ಒಂದು ರಜಾದಿನದ ಸಮಯ
ನಾನು ನನ್ನ ಗೆಳೆಯ ಹೀಗೆ ಹರಳಿಕಟ್ಟೆ ಮೇಲೆ ಹರಟುತ್ತ ಕುಳಿತಿದ್ದಾಗ....
ಗೆಳೆಯ ಹೀಗಂದ....
ಈಗ ಒಬ್ಬ ಯುವಕ ಅರ್ಹತೆಗೆ ತಕ್ಕ ಉದ್ಯೋಗವಿಲ್ಲದೆ...ಇಷ್ಟವಿಲ್ಲದ ಉದ್ಯೋಗ ಮಾಡಲಾರದೆ ಅವನು ಅವನ ಗೆಳೆಯನೊಂದಿಗೆ ಹೇಳಿಕೊಳ್ಳುವ ದುಃಖದ ಮಾತು....
ಹಾಗೂ
ಇತ್ತ ಕೈ ಲಾಗದ ವೃದ್ದ ತಂದೆಯನ್ನು ತನ್ನ ಮಕ್ಕಳು ಸರಿಯಾಗಿ ನೋಡಕೊಳ್ಳದಿದ್ದಾಗ ಅ ವೃದ್ಧನ ಮನೋಭಾವದಲ್ಲಿ ಬರುವ ಭಾವದ ಮಾತುಗಳನ್ನು
ಒಂದು ಪದದಲ್ಲಿ ಹೇಗೆ ಹೇಳಬಹುದು...ಎಂದು ಕೇಳಿದ
ಏನೋ ಇದು ಗೊಂದಲದ ಪ್ರಶ್ನೆ ಎಂದೇ....
ಹಾಗೇ ಯೋಚಿಸಿತ್ತಿರುವಾಗ ಕಣ್ಣು ಮುಂದೆ ಬಸ್ ಸ್ಟ್ಯಾಂಡ್ನಲಿ ಮೂಲೆಯ ಬೆಂಚು ಕಲ್ಲಿನ ಮೇಲೆ ಮಲಗಿ ಗೊಣಗುತ್ತ ಮಕ್ಕಳನ್ನು ಶಪಿಸುತಿದ್ದ ಮುದುಕಿಯ ಮುಖ ಕಣ್ಮುಂದೆ ಬಂದಂತಾಯಿತು....
ನಿರುದ್ಯೋಗಿಯ ಭಾವ ವನ್ನು ಊಹಿಸಲು ಅಸಾದ್ಯವೆನಿಸಲಿಲ್ಲ....
ಹೀಗೆ ತುಂಬಾ ಸಮಯ ಯೋಚನಾ ಮಗ್ನ ನಾದಾಗ
ಆಗ ಥಟ್ಟನೆ ಹೊಳೆದ ಸಾಲಿದು...
"ಮತ್ತೆ ಮಗುವಾದೆ
ಹೆತ್ತವರಿಗೆ ನಾ ಹೊರೆಯಾದೆ..."
ರಚನೆ
ಶ್ಯಾಮ್ ಪ್ರಸಾದ್ ಭಟ್
No comments:
Post a Comment