Tuesday, May 14, 2019

ಸ್ಕೂಲ್ ಮಾಸ್ಟರ್



ಇಂದು ಬೆಳಗ್ಗೆಯೇ...ನನ್ನ ಗೆಳೆಯ ರಾಹುಲ್ ನ ಫೋನ್ ಬಂತು...
ಏನೋ ಊರಿಗ್ ಬಂದಿದಿಯಂತೆ ಫೋನ್ ಕೂಡ ಮಾಡಿಲ್ಲ..ನೀನು..

ಹು ಕಣೋ ನೆನ್ನೆ ಬಂದೆ ...

ನಮ್ಮ ಮನೆಗೆ ಜಿಯೋ ನೆಟ್‌ವರ್ಕ್ ಸಿಗಲ್ಲ...ಮರಾಯ...ಅದಕ್ಕೆ ಫೋನ್ ಮಾಡೋಕಾಗ್ಲಿಲ್ಲ...
ನಿನಗ್ಯಾರ್ ಹೇಳಿದ್ದು ಎಂದೆ...

ರಮೇಶ ಬಂದಿದ್ದ ಹಾಸನಕ್ಕೆ.... ನಮ್ಮ ಬಸ್ಸ್  ಹತ್ತಿದ್ದ ಅವನೇ ಹೇಳ್ದ....ಎಂದ.

ಹೋ....ಸರಿ ಸರಿ...ನಾನು ಹಾಸನಕ್ಕೆ ಬರೋದಿದೆ....ಬಂದಾಗ ಸಿಕ್ತಿನಿ ಬಿಡು...ಎಂದು ಫೋನ್ ಕೆಳಗಿರಿಸಿದೆ...

ಗೆಳೆಯ ರಾಹುಲ್ Ksrtc ಬಸ್ ಕಂಡಕ್ಟರ್ ಆಗಿ ವೃತ್ತಿ ಪ್ರಾರಂಭಿಸಿ ಎರಡು ವರ್ಷ ವಾಗಿತ್ತು...ಈಗ ಸಿಟಿ ಬಸ್ ನಲ್ಲೆ ತಿರುಗುತ್ತಿರುತ್ತಾನೆ....

ನಾನು ಊರಿಗೆ ಬಂದಾಗಲೆಲ್ಲ ಅವನ ರೂಟ್ ಬಸ್ ಹತ್ತಿ ಸಾಕಾಗುವಷ್ಟು ಮಾತನಾಡಿ...ವಾಪಸ್ಸಾಗುತಿದ್ದೆ...

ಹೇಳಿದಂತೆಯೆ...10 :00 ಗಂಟೆಗೆ  ಹಾಸನ ತಲುಪಿದೆ...

ಹೊಸ ಬಸ್ ನಿಲ್ದಾಣದಿಂದ - ವಿದ್ಯಾನಗರದ ಕಡೆಗೆ ಹೋಗುವ ಬಸ್ಸು ಅವನ ರೂಟಿನದ್ದು....

ಬಸ್ ಹತ್ತಿದೆ...ಮಾತನಾಡಿಸಿದೆ...ಹಿಂಬದಿ ಸೀಟ್ ನಲ್ಲಿ ಕುಳಿತೆ...

ಹಿಂದೆ ಬಂದ ರಾಹುಲ್ ನನ್ನೆಡೆಗೆ ನೋಡಿ  ಇರು ಟಿಕೇಟ್ ಮಾಡ್ಕೊಂಡ್ ಮುಗ್ಸಿ ಬರ್ತೀನಿ ಎಂದ...

ಸರಿ...ಎಂದು....ಹೂ ಗುಟ್ಟಿದೆ..

ಬಸ್ಸು ಮಲೆನಾಡು ಇಂಜಿನಿಯರಿಂಗ್ ಕಾಲೇಜು ದಾಟಿ ಮುಂದೆ ಸಾಗಿದಾಗ ... ಹಿಂದೆ ಬಂದು ನನ್ನೊಟ್ಟಿಗೆ ಕುಳಿತ..

ನಿಂದ್ ಎಲ್ಲಿಗಪ್ಪ ಟಿಕೆಟ್ ಎಂದ ....ನನ್ನದು ಪಾಸು ಸಾರ್ ಎಂದೇ...

ಸಾಕಷ್ಟು ಮಾತು ಕತೆ ನೆಡೆಯಿತು....

ಮುಂದಿನ ಸ್ಟಾಪ್ ನಲ್ಲಿ...ಮಲೆನಾಡು ಕಾಲೇಜು ಸ್ಟಾಪ್ ನ ನಂತರದ ಸ್ಟಾಪ್ ನಲ್ಲಿ.....ವಯಸ್ಸಾದ ವೃದ್ಧರೊಬ್ಬರು ಬಸ್ಸು ಹತ್ತಿದರು..

ಇದ್ದಕ್ಕಿದ್ದಂತೆ ಗೆಳೆಯ ಮೇಲೆದ್ದು ಮುಂದಿನಿಂದ  ಟಿಕೆಟ್ ಮಾಡಿಕೊಂಡು ಬಂದು....

ವೃದ್ದರ ಬಳಿ ಬಂದು ಅವರನ್ನೇ...ದಿಟ್ಟಿಸಿ ನೋಡಿ ನೀವು ವಿಜಯಕುಮಾರ್ ಮಾಸ್ಟರ್ ಅಲ್ವ....ಎಂದ...

ಅವರು    ಹೌದು ಎಂದರು...
ಕ್ಷಮಿಸಿ ನೀವು ಯಾರೆಂದು ಗೊತ್ತಾಗಲಿಲ್ಲ...ಎಂದು..ಮರು ನುಡಿದರು...

ರಾಹುಲ ಮುಖದಲ್ಲಿ ಸಂತೋಷ ವ್ಯಕ್ತ ಪಡಿಸಿ ಸರ್ ನಾನು ನಿಮ್ಮ ಶಿಷ್ಯ ....

ಹೊಸಳ್ಳಿಯಲ್ಲಿ ನೀವು ಪ್ರೈಮರಿ ಸ್ಕೂಲ್ ಮಾಸ್ಟರ್ ಆಗಿದ್ದಾಗ ನಾನು ಅಲ್ಲೇ 1 ರಿಂದ 7  ರ ವರೆಗೆ ಓದಿದ್ದು....

ಅದಕ್ಕವರು ನಗುತ್ತಲೇ...ಬಹಳ ಸಂತೋಷ ಆಯ್ತಪ್ಪ ...ನಿನ್ನನ್ನ ನೋಡಿ ಎಂದು....ಟೀಕೇಟ್ ಗೆ ಹಣ ನೀಡಲು ಮುಂದಾದರು....

ರಾಹುಲನು ಇರ್ಲಿ ಬಿಡಿ ಸಾರ್ ಮುಂದಿನ ಸ್ಟಾಪ್ ಅಲ್ವ ನಾನ್ ನೋಡ್ಕೋತಿನಿ ಟಿಕೇಟ್ ತಗೋಳದ್  ಬೇಡ ಬಿಡಿ ಸಾರ್ ಎಂದ....

ಆ ಮಾತನ್ನು ಕೇಳಿದ ಮಾಸ್ಟರ್ ನನ್ನನ್ನ ಕೆಳಗಿಳಿಸಿ ಬಿಡು ಬೇರೊಂದು ಬಸ್ಸಿಗೆ ಹೋಗ್ತೇನೆ ಎಂದರು

ರಾಹುಲ್  ಆಶ್ಚರ್ಯದಿಂದ ಯಾಕೆ ಸಾರ್ ಏನಾಯ್ತು ಎಂದ...

ನಾನು ನಿನಗೆ ಶಿಕ್ಷಣ ಕೊಟ್ಟೆ ಬದಲಿಗೆ ಕರ್ತವ್ಯ ಸಂಸ್ಕಾರ ಕಲಿಸಲಿಲ್ಲವೆನಿಸುತ್ತದೆ....

ನೀನು ನಿನ್ನ ಕರ್ತವ್ಯವನ್ನೇ ಸರಿಯಾಗಿ ಮಾಡುತ್ತಿಲ್ಲ...

ಹಾಗೇನಾದರು ನಾನು ನನ್ನ ಕರ್ತವ್ಯ ವನ್ನು ಸರಿಯಾಗಿ  ಮಾಡದಿದ್ದರೆ ನೀನು ಇಂದು ಒಳ್ಳೆ ಕೆಲಸದಲ್ಲಿರುತ್ತಿರಲಿಲ್ಲ...

ಯಾವಾಗಲು ಕರ್ತವ್ಯ ಪಾಲನೆ ಮುಖ್ಯ ...
ಅಭಿಮಾನ ...ಸಂಬಂಧ..ಗೌರವವನ್ನ     ಕರ್ತವ್ಯ ದ್ರೋಹದಿಂದ ತೋರಬಾರದು...ಎಂದು ನೈತಿಕತೆಯ ಪಾಠ ಹೇಳಿದರು....

ರಾಹುಲ್ ಕ್ಷಮೆ ಕೇಳಿ ಹಣ ಪಡೆದು  ಟಿಕಟ್ ನೀಡಿದ....

ಈ ಒಂದು ಘಟನೆ ನಮಗೆ
ಪಾಠವಾಗಬಹುದಲ್ಲವೇ..

ಹಣ ಪಡೆದು ಅಯೋಗ್ಯರಿಗೆ ಉದ್ಯೋಗ ನೀಡುವ ....ಹಣ ಪಡೆದು ನಾನಾ ರೀತಿಯ ಕೃತ್ಯ ಎಸಗುವ ಉದ್ಯೋಗಿಗಳಿಗೆ...ಈ ಗುರುವಿನ ಕರ್ತವ್ಯ ಪ್ರಜ್ಞೆಯ ಪಾಠ ಮಾದರಿಯಾಗಲಿ.....

   ನನ್ನ ಕಲ್ಪನ ಜಗತ್ತಿನ  ಕಾಲ್ಪನಿಕ ಕಥೆ

                                             ರಚನೆ
                                  ಶ್ಯಾಮ್ ಪ್ರಸಾದ್ ಭಟ್


6 comments: