ತುಂಬಾ ದಿನದಿಂದ ಕೈ ಯಲ್ಲಿ ಬೆವರು ತುರಿಕೆ ಕಾಣಿಸಿ ಕೊಂಡಿತ್ತು ಇಂದೋ ನಾಳೇ ಕಡಿಮೆಯಾಗಬಹುದು ಎಂದು ನಿರ್ಲಕ್ಷ್ಯ ತೋರಿದೆ...ಆದರೆ ಕ್ರಮೇಣ ಕಡಿಮೆಯಾಗುವಂತೆ ತೋರಲಿಲ್ಲ ...ಗೆಳೆಯನಿಗೆ ತೋರಿಸಿದೆ....ಅವನು ಕೂಡ ನನಗೂ ಮೈಯೆಲ್ಲಾ ಸಣ್ಣ ಸಣ್ಣ ತುರಿಕೆ ಬಂದಿದೆ ಅಂದ .....
ಎಲ್ಲಿ ನೋಡೋಣ ಎಂದು ಕೈ ಕಾಲು ಗಳನ್ನು ಗಮನಿಸಿದೆ...ಸರಿ ಆಸ್ಪತ್ರೆಗೆ ಹೋಗಿಬರೋಣ ಒಮ್ಮೆ ಅಂತ ನಿರ್ದರಿಸಿ ಹಾಸನದ ಹೊಸ ಸರಕಾರಿ ಆಸ್ಪತ್ರೆಗೆ ಹೋದೆವು ... ಮನೆಯಿಂದ
ಹೊರಟದ್ದು 8 ಕ್ಕೆ...ತಲುಪಿದ್ದು 10ಕ್ಕೆ.....
ಹೊಸಬಸ್ ನಿಲ್ದಾಣದಿಂದ ಆಟೋದಲ್ಲಿ ಆಸ್ಪತ್ರೆ ಕಡೆಗೆ ಹೊರಟೆವು....ನನ್ನ ಗೆಳೆಯ ನಾನು ದೊಡ್ಡ ಆಸ್ಪತ್ರೆಯಲ್ಲಿ ೧೪೦ ರ ಚರ್ಮ ರೋಗದ ಡಾಕ್ಟರ್ ಸಿಗುವ ಕೊಠಡಿ ಹುಡುಕಲು ಹರಸಾಹಸ ಪಟ್ಟು ಹುಡುಕಿದೆವು ....
ಆಗಾಗಲೇ ಜನ ಜಮಾಯಿಸಿ ಸಾಲುಗಟ್ಟಿದ್ದರು ನಾವು ಸಾಲಿನಲ್ಲಿ ಸೇರಿಕೊಂಡೆವು ...
ನನ್ನನ್ನು ಮೊದಲು ಪರೀಕ್ಷೆ ಮಾಡಿದ ಡಾಕ್ಟರ್ ಬೆವರು ತುರಿಕೆಯಿಂಗದ ಹೀಗಾಗಿದೆ ....ಎಂದು permethrin ointment ಬರೆದು ಕೊಟ್ಟರು ರಾತ್ರಿ ವೇಳೆ ಹಚ್ಚಿಕೊಂಡು ಬೆಳಗ್ಗೆ ಸ್ನಾನ ಮಾಡಲು ಹೇಳಿದರು ಸರಿ ಎಂದು ಹೊರ ಬಂದೆ...
ನನ್ನ ಹಿಂದೆ ಇದ್ದ ಗೆಳೆಯ ಒಳ ನೆಡೆದ....
ಆವನನ್ನು ಪರೀಕ್ಷಿಸಿ ಬೇಸಿಗೆಗೆ ಚರ್ಮ ಬಿಳಿಗಟ್ಟಿದ್ದಿರ ಬಹುದು...ಆದರೂ ನೋಡಿ....ICTC blood test ಗೆ ಬರೆದರು ....
ICTC blood Test ವಿಭಾಗ
ಚರ್ಮ ಹಾಗೂ ಲೈಂಗಿಕ ಸಮಸ್ಯೆ ವಿಭಾಗ ಹೊಂದಿಕೊಂಡಂತಿವೆ...
blood test ಕೊಠಡಿಯಲ್ಲಿ
ಏಡ್ಸ್ ರೋಗದ ಲಕ್ಷಣಗಳ ಬಗೆಗೆ ಪಟ್ಟಿ ತೂಗು ಹಾಕಿದ್ದರು ಅದನ್ನು ಓದುತಿದ್ದ ಗೆಳೆಯ ಒಮ್ಮೆ ಗಾಬರಿ ಬಿದ್ದ
ಕಾರಣ..... ಲಕ್ಷ್ಮಣಗಳಲ್ಲಿ ಬಿಳಿ ತುರಿಕೆ ಎಂದಿತ್ತು ....😊
ಗಾಬರಿಗೊಂಡಾಗ ಯೋಚನಾ ಕಾರ್ಯ ಕಡಿಮೆ...
ಲೋ ಗುರು...ನಂಗೇನೋ ದೊಡ್ಡರೋಗ ಬಂದಿದೆ ಅನ್ಸುತ್ತೆ ನೋಡಲ್ಲಿ ಅಂತ ಆ ಪಟ್ಟಿ ಕಡೆಗೆ ಕೈ ತೋರಿಸಿದ...ನಾನು ಓದಿದೆ...
ಹೌದು ಕಣೋ ಇದ್ದರೂ ಇರಬಹುದು ಅಂತ ಅವನನ್ನ ಇನ್ನಷ್ಟು ಗಾಬರಿಗೊಳಿಸಿದೆ....
ಅಷ್ಟರಲ್ಲಿ ಅವನ ಸರದಿ ಬಂದು ಒಳ ನೆಡೆದ ....
ರಕ್ತ ಪರೀಕ್ಷಕರು ಅವನ ಮಾಹಿತಿ ಪಡೆದು ರಕ್ತ ತೆಗೆದು...ಲ್ಯಾಬ್ ಗೆ ಕಳುಹಿಸಿದರು...
ಅವನಿಗೆ ಕಾಲು ಕೈ ನಡುಕ ರಕ್ತ ಪರೀಕ್ಷಕರನ್ನು ಕೇಳೇ ಬಿಟ್ಟ...
ಸರ್ ಇದು ಏಡ್ಸ್ ಇದೆಯೋ ಇಲ್ವೋ ಅಂತ ಚೆಕ್ ಮಾಡಲು ರಕ್ತ ತಗೋಂಡಿದ್ದ ಅಂತ ...
ಪರೀಕ್ಷಕರು ಹೌದು ಎಂದು ಪ್ರತಿಕ್ರಿಯಿಸಿದರು ....
ಇವನಿಗೆ ಜೀವ ಬಾಯಿಗೆ ಬಂದಂತಾಗಿ......
ಸರ್ ನನಗೇಗೆ ಬಂತು ಸಾರ್ ಈ ಹಾಳಾದ್ ರೋಗ ಎಂದ..
ಅದಕ್ಕೆ
ರಕ್ತ ಪರೀಕ್ಷಕರ ಉತ್ತರ ಚನ್ನಾಗಿತ್ತು....
ತುಸು ಹಾಸ್ಯವಾಗಿ ನಗುತ್ತ....
.ಲೋ ನೀನು ಪೋಲಿಸ್ ಸ್ಟೇಷನ್ ಗೆ ಹೋಗಿರ್ತೀಯ ಸರಕಾರಿ ಕೆಲಸಕ್ಕೆ "ನಡವಳಿಕೆ ಪ್ರಮಾಣ ಪತ್ರ " ತರೋಕೆ....ಪೋಲೀಸ್ ಸ್ಟೇಷನ್ ಲಿ ಇದ್ದೀಯ ಅಂದ ಮಾತ್ರಕ್ಕೆ ನಿನ್ನ ಕಳ್ಳ ಅಂತ ಜೈಲ್ ಗೆ ಹಾಕ್ತಾರ...
ಇಲ್ಲ ಅಲ್ವ ಹಾಗೆ.....ನಿನ್ನ ಪರೀಕ್ಷೆ ಮಾಡಿ ಉತ್ತರ ಹೇಳ್ತೇವೆ...
ಹಾಗೇ....ಲೈಂಗಿಕ ವಿಭಾಗಕ್ಕೆ ಬಂದೋರೆಲ್ಲ ಏಡ್ಸ್ ರೋಗಿಗಳಲ್ಲ....
ವಿದ್ಯಾವಂತ ನೀನೆ ಭಯ ಪಟ್ರೆ...ಹಾಸನದ ಸುತ್ತ ಮುತ್ತ ಇರೋರು ಹಳ್ಳಿಯೋರು ಅವರು ಇನ್ನೆಷ್ಟು ಭಯ ಪಡ್ಬೇಕು....
ಗೆಳೆಯ ತುಸು ಸಮಾಧಾನಗೊಂಡಂತಾದ....
ಹೀಗೆ ಸಮಸ್ಯೆಗಳು ದೊಡ್ಡವಲ್ಲ...
ನಾವು ಅವುಗಳಿಗೆ ಪ್ರತಿಕ್ರಿಯಿಸುವ ರೀತಿಯಿಂದ ಅವು ದೊಡ್ಡವಂತೆ ಭಾಸವಾಗುತ್ತವೆ...
ರಚನೆ
✍ ಶ್ಯಾಮ್ ಪ್ರಸಾದ್ ಭಟ್
ಬಹಳ ಸೊಗಸಾಗಿ ಬರೆದಿದ್ದೀರಾ ಸಾರ್ ....
ReplyDeleteThank u sir...
ReplyDelete