Wednesday, August 3, 2022

ಚಿಗುರು - ಬೇರು

 



ಬೀಜವಾಗಿ ಅಮ್ಮನಿಂದ ಬೇರ್ಪಟ್ಟು

ಬಿದ್ದೆ ಭೂಮಿಗೆ ಗಾಳಿಯಿಂದ ತೂರಲ್ಪಟ್ಟು

ಬಿದ್ದಲ್ಲೇ ನೆಲೆ ನಿಂತೆ ಬೇರು ಬಿಟ್ಟು

ಮಳೆ ಬಿಸಿಲ ಗಾಳಿಯಲಿ ನಿಂತೆ ಮೈ ಛಳಿಯ ಬದಿಗಿಟ್ಟು 


ವಸಂತ ಕಳೆದಂತೆ ಚಿಗುರಿತೊಂದು ಆಸೆ

ಆಸೆ ಮೊಗ್ಗಾಗಿ ಅರಳಿತು ಹೂವಾಗಿ

ಇನ್ನೆರಡು ದಿನಗಳಲ್ಲಿ ಹೂ ಕರಗಿ ಕಾಯ‍ಾಗಿ

ನನ್ನಾಸೆಯ ಕೂಸು ನಲಿಯುತಿತ್ತು ಹಣ್ಣ‍ಾಗಿ 

ಅಷ್ಟಕ್ಕೆಲ್ಲ ಅವಕಾಶವಿಡದೆ ನನ್ನಾಸೆ ಹೂವನು ಕಿತ್ತಳು ಹೆಣ್ಣಾಗಿ


ಮುಡಿಯಲಿ ಮೂರು ತಾಸು ಮಿಂಚಿಸಲು

ಕಿತ್ತಳು ನನ್ನ ಕರುಳ ಬಳ್ಳಿಯ, ತನ್ನೊಲುಮೆಗಾರನ ಮೆಚ್ಚಿಸಲು

ಅರಿವರೆಂದು ನನ್ನೊಡಲ ಸಂಕಟವ 

ಬಿಡುವರೆಂದು ಮನುಕುಲದ ಲಂಪಟವ


        ರಚನೆ 

ಶ್ಯಾಮ್ ಪ್ರಸಾದ್ ಭಟ್




No comments:

Post a Comment