವ ಪ್ರಯಾಣ... ಹೀಗೇ ಬದುಕಿನ ಕೆಲವು ಅನಿರೀಕ್ಷಿತ ಭೇಟಿ ಕೆಲವು ಸಂತಸದ ಕ್ಷಣಗಳಿಗೆ ಸಾಕ್ಷಿಯಾಗುತ್ತದೆ... ಎಷ್ಟು ದಿನ ಬದುಕಿನ ನೋವುಗಳನ್ನೇ ...ಕಷ್ಟಗಳನ್ನೇ ನೆನೆದು ಕೊರಗುತ್ತೀರ ಬದುಕಿನ ಪ್ರತಿಕ್ಷಣವನ್ನು ಆನಂದಿಸುತ್ತಾ ಬದುಕುವುದನ್ನು ನಾವು ಕಲಿಯಬೇಕು....
ರಚನೆ
ಶ್ಯಾಮ್ ಪ್ರಸಾದ್ ಭಟ್
No comments:
Post a Comment