Monday, May 27, 2019

ಒಂದು ಸಾಲಲ್ಲಿ ಹೇಳು




ಒಂದು ರಜಾದಿನದ ಸಮಯ

ನಾನು ನನ್ನ ಗೆಳೆಯ ಹೀಗೆ ಹರಳಿಕಟ್ಟೆ ಮೇಲೆ ಹರಟುತ್ತ ಕುಳಿತಿದ್ದಾಗ....

ಗೆಳೆಯ ಹೀಗಂದ....
 ಈಗ ಒಬ್ಬ ಯುವಕ ಅರ್ಹತೆಗೆ ತಕ್ಕ ಉದ್ಯೋಗವಿಲ್ಲದೆ...ಇಷ್ಟವಿಲ್ಲದ ಉದ್ಯೋಗ ಮಾಡಲಾರದೆ ಅವನು ಅವನ ಗೆಳೆಯನೊಂದಿಗೆ ಹೇಳಿಕೊಳ್ಳುವ ದುಃಖದ ಮ‍ಾತು....
ಹಾಗೂ
ಇತ್ತ ಕೈ ಲಾಗದ ವೃದ್ದ ತಂದೆಯನ್ನು ತನ್ನ ಮಕ್ಕಳು ಸರಿಯಾಗಿ ನೋಡಕೊಳ್ಳದಿದ್ದಾಗ ಅ‍ ವೃದ್ಧನ ಮನೋಭಾವದಲ್ಲಿ ಬರುವ ಭಾವದ ಮಾತುಗಳನ್ನು
ಒಂದು ಪದದಲ್ಲಿ ಹೇಗೆ ಹೇಳಬಹುದು...ಎಂದು ಕೇಳಿದ

ಏನೋ ಇದು ಗೊಂದಲದ ಪ್ರಶ್ನೆ ಎಂದೇ....

ಹಾಗೇ ಯೋಚಿಸಿತ್ತಿರುವಾಗ ಕಣ್ಣು ಮುಂದೆ ಬಸ್ ಸ್ಟ್ಯಾಂಡ್ನಲಿ ಮೂಲೆಯ ಬೆಂಚು ಕಲ್ಲಿನ ಮೇಲೆ ಮಲಗಿ ಗೊಣಗುತ್ತ ಮಕ್ಕಳನ್ನು ಶಪಿಸುತಿದ್ದ ಮುದುಕಿಯ ಮುಖ ಕಣ್ಮುಂದೆ ಬಂದಂತಾಯಿತು....

   ನಿರುದ್ಯೋಗಿಯ ಭಾವ ವನ್ನು ಊಹಿಸಲು ಅಸಾದ್ಯವೆನಿಸಲಿಲ್ಲ....

ಹೀಗೆ ತುಂಬಾ ಸಮಯ ಯೋಚನಾ ಮಗ್ನ ನಾದಾಗ
   ಆಗ ಥಟ್ಟನೆ ಹೊಳೆದ ಸಾಲಿದು...

"ಮತ್ತೆ ಮಗುವಾದೆ
 ಹೆತ್ತವರಿಗೆ ನಾ ಹೊರೆಯಾದೆ..."

                                            ರಚನೆ
                              ಶ್ಯಾಮ್ ಪ್ರಸಾದ್ ಭಟ್

Wednesday, May 22, 2019

ಹಾಲಕ್ಕಿ ನುಡಿತೈತೆ..ಹಾಲಕ್ಕಿ ನುಡಿತೈತೆ...


 


ರಾಮು 07ನೇ ತರಗತಿ ಓದುತಿದ್ದ ಹುಡುಗ ಶಾಲೆ ಮುಗಿಸಿ ಮನೆಗೆ ಬರುವ ಸಮಯ ತನ್ನ ಗೆಳೆಯ ಪುಟ್ಟು ಜೊತೆಗೂಡಿ
 ಮಂಡಿ ಕೊಪ್ಪಲಿನಿಂದ ತನ್ನ ಊರು ಸುಂಡೇ ಕೊಪ್ಪಲಿಗೆ ಎರಡು ಕಿ ಮೀ ದಾರಿಯನ್ನು ನೆಡೆದು ಕೊಂಡೇ ಬರಬೇಕಿತ್ತು...

ಆ ದಾರಿ ತುಂಬಾ ಕಾಡುದಾರಿ ಕಾಫಿ ತೋಟಗಳ ಮದ್ಯೇ ಗೆರೆ ಎಳೆದಂತಿದಂತಿದ್ದ ಆ ದಾರಿಯಲ್ಲಿ ನೆಡೆದು ಬರಲು...ಆನಂದ ಜೊತೆಗೆ ಭಯ ಕೂಡ...

ಆಗ ಊರಿನಲ್ಲಿ ಒಂದು ಸುದ್ದಿ ಹಬ್ಬಿತ್ತು ಮಕ್ಕಳ ಕಳ್ಳರು ಕೆಂಪು ಕಾರಿನಲ್ಲಿ ಬಂದು ಮಕ್ಕಳಿಗೆ ಚಾಕೊಲೇಟ್ ನ ಆಸೆ ತೋರಿಸಿ ಮಕ್ಕಳನ್ನು ಕದ್ದೊಯ್ಯುತ್ತಾರೆ...ಎಂಬ ಸುದ್ದಿ....ರಾಮು ಮೊದಲೇ ಪುಕ್ಕಲ ಸ್ವಭಾವದವನು...ರಾಮು ಅಪ್ಪನನ್ನು ಕೇಳಿದ್ದ...

.ಅಪ್ಪ ಕಳ್ಳರು ನಮ್ಮನ್ನೆಲ್ಲ....ಕರ್ಕೊಂಡ್ ಹೋಗಿ ಏನ್ ಮಾಡ್ತಾರೆ ?...

ಅಪ್ಪ ಮಗನಿಗೆ ವಾಸ್ತವವನ್ನೇ ಹೇಳಿದರು..ಈಗ ಕಿಡ್ನಿ ವೈಫಲ್ಯವಾದವರಿಗೆ ಜೀವಂತವಿರುವ ದಾನಿಗಳ ಕಿಡ್ನಿಗಳನ್ನು ಬದಲಿಸ ಬಹುದು ಆಗ ಕಿಡ್ನಿ ಪಡೆದವರು ಶ್ರೀಮಂತರಾದರೆ...ದಾನಿಗಳಿಗೆ ಕೇಳಿದಷ್ಟು ಹಣ ನೀಡುತಿದ್ದರು..
 ಇದನ್ನೇ ದುರುಪಯೋಗ ಪಡಿಸಿಕೊಳ್ಳೋರೆ ಈ ಕಳ್ಳರು...

ರಾಮು ಅಬ್ಬಾ!!

ಭಯದಿಂದ ತನ್ನ ಹೊಟ್ಟೆ ಮುಟ್ಟಿ ನೋಡಿಕೊಂಡ....

ಈ ಅಪ್ಪ ಹೇಳಿದ ವಿಚಾರವನ್ನು ರಾಮು ನೆಡೆದು ಬರುವಾಗ ಪುಟ್ಟುಗು  ಹೇಳಿದ...

ಹೀಗೆ ನೆಡೆದು ಬರುವಾಗ...
   ಹಿಂದಿನಿಂದ ಯಾರೋ ನೆಡೆದು ಬರುವ ಸದ್ದಾಯಿತು....

ರಂಗು ರಂಗಿನ ಪೇಟ....
   ಕೋಟು...ಕೆಂಪು ಶರ್ಟ್ ಧರಿಸಿದ್ದ
ಕೈಯಲ್ಲಿ ಒಂದು ಕೋಲು...ಹಿಡಿದಿದ್ದ ದೊಡ್ಡ ಮೈ ಕಟ್ಟಿನ ಆಳು

ಕೊರಳಿನಲ್ಲಿ ರಾಶಿ ರಾಶಿ ರುದ್ರಾಕ್ಷಿ...ಮಾಲೆಗಳು...ಕೈಯಲ್ಲೊಂದು ಪೆಟ್ಟಿಗೆ ಹಿಡಿದ ವ್ಯಕ್ತಿ....
ಜೊತೆಯಲ್ಲೊಂದು ಹೆಂಗಸು...ಪಾತ್ರೆ ಅನೇಕ ಸಾಮಾನುಗಳನ್ನು ಹಿಡಿದು ನೆಡೆದು ಬರುತಿದ್ದರು....

ಮಕ್ಕಳ ಕಳ್ಳರ ಬಗ್ಗೆ ರಾಮು ಹೇಳುತಿದ್ದ ಕಥೆ ಕೇಳುತ್ತ ನೆಡೆಯುತಿದ್ದ....ಪುಟ್ಟು ಲೋ ಮಕ್ಕಳು ಕಳ್ಳ....ಆಂತಾ ಅರಚಿ ಓಡಿದ ಜೊತೆಗೆ...ರಾಮು ಕೂಡ ಓಡಿದ ...

ಮನೆಗೆ ಓಡಿಬಂದ ರಾಮು ನಿಟ್ಟಿಸುರು ಬಿಡುತ್ತ....
ಆಮ್ಮ ಆಮ್ಮ ಮಕ್ಕಳ ಕಳ್ಳ...ಮಕ್ಕಳ ಕಳ್ಳ...ಅಟ್ಟುಸ್ಕೊಂಡ್ ಬಂದ ....ಎಂದ...

ರಾಮು ಅಮ್ಮ ಶಾಂತಮ್ಮ....ಯಾರನ್ನೋ ನೋಡಿ ಹೆದರಿ ಓಡಿ ಬಂದಿದ್ದಾನೆಂದು ಕೊಂಡು ಶಾಂತವಾಗಿದ್ದರು..

ಸುಂಡೆಕೊಪ್ಪಲು ಗ್ರಾಮದ ವೃತ್ತದಲ್ಲಿ ಎರಡು ದಿನಸಿ ಅಂಗಡಿ ....ಒಂದು ಅಂಗಡಿ ಇರುವ ಬಿಲ್ಡಿಂಗ್ ನಲ್ಲಿಯೇ ತಿಂಗಳಿಗೊಮ್ಮೆ ಸರ್ಕಾರದ ಅಕ್ಕಿ ಕೊಡುವ ನ್ಯಾಯ ಬೆಲೆ ಅಂಗಡಿ...
ಊರಿಗೆ  ಆಗಾಗಾ ಬೀದಿ ನಾಟಕದ ಗುಂಪು ಹಾಗೂ ಸೈಕಲ್ ಸರ್ಕಸ್ ನವರ ಗುಂಪು ಬಂದಾಗ ಅವರ ವಾಸ್ತವ್ಯದ ಜಾಗ ಅದೇ ಹಳೇಯದಾದ ನ್ಯಾಯ ಬೆಲೆ ಅಂಗಡಿಯ ಬಿಲ್ಡಿಂಗ್ ಆಗಿತ್ತು....

ಅಮ್ಮ ಹೇಳಿದರೆಂದು ಸಕ್ಕರೆ ತರಲು ಅಂಗಡಿಗೆ ತನ್ನ ಟಯರ್ ಗಾಡಿಯನ್ನು ಓಡಿಸಿ ಕೊಂಡು ಹೊರಟ ....ಅಂಗಡಿಯ ಸಮೀಪದಲ್ಲಿ  ಅದೇ ನ್ಯಾಯಬೆಲೆ ಅಂಗಡಿಯಲ್ಲೆ....ತಾನು ದಾರಿಯಲ್ಲಿ
ಕಂಡ ಅದೇ ವಿಚಿತ್ರ ವೇಷಧಾರಿ ವ್ಯಕ್ತಿ...ತನ್ನ ಪತ್ನಿ ಜೊತೆ ರಾತ್ರಿ ಅಡುಗೆಗೆ ಸಿದ್ದತೆ ಮಾಡ್ತಿದ್ದಾನೆ..

ಅಯ್ಯೋ ಭಗವಂತ ಅಂತ ಅಂದುಕೊಂಡು ...ಸಕ್ಕರೆಯನ್ನ ಗಡಿ ಬಿಡಿಯಲ್ಲಿ ತಗೋಂಡ್ ಬಂದು..ಅಮ್ಮನಿಗೆ ವಿಷಯ ಹೇಳಿದ...ಅಮ್ಮ ಹೊರಬಂದು ರಸ್ತೆ ಕಡೆಗೆ ನೋಡಿ...ಅವರು ಬುಡಬುಡಕೆಯವರು ಕಣೋ ಮಗು...ಕಳ್ಳರಲ್ಲ...ಎಂದು ನಕ್ಕು...ಒಳ ಹೋದರು..
.
ರಾಮುವಿಗೆ ಮತ್ತಷ್ಟು ಕುತೂಹಲ ಹೆಚ್ವಾಯಿತು....ಕಳ್ಳರಲ್ಲ...ಅನ್ನೋ ದೈರ್ಯ ಅವರ ಬಳಿ ಹೋಗಲು ಪ್ರೇರಪಿಸಿತು....ಆದರು ನಾಳೆ ಭಾನುವಾರ ಪುಟ್ಟು ಜೊತೆಗೆ ಹೋಗಿ ಅವರನ್ನ ನೋಡ್ಕೊಂಡ್ ಬರೋಣ ಅಂದುಕೊಂಡು ಸುಮ್ಮನಾದ....

ಮರು ದಿನ ಬೆಳಗ್ಗೆ ಅದು ಫೆಬ್ರವರಿ ತಿಂಗಳ ಚಳಿಗಾಲವಾದ್ದರಿಂದ...ಮತ್ತು ಭಾನುವಾರವಾದ್ದರಿಂದ ರಾಮು ತಡವಾಗಿ ಎದ್ದ....

ಅಮ್ಮ ಮನೆಗೆ ಬಂದ ಆ ಬುಡ ಬುಡಕೆಯವರ ಹೆಂಡತಿಗೆ ತನ್ನ ಹಳೆ ಸೀರೆ ಕೊಡುತಿದ್ದದನ್ನು ಕಂಡು...ಆಶ್ಚರ್ಯದಿಂದ ...
ಅಮ್ಮ ಯಾಕಮ್ಮ ...
ನಿನ್ನ ಹಳೆ ಸೀರೆ ಎಲ್ಲಾ ಕೊಡ್ತಾ ಇದಿಯಾ ಇವ್ರೀಗೆ....

ಅಮ್ಮ...ರಾಮುವಿಗೆ....ನೀನು ಬೆಚ್ಚಗೆ ಮಲಗೋಕೆ ಇವ್ರು ಈ ಸೀರೆಯಲ್ಲಿ...ಕೌದಿ ಹೊಲೆದು ಕೊಡ್ತಾರೆ...
" ಆ ತಾಯಿ ಚಳಿಯಲ್ಲಿ ನಡುಗುತ್ತ ಮಲಗಿ..ನಮಗೆ ನಮ್ಮ ಹಳೇ ಸೀರೆ ಬಳಸಿ ಕೌದಿ ಮಾಡೋ ಉದ್ಯೋಗ...ಅವರದ್ದು..."

ಸಂಜೇ ವೇಳೆಗೆ ಮನೆಮನೆಗೆ ಹೋಗಿ...ರಾತ್ರಿ ಜಾಬ್ ಕಟ್ತೀನಿ..ನಿಮ್ಮನೆ ನಾಯಿ ಸ್ವಲ್ಪ ಕಟ್ಟಾಕಿ ಅಮ್ಮೌವ್ರೆ ಎಂದು ಬಣ್ಣ ಬಣ್ಣದ ದಿರಿಸಿನ ಮುದುಕ ಹೇಳುತಿದ್ದರು..

ಆ ಮುದುಕನಿಗೆ ಅಮ್ಮ ಕಾಫಿ..ಕೊಟ್ಟು ಬೀಳ್ಕೊಟ್ಟ ಮೇಲೆ ..

ಅಮ್ಮ...ಜಾಬ್ ಕಟ್ಟೋದು ಅಂದ್ರೆ ಏನು??....ಎಂದು ಕೇಳುತ್ತ..ರಾಮು ಅಮ್ಮನಿದ್ದ ಅಡುಗೆ ಮನೆಗೆ ಬಂದ...

ಅಮ್ಮ ಅದಕ್ಕೆ ಪ್ರತ್ಯುತ್ತರವಾಗಿ...
    ನಮ್ಮ ಅಪ್ಪ ನಂಗ್ ಹೇಳಿದ್ದು...

 ನಮ್ಮ ಊರಿನಲ್ಲಿ ವರ್ಷ ಪೂರ್ತಿ ಏನೇನು ಘಟನೆ ಆಗುತ್ತೆ ಅಂತ ಮೊದಲೇ ತಿಳಿದುಕೊಳ್ಳೋ ಶಕ್ತಿಯನ್ನ ಇವರು ಸ್ಮಾಶಾನ ದೇವತೆಯನ್ನು ಒಲಿಸಿಕೊಂಡು ಭೂತಾರಾಧನೆ ಮಾಡಿ  ಪಡ್ಕೊಂಡಿರ್ತಾರೆ...ಜಾಬ್ ಕಟ್ಟೋ ದಿನದ ಮಧ್ಯ ರಾತ್ರಿ ಬುಡ ಬುಡಕೆ ಆಡಿಸುತ್ತ ಹಾಲಕ್ಕಿ ನುಡಿತೈತೆ ಹಾಲಕ್ಕಿ ನುಡಿತೈತೆ ಎಂದು ಹೇಳುತ್ತ...ವಶೀಕರಣ ಮಾಡಿಕೊಂಡ ಭೂತ ನುಡಿಸಿದಂತೆ ಭವಿಷ್ಯ ಹೇಳುತ್ತಾರೆ....ಎಂದಳು ಅಮ್ಮ..

ರಾಮು ಗೆ ಭೂತ ಎಂದಾಗ ಒಮ್ಮೆ ಮೈ ಜುಮ್ಮೆಂದಿತು...ಭೂತಾ ನಾ.....ಅಂತ ಅವರನ್ನ ನೋಡಿದಾಗಲೆಲ್ಲ....ರಾಮುಗೆ ಭಯವಾಗುತಿತ್ತು...

ಜಾಬ್ ಕಟ್ಟುವ ದಿನ ರಾಮು ನಿದ್ರೆ ಮಾಡದೆ ಎಚ್ಚರವಿದ್ದ....
  ಮದ್ಯ ರಾತ್ರಿ ನಾಯಿ ಜೋರಾಗಿ ಬೊಗಳಲು ಶುರು ಮಾಡಿದವು....

ಬುಡಬುಡಕೆ ಅಜ್ಜ ಏನೋ ಹೇಳುತ್ತಾ ಬುಡುಂ ಬುಡುಂ ಬುಡು ಬುಡು ಬುಡುಂ ಎಂದು ಬುಡ ಬುಡಕೆ ಸದ್ದು...ಹಾಲಕ್ಕಿ ನುಡಿತೈತೆ ಹಾಲಕ್ಕಿ ನುಡಿತೈತೆ...
ಮೂರ್ ದಾರಿ ಕೂಡುವ ಜಾಗದಿ ರಕ್ತ ಬೀಳುತೈತೆ...
ಮೂಡಣ ದಿಕ್ಕಿನ ಮನೆ ಬೆಂಕಿ ಬಿದ್ದು ಧಗಧಗನೆ ಉರಿತೈತೆ...
ರಾಮುಗೆ ಅಷ್ಟೇ ಕೇಳಿಸಿದ್ದು....ನಾಯಿಗಳು  ಬೊಗಳುತಿದ್ದರಿಂದ...ಪೂರ್ತಿ ಕೇಳಲಾಗಲಿಲ್ಲ...

"ಸಾಮಾನ್ಯವಾಗಿ ಬುಡ ಬುಡಕೆಯವರು ಒಮ್ಮೆ ಊರಿಗೆ ಬಂದರೆ ಒಂದು ತಿಂಗಳುಗಳ ಕಾಲ ಊರಿನಲ್ಲೇ ವಾಸ್ತವ್ಯ ಹೂಡಿರುತ್ತಾರೆ....ಮನೆಗಳಲ್ಲಿ...ದೃಷ್ಟಿ ಪರಿಹಾರ ಹಾಗೂ ಮಾಟ ಮಂತ್ರ ಮಾಡಿಸಿದ್ದರೆ ಹೋಗಲೆಂದು ಬುಡ ಬುಡಕೆಯವರಿಂದ ತಡೆ ಹೊಡೆಸೋದು ಪದ್ದತಿ..
ಅಂಗಡಿ ಇಟ್ಟುಕೊಂಡವರು ವ್ಯಾಪಾರ ಚನ್ನಾಗಾಗಲು ಗಿರಾಕಿ ವಶೀಕರಣ ಯಂತ್ರ ಕಟ್ಟಿಸುತ್ತಾರೆ....

ಅನೇಕ ಮನೆಯವರು ....ಮದುವೆ..ಕೆಲಸ ...ಇತ್ಯಾದಿ ವಿಚಾರಗಳ ಬಗೆಗೆ ಬುಡ ಬುಡಕೆಯವರಿಂದ ಭವಿಷ್ಯ ಕೇಳುವುದು .....ಹಾಗೇ ಕೇಳಿದ ಭವಿಷ್ಯ ಎಷ್ಟೋ ನೆಡೆದಿವೆ ಕೂಡ..."

ಒಂದು ದಿನ ಶಾಲೆ ಮುಗಿಸಿ ರಾಮು ತನ್ನ ಸ್ನೇಹಿತ ಪುಟ್ಟು ಮನೆಗೆ ಆಟವಾಡಲು ಓಡಿದ ...
‍ಅಲ್ಲಿ ನೋಡಿದರೆ ಬುಡಬುಡಕೆಯವನನ್ನು  ಅವರ ಮನೆಯ ಜಗಲಿಯಲ್ಲಿ ಕೂರಿಸಿ ಭವಿಷ್ಯ ಕೇಳುತ್ತ ಪುಟ್ಟು ಅಮ್ಮ ಸೀತಮ್ಮ....ಹಾಳಾದ್ ಮುಂಡೇ ಮಕ್ಳು ಕಣ್ ಬಿದ್ದವೇ....ಯಾವ್ ಮುಂಡೇರ್ ಏನ್ ಮಾಟ ಮದ್ದು ಮಾಡ್ಸೋರೋ ಕಾಣೆ ಹಿಂಗ್ ಬಂದ್ ಕಾಸು ಹಿಂಗೇ ಆಸ್ಪತ್ರೆಗೆ ಒಂಟೋಯ್ತದೆ.....ಒಂದ್ ತಡೆ ಹೊಡೀರಿ ಅಂತ ಹೇಳಿದಳು....

ರಾಮು ಪುಟ್ಟು ಇಬ್ಬರು ಜಗಲಿಯಲ್ಲಿ ಕೂತು ಬುಡಬುಡಕೆಯವನನ್ನೇ ನೋಡುತಿದ್ದರು...

ಬುಡಬುಡಕೆ ಅಜ್ಜ...ಸೀತಮ್ಮನ ಮಾತಿಗೆ ಹು ಸರಿ ಕಣವ್ವ.
ಎಂದು ತಾನು ತಂದಿದ್ದ ಪೆಟ್ಟಿಗೆ ಯಿಂದ ಕವಡೆ...ಜ್ಯೋತಿಷ್ಯದ ಪುಸ್ತಕ ... ತಾನು ಪೂಜಿಸುವ ಸ್ಮಶಾನ ದೇವತೆ... ಕೈ ಮೂಳೆ (ಭೂತಕ್ಕೆ ರಕ್ತದ ನೈವೇದ್ಯ ನೀಡಿ ಬಾಣಂತಿ ಹೆಣದ ಕೈ ಮೂಳೆ ತಂದಿರುತ್ತಾರೆ..)

ಸೀತಮ್ಮ...ಬುಡಬುಡಕೆ ಅಜ್ಜ ಹಿಂಗಿಂಗಾಗಿದೆ ಅಲ್ವ ಸೀತಮ್ಮ ...ಅಂದದ್ದಕ್ಕೆ..ಸೀತಮ್ಮ ಹು ಗುಟ್ತುತ್ತ ದಿಟ ದಿಟ...ಎಂದು ಹು ಗುಟ್ಟುತಿದ್ದದ್ದು .....ಎಲ್ಲಾ ರಾಮುವಿನ ಮನಸ್ಸನ್ನು ಹೊಕ್ಕಿತು....ಅಲ್ಲಾ ಈ ಅಜ್ಜನಿಗೆ ಹೆಂಗ್ ಗೊತ್ತಾಗುತ್ತೆ ಎಂದು ಯೋಚಿಸುತ್ತ....ಭೂತದ ನೆನಪಾಗಿ...ಸುಮ್ಮನಾದ

 ಪುಟ್ಟುವಿನ ಹಾಗೂ ಅವರ ಮನೆಯವರ ಭವಿಷ್ಯ ಹೇಳಿ ಹೋದ ಅಜ್ಜಯ್ಯ...

ಅಜ್ಜ ಹೋದ ನಂತರ

ರಾಮು ಇತ್ತ ಮನೆಗೆ ಬಂದ...ಇತ್ತ ಮನೆಯಲ್ಲಿ ಬುಡಬುಡಕೆ ಅಜ್ಜನ ಹೆಂಡತಿ ಮೊನ್ನೆ ಅಮ್ಮ ಸೀರೆಯಿಂದ ಕೌದಿ ಒಲೆದು ಕೊಡಲು ಬಂದಿದ್ದರು.....

ಒಂದು ತಿಂಗಳ ಕಾಲ ಆ ಊರಲ್ಲೇ ಇದ್ದು ಮತ್ತೇ ಬೇರೆ ಊರಿಗೆ ಹೋದರು....

ನಮ್ಮ...ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯವೇ ಹೀಗೆ...
ನಮ್ಮ ಊರುಗಳಲ್ಲಿ ಆಗಾಗಾ ಬಂದು ಬಂಧುವಿನಂತೆ ಸಂಬಂಧ ಬೆಸೆದು ಕೊಳ್ಳುತಿದ್ದ....ಅದೆಷ್ಟೋ ಮಂದಿ...

ಅವರಲ್ಲಿ...ಬಳೆಗಾರ ಬಸಪ್ಪ...
ಕಣಿ ಹೇಳುವ ಕೊರವಂಜಿಯವರು...
ಬುಡಬುಡಕೆ ಅಜ್ಜ...
ನನ್ನ ನೆನಪಿನ ಬುತ್ತಿಗೆ ಸಿಕ್ಕಿದವರು....

 ಹೀಗೆ ಧರ್ಮಸ್ಥಳ ಕ್ಕೆ ಹೋದಾಗ ದೇವಾಲಯದ ಬೀದಿಯಲ್ಲಿ ನಾನು 3 ವರ್ಷದ ಹಿಂದೆ ಕಂಡ ಬುಡಬುಡಕೆ ಅಜ್ಜಬ ಹೆಂಡತಿ ಪ್ಲಾಸ್ಟಿಕ್ ಹೂ ಗಳನ್ನು ಮಾರುತಿದ್ದರು ....ಅವರ ಗುರುತು ಸಿಕ್ಕಿ ...‌ಅವರನ್ನು ಮಾತನಾಡಿಸಿದಾಗ ಅಜ್ಜ ತೀರಿಕೊಂಡದ್ದು....ಅವರ ಭವಿಷ್ಯವೇ ದುಸ್ತರವಾದದ್ದು ತಿಳಿಯಿತು....ಈ ಲೇಖನಕ್ಕೆ...ಅವರೇ ಪ್ರೇರಣೆ...
ಒಟ್ಟಾರೆ ಭವಿಷ್ಯದ ಮಾತುಗಳು ಸುಳ್ಳೋ ನಿಜವೋ..ಅವರ ಮಾತುಗಳು ಎಷ್ಟೋ ಜನರ ಆಶಾಭಾವವನ್ನು...ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದು ಸುಳ್ಳಲ್ಲ...

                                        ರಚನೆ
                         ಶ್ಯಾಮ್ ಪ್ರಸಾದ್ ಭಟ್



Tuesday, May 14, 2019

ಸ್ಕೂಲ್ ಮಾಸ್ಟರ್



ಇಂದು ಬೆಳಗ್ಗೆಯೇ...ನನ್ನ ಗೆಳೆಯ ರಾಹುಲ್ ನ ಫೋನ್ ಬಂತು...
ಏನೋ ಊರಿಗ್ ಬಂದಿದಿಯಂತೆ ಫೋನ್ ಕೂಡ ಮಾಡಿಲ್ಲ..ನೀನು..

ಹು ಕಣೋ ನೆನ್ನೆ ಬಂದೆ ...

ನಮ್ಮ ಮನೆಗೆ ಜಿಯೋ ನೆಟ್‌ವರ್ಕ್ ಸಿಗಲ್ಲ...ಮರಾಯ...ಅದಕ್ಕೆ ಫೋನ್ ಮಾಡೋಕಾಗ್ಲಿಲ್ಲ...
ನಿನಗ್ಯಾರ್ ಹೇಳಿದ್ದು ಎಂದೆ...

ರಮೇಶ ಬಂದಿದ್ದ ಹಾಸನಕ್ಕೆ.... ನಮ್ಮ ಬಸ್ಸ್  ಹತ್ತಿದ್ದ ಅವನೇ ಹೇಳ್ದ....ಎಂದ.

ಹೋ....ಸರಿ ಸರಿ...ನಾನು ಹಾಸನಕ್ಕೆ ಬರೋದಿದೆ....ಬಂದಾಗ ಸಿಕ್ತಿನಿ ಬಿಡು...ಎಂದು ಫೋನ್ ಕೆಳಗಿರಿಸಿದೆ...

ಗೆಳೆಯ ರಾಹುಲ್ Ksrtc ಬಸ್ ಕಂಡಕ್ಟರ್ ಆಗಿ ವೃತ್ತಿ ಪ್ರಾರಂಭಿಸಿ ಎರಡು ವರ್ಷ ವಾಗಿತ್ತು...ಈಗ ಸಿಟಿ ಬಸ್ ನಲ್ಲೆ ತಿರುಗುತ್ತಿರುತ್ತಾನೆ....

ನಾನು ಊರಿಗೆ ಬಂದಾಗಲೆಲ್ಲ ಅವನ ರೂಟ್ ಬಸ್ ಹತ್ತಿ ಸಾಕಾಗುವಷ್ಟು ಮಾತನಾಡಿ...ವಾಪಸ್ಸಾಗುತಿದ್ದೆ...

ಹೇಳಿದಂತೆಯೆ...10 :00 ಗಂಟೆಗೆ  ಹಾಸನ ತಲುಪಿದೆ...

ಹೊಸ ಬಸ್ ನಿಲ್ದಾಣದಿಂದ - ವಿದ್ಯಾನಗರದ ಕಡೆಗೆ ಹೋಗುವ ಬಸ್ಸು ಅವನ ರೂಟಿನದ್ದು....

ಬಸ್ ಹತ್ತಿದೆ...ಮಾತನಾಡಿಸಿದೆ...ಹಿಂಬದಿ ಸೀಟ್ ನಲ್ಲಿ ಕುಳಿತೆ...

ಹಿಂದೆ ಬಂದ ರಾಹುಲ್ ನನ್ನೆಡೆಗೆ ನೋಡಿ  ಇರು ಟಿಕೇಟ್ ಮಾಡ್ಕೊಂಡ್ ಮುಗ್ಸಿ ಬರ್ತೀನಿ ಎಂದ...

ಸರಿ...ಎಂದು....ಹೂ ಗುಟ್ಟಿದೆ..

ಬಸ್ಸು ಮಲೆನಾಡು ಇಂಜಿನಿಯರಿಂಗ್ ಕಾಲೇಜು ದಾಟಿ ಮುಂದೆ ಸಾಗಿದಾಗ ... ಹಿಂದೆ ಬಂದು ನನ್ನೊಟ್ಟಿಗೆ ಕುಳಿತ..

ನಿಂದ್ ಎಲ್ಲಿಗಪ್ಪ ಟಿಕೆಟ್ ಎಂದ ....ನನ್ನದು ಪಾಸು ಸಾರ್ ಎಂದೇ...

ಸಾಕಷ್ಟು ಮಾತು ಕತೆ ನೆಡೆಯಿತು....

ಮುಂದಿನ ಸ್ಟಾಪ್ ನಲ್ಲಿ...ಮಲೆನಾಡು ಕಾಲೇಜು ಸ್ಟಾಪ್ ನ ನಂತರದ ಸ್ಟಾಪ್ ನಲ್ಲಿ.....ವಯಸ್ಸಾದ ವೃದ್ಧರೊಬ್ಬರು ಬಸ್ಸು ಹತ್ತಿದರು..

ಇದ್ದಕ್ಕಿದ್ದಂತೆ ಗೆಳೆಯ ಮೇಲೆದ್ದು ಮುಂದಿನಿಂದ  ಟಿಕೆಟ್ ಮಾಡಿಕೊಂಡು ಬಂದು....

ವೃದ್ದರ ಬಳಿ ಬಂದು ಅವರನ್ನೇ...ದಿಟ್ಟಿಸಿ ನೋಡಿ ನೀವು ವಿಜಯಕುಮಾರ್ ಮಾಸ್ಟರ್ ಅಲ್ವ....ಎಂದ...

ಅವರು    ಹೌದು ಎಂದರು...
ಕ್ಷಮಿಸಿ ನೀವು ಯಾರೆಂದು ಗೊತ್ತಾಗಲಿಲ್ಲ...ಎಂದು..ಮರು ನುಡಿದರು...

ರಾಹುಲ ಮುಖದಲ್ಲಿ ಸಂತೋಷ ವ್ಯಕ್ತ ಪಡಿಸಿ ಸರ್ ನಾನು ನಿಮ್ಮ ಶಿಷ್ಯ ....

ಹೊಸಳ್ಳಿಯಲ್ಲಿ ನೀವು ಪ್ರೈಮರಿ ಸ್ಕೂಲ್ ಮಾಸ್ಟರ್ ಆಗಿದ್ದಾಗ ನಾನು ಅಲ್ಲೇ 1 ರಿಂದ 7  ರ ವರೆಗೆ ಓದಿದ್ದು....

ಅದಕ್ಕವರು ನಗುತ್ತಲೇ...ಬಹಳ ಸಂತೋಷ ಆಯ್ತಪ್ಪ ...ನಿನ್ನನ್ನ ನೋಡಿ ಎಂದು....ಟೀಕೇಟ್ ಗೆ ಹಣ ನೀಡಲು ಮುಂದಾದರು....

ರಾಹುಲನು ಇರ್ಲಿ ಬಿಡಿ ಸಾರ್ ಮುಂದಿನ ಸ್ಟಾಪ್ ಅಲ್ವ ನಾನ್ ನೋಡ್ಕೋತಿನಿ ಟಿಕೇಟ್ ತಗೋಳದ್  ಬೇಡ ಬಿಡಿ ಸಾರ್ ಎಂದ....

ಆ ಮಾತನ್ನು ಕೇಳಿದ ಮಾಸ್ಟರ್ ನನ್ನನ್ನ ಕೆಳಗಿಳಿಸಿ ಬಿಡು ಬೇರೊಂದು ಬಸ್ಸಿಗೆ ಹೋಗ್ತೇನೆ ಎಂದರು

ರಾಹುಲ್  ಆಶ್ಚರ್ಯದಿಂದ ಯಾಕೆ ಸಾರ್ ಏನಾಯ್ತು ಎಂದ...

ನಾನು ನಿನಗೆ ಶಿಕ್ಷಣ ಕೊಟ್ಟೆ ಬದಲಿಗೆ ಕರ್ತವ್ಯ ಸಂಸ್ಕಾರ ಕಲಿಸಲಿಲ್ಲವೆನಿಸುತ್ತದೆ....

ನೀನು ನಿನ್ನ ಕರ್ತವ್ಯವನ್ನೇ ಸರಿಯಾಗಿ ಮಾಡುತ್ತಿಲ್ಲ...

ಹಾಗೇನಾದರು ನಾನು ನನ್ನ ಕರ್ತವ್ಯ ವನ್ನು ಸರಿಯಾಗಿ  ಮಾಡದಿದ್ದರೆ ನೀನು ಇಂದು ಒಳ್ಳೆ ಕೆಲಸದಲ್ಲಿರುತ್ತಿರಲಿಲ್ಲ...

ಯಾವಾಗಲು ಕರ್ತವ್ಯ ಪಾಲನೆ ಮುಖ್ಯ ...
ಅಭಿಮಾನ ...ಸಂಬಂಧ..ಗೌರವವನ್ನ     ಕರ್ತವ್ಯ ದ್ರೋಹದಿಂದ ತೋರಬಾರದು...ಎಂದು ನೈತಿಕತೆಯ ಪಾಠ ಹೇಳಿದರು....

ರಾಹುಲ್ ಕ್ಷಮೆ ಕೇಳಿ ಹಣ ಪಡೆದು  ಟಿಕಟ್ ನೀಡಿದ....

ಈ ಒಂದು ಘಟನೆ ನಮಗೆ
ಪಾಠವಾಗಬಹುದಲ್ಲವೇ..

ಹಣ ಪಡೆದು ಅಯೋಗ್ಯರಿಗೆ ಉದ್ಯೋಗ ನೀಡುವ ....ಹಣ ಪಡೆದು ನಾನಾ ರೀತಿಯ ಕೃತ್ಯ ಎಸಗುವ ಉದ್ಯೋಗಿಗಳಿಗೆ...ಈ ಗುರುವಿನ ಕರ್ತವ್ಯ ಪ್ರಜ್ಞೆಯ ಪಾಠ ಮಾದರಿಯಾಗಲಿ.....

   ನನ್ನ ಕಲ್ಪನ ಜಗತ್ತಿನ  ಕಾಲ್ಪನಿಕ ಕಥೆ

                                             ರಚನೆ
                                  ಶ್ಯಾಮ್ ಪ್ರಸಾದ್ ಭಟ್


Monday, May 6, 2019

ದೀಣೆಯ ನೆನಪು....

ನೇರಳೆ ಹಣ್ಣು
                               
                                     ಚೊಟ್ಟೆ ಹಣ್ಣು 



                            
 ದೀಣೆಯ ನೆನಪು...

ನಮ್ಮೂರು ಮೊದಲೇ ಕಾಫಿ ಕಾಡು
 ... ಆಗ ಜಮೀನು ಇದ್ದವರು ಕೂಡ ಕಾಫಿ ತೋಟ ಮಾಡಲು ತುಂಬಾ ಹಣ ಬೇಕಾದ್ದರಿಂದ ಕಾಫಿ ತೋಟ ಮಾಡಲು ಸಾದ್ಯವಾಗದೆ ...ಹಾಗೆ ಪಾಳು ಬಿಟ್ಟಿರುತಿದ್ದರು...

ನಮ್ಮ ಮನೆಯ ಹಿಂಬಾಗ......ಸ್ವಲ್ಪ ಎತ್ತರದ ಜಾಗ....ಬಹಳಾ... ಹಿಂದೆ ನಾವು ಈಗ ಮನೆ ಮಾಡಿ ವಾಸವಿರುವ ಸ್ಥಳವೆಲ್ಲ ಕಾಡು ಪ್ರದೇಶ....ಆದರೆ ಮನೆಗಳಾದಂತೆ....ಕಾಡು ಮಾಯವಾಗಿ ನಾಡಾಯಿತು....

ಆದರೆ ನಮ್ಮ ಮನೆಯ ಹಿಂಬದಿ ಇದ್ದ ಕಾಡು ಹಾಗೇ ಇತ್ತು....ನಾವು ಅದಕ್ಕೆ ದೀಣೆ ಎಂದು ಕರೆಯುತಿದ್ದೆವು....ಅಲ್ಲಿ ಹಲವು ಹಣ್ಣಿನ ಮರಗಳು....ಕಾಡು ಜಾತಿಯ ಮರಗಳು....ಕುರುಚಲು ಗಿಡಗಳಿಂದ ತುಂಬಿ ಹೋಗಿತ್ತು ....ಹಕ್ಕಿಗಳ ವಾಸಸ್ಥಾನವಾಗಿತ್ತು....ಹಾಗೇ ಅಲ್ಲಿ ಕಾಡು ಕೋಳಿಗಳು ಬರುತ್ತಿದ್ದರಿಂದ ...ಅಕ್ಕ ಪಕ್ಕದವರು ....ಜಮೀನಿನ ಒಡೆಯರು ಎಲ್ಲಾ ಕಾಡು ಕೋಳಿ ಹಿಡಿಯಲು ಬಲೆ ಹೆಣೆದು ....ಸ್ವಲ್ಪ ಅಕ್ಕಿ ಚೆಲ್ಲಿ ಬಂದಿರುತಿದ್ದರು....
.
ನಮ್ಮ ಊರಿಗೆ ಆಗ ಶೌಚಾಲಯ ಇನ್ನು ದಾಳಿ ಇಟ್ಟಿರಲಿಲ್ಲ....ಅಕ್ಕ ಪಕ್ಕದ ಮನೆ....ನಮ್ಮ ಮನೆ...ಯ
ಬೆಳಗಿನ ಶೌಚದ ಸ್ಥಳ ಅದೇ ಆಗಿತ್ತು....

ನಾನು ಗೆಳೆಯರೊಡನೆ...ಹಣ್ಣು ಕೀಳಲು ಹೋದಾಗ....ಆಗಾಗಾ ಪಕ್ಕದ ಮನೆಯವರೊಡನೆ.... ..ಕಾಡುಕೋಳಿಗೆ ಬಲೆ ಹೆಣೆಯುವುದನ್ನು ನೋಡಲೆಂದೇ    ಹೋಗುತಿದ್ದೆ...

ನಮಗೆ ಬೇಸಿಗೆ ರಜೆಯಲ್ಲಿ ನಾವು ದೀಣೆ ಗೆ ಹೋಗುವುದೆಂದರೆ ಶಿಕಾರಿಗೆ ಹೋದ ಅನುಭವವೇ....ಸರಿ......ಪಕ್ಕದ ಮನೆಯ ಗೆಳೆಯ ಆಗಾಗಾ ದೀಣೆಯಲ್ಲಿ  ಬಲೆ ಹೆಣೆದು ....ಕಾಡು ಕೋಳಿ ಬೇಟೆಯಾಡುತಿದ್ದರು..
ಸೆರೆಸಿಕ್ಕ ಕೋಳಿಯು....ಮೊಟ್ಟೆ ಇಟ್ಟರೆ... ಇತರ ಕೋಳಿಗಳೊಡನೆ...ಕಾವು ಕೊಡಿಸಿ ಮರಿ ಮಾಡಿಸಿ ...ಸಾಕು ಕೊಳಿಗಳ ಮಧ್ಯೆ ಬೆಳೆಸುತಿದ್ದರು...

ಒಂದು ದಿನ ಬೆಳಗ್ಗೆ...ನಾನು ದೀಣೆಗೆ ಶೌಚಕ್ಕೆಂದು ಹೋದಾಗ....ಗೆಳೆಯ ನನಗಿಂತ ಮೊದಲೇ ಬಂದು ಶೌಚ ಮುಗಿಸಿ ಕಾಡು ಕೋಳಿಗೆ ಬಲೆ ಹೆಣೆಯುತಿದ್ದ....ಅದನ್ನು ಕಂಡ ನಾನು ನೋಡುತ್ತಾ....ಅಲ್ಲೇ ಕುಳಿತು....ವಾಪಸ್ಸಾಗುವಾಗ....
ಒಂದು ಪಕ್ಷಿಯ ಧ್ವನಿ ಕೇಳುತಿತ್ತು.......ನೋಡಿದರೆ....ಹಕ್ಕಿಯ ಗೂಡಿನಲ್ಲಿದ್ದ ಮರಿಯೊಂದು ಕೆಳಗೆ ಬಿದ್ದು...ಅಳುತಿತ್ತು....ಅದನ್ನು ನೋಡಿದ ಗೆಳೆಯ...ಕೂಡಲೆ...ಅದನ್ನು ...
ಜೋಪಾನವಾಗಿ ಎತ್ತಿ....ಗೂಡು ಸೇರಿಸಿದ....

""ವಿಶೇಷವೆಂದರೆ ಒಂದು ಪಕ್ಷಿಯ ಪ್ರಾಣ ತೆಗೆಯಲು...ಬಲೆ ಹೆಣೆದು ಬಂದ ಗೆಳೆಯ ಮತ್ತೊಂದು ಪಕ್ಷಿಯ ಪ್ರಾಣ ಉಳಿಸಿದ್ದ.... ""

ನಾನು ಶಾಲೆ ಮುಗಿಸಿ ಬಂದ ಕೂಡಲೆ
ಬ್ಯಾಗನ್ನು....ಬಿಸಾಡಿ....

 ಗೆಳೆಯನ ಮನೆಗೆ ಓಡಿದೆ...

ಇಬ್ಬರು ಒಟ್ಟಿಗೆ ಸಂಜೆ ವೇಳೆ ಬೇಟೆ ಬಿದ್ದಿದೆಯ ಎಂದು ನೋಡಿ ಬರಲು ಹೋದಾಗ...ಒಂದು ಕಾಡು ಕೋಳಿ ಮರಿ ಸೆರೆ ಬಿದ್ದಿತ್ತು... ಗೆಳೆಯ ಅದನ್ನು ಎತ್ತಿಕೊಂಡು ಅವರ ಮನೆಯ ಸಾಕು ಕೋಳಿಗಳ ಗುಂಪಿಗೆ ಬೆಳೆಯಲು ಬಿಟ್ಟರು...

ನಾನು ಮರುದಿನ ಬೆಳಗ್ಗೆ  ಶೌಚಕ್ಕೆಂದು ....ಕುರುಚಲು ಗಿಡಗಳ ಮಧ್ಯೆ ಹೋದಾಗ...ಬೇರೊಬ್ಬರು ಕಾಡು ಕೋಳಿಗೆ  ಹೆಣೆದ ಬಲೆಗೆ ಕಾಲು ಸಿಕ್ಕಿಕೊಂಡ ಅನುಭವ...ಕಣ್ಣ...ಮುಂದೆ ಇನ್ನೂ ಹಸಿರಾಗಿವೆ....

ಬೇಸಿಗೆಯಲ್ಲಿ....ಗೆಳೆಯರೊಡನೆ...ದೀಣೆಗೆ ಹೋಗಿ   ಹಣ್ಣುಗಳ ಬೇಟೆಯಾಡಿ ಹಂಚಿ ತಿಂದು ....ವಾಪಸ್ಸಾಗುತಿದ್ದೆವು....

ಅಲ್ಲಿ  ಬಗೆ ಬಗೆಯ ಮರಗಳು....ನೇರಳೆ...ಸೀಬೆ....ಈಗ ಅಪರೂಪವಾಗಿರುವ ಚೊಟ್ಟೆ ಹಣ್ಣು..ದೊರೆಯುತಿತ್ತು

ಹಾಗೆಯೇ...ಹಲಸಿನಹಣ್ಣು..ಜ್ಯೂಸ್ ಹಣ್ಣು ...ಸಿಗುತಿತ್ತು...ಗೆಳೆಯರೊಡನೆ ಹೋದಾಗ ನಮಗೆ ಬೇಸಿಗೆ ರಜೆ ಸಿಗುತಿದ್ದದ್ದ ..... ಸಮಯದಲ್ಲಿ...ಈ ಹಣ್ಣುಗಳು ಹೇರಳವಾಗಿ ದೊರೆಯುತಿದ್ದವು....ನೇರಳೆ ಮರ ಹತ್ತಿ....ಗೊಂಚಲನ್ನೇ ಮುರಿದು ...ಹಣ್ಣನ್ನು...ಕಿತ್ತಾಡಿ ತಿನ್ನುತಿದ್ದೆವು....ಹಲಸಿನಹಣ್ಣನ್ನು...ಹಂಚಿ ಸವಿಯುತಿದ್ದೆವು....

ಆದರೆ ಈಗ ...ನಾಲ್ಕು  ವರ್ಷ ಗಳ ಹಿಂದೆ ....ಕಾಡು ಮರಗಳನ್ನೆಲ್ಲ ದೈತ್ಯ ಜೆ.ಸಿ.ಬಿ...ದ್ವಂಸ ಗೊಳಿಸಿ ...ಕಾಫಿ ಗಿಡಗಳನ್ನು ನೆಟ್ಟು....ಮುಳ್ಳಿನ ಬೇಲಿಯನ್ನು....ತಮ್ಮ....ತೋಟದ ಸುತ್ತ...ಹಾಕಿದ ಮೇಲೆ...ನಮಗೂ ಆ ಸ್ಥಳಕ್ಕೂ...ಸಂಪರ್ಕ ಸಂಬಂಧವೇ ಇಲ್ಲದಂತಾಗಿದೆ...

ನಾನು ರಜೆಗೆಂದು ನೆನ್ನೆ ಮನೆಗೆ ಬಂದೆ....ನನ್ನ ಚಿಕ್ಕಮ್ಮನ ಮನೆಗೆ ಹೋದಾಗ....ತಿನ್ನಲು ಬಟ್ಟಲು ತುಂಬ  ನೇರಳೆ ಕೊಟ್ಟರು....ಎಲ್ಲಿಂದ ತಂದಿರಿ....ಎಂದಾಗ.....
ಮಾರುಕಟ್ಟೆಯಿಂದ ಎಂದಾಗ ......ಒಂದು ಕ್ಷಣ....ಈ ನೆನಪುಗಳೆಲ್ಲ....ತೇಲಿ ಬಂದವು....

ಕಾಡಿನಲ್ಲಿ ಸುತ್ತಾಡಿ ಕಿತ್ತಾಡಿ ತಿಂದ ಅನುಭವ ಕಲಿಸಿದ ಪಾಠ....

ಅಪ್ಪನ ಬೈಕ್ ಏರಿ ...ಮಾರುಕಟ್ಟೆಗೆ ಹೋಗಿ ಕೇಳಿದಷ್ಟು ಬೆಲೆ ತೆತ್ತು....ತಂದದ್ದರಲ್ಲಿ....ಸಿಕ್ಕೀತೆ....

                  ಅನುಭವ ಕಥನ.
                       ರಚನೆ
          ಶ್ಯಾಮ್ ಪ್ರಸಾದ್ ಭಟ್