ಅರಿವು
ಟೆರೇಶಿಯನ್ ವೃತ್ತದಿಂದ ನನ್ನ ಕಾಲೇಜಿಗೆ...5 ರುಪಾಯಿ ಟಿಕೇಟ್
ಬಸ್ ಹತ್ತಿದ ಹತ್ತು ನಿಮಿಷದಲ್ಲಿ ನನ್ನ ಕಾಲೇಜು ತಲುಪುತ್ತೇನೆ....
ಪಾಸ್ ಇಲ್ಲದ ಕಾರಣ ಟಿಕೆಟ್ ತೆಗೆದು ಕೊಳ್ಳೋಣ ಎಂದು 5 ರುಪಾಯಿ ನೀಡಿದೆ...
5 ರುಪಾಯಿ ತೆಗೆದು ಜೋಬಿಗಿಳಿಸಿದ ಕಂಡಕ್ಟರ್ ಟಿಕೆಟ್ ಕೊಡದೆ ಮುಂದಕ್ಕೆ ಸಾಗಿದರು....
ಸಾರ್ ಟಿಕೆಟ್
ಎಂದೆ...
ಹೇ...ಮುಂದಿನ್ ಸ್ಟಾಪ್ ಅಲ್ವ ಬಿಡಿ ಎಂದ...
ಸರಿ ಎಂದು ಸುಮ್ಮನಾದೆ....
ಹೀಗೆ ಎರಡು ದಿನಗಳಾಯಿತು ....ಆತ್ಮೀಯತೆ ಬೆಳೆಸಿಕೊಂಡು ನನ್ನ ಗುರುತಿಟ್ಟುಕೊಂಡಿದ್ದ....
ನಂತರ ಒಂದು ದಿನ.....ಅದೇ ಬಸ್ಸು ಅವನೇ ಕಂಡಕ್ಟರ್ .....ಟಿಕೆಟ್ ಎಂದ
5 ರುಪಾಯಿ ಚಿಲ್ಲರೆ ಇಲ್ಲ....ಎಂದೆ...ಮುಂದಿನ್ ಸ್ಟಾಪ್ ಅಲ್ವ ಬಿಡಿ ಸಾರ್ ಎಂದೆ.....
ಅದ್ಹೇಗ್ ಆಗತ್ತೆ ಟಿಕೆಟ್ ತಗೊಳ್ದೇ ಬಸ್ ಲಿ ಪ್ರಯಾಣಿಸೋದ್ ಅಪರಾಧ...ಎಂದು ಬರೆದಿದ್ದ ಬೋರ್ಡ್ ತೋರಿಸಿದ...
ಸಾರ್ ದುಡ್ಡು ಕೊಟ್ರು ಟಿಕೆಟ್ ಕೊಡ್ತಿರ್ಲಿಲ್ವಲ ಅದೇನು ಸಾರ್
....ಅಪರಾಧ ಅಲ್ವ??? ಎಂದೆ..
ಪೆಚ್ಚಾಗಿ ನಿಂತ...
5 ರುಪಾಯಿ ಕೊಟ್ಟು ಟಿಕೇಟ್ ಪಡೆದು ನನ್ನ ಸ್ಟಾಪ್ ನಲ್ಲಿ ಇಳಿದು...ಮುಂದೆ ಸಾಗಿದೆ...
ರಚನೆ
ಶ್ಯಾಮ್ ಪ್ರಸಾದ್ ಭಟ್
No comments:
Post a Comment