ಗೆಳೆಯನ ಬಳಿ ಇದ್ದ ಹಳೇ ಮೊಬೈಲ್ ಅವನ ಮನೆಯಲ್ಲಿ ಅಪ್ಪನೊಡನೆ ಜಗಳವಾಡುವಾಗ....ಅಪ್ಪನ ಮೇಲಿನ ಕೋಪವನ್ನು ನಿರ್ಜೀವ ತನ್ನ ಮೊಬೈಲ್ ಮೇಲೆ ತೋರಿಸಿದ್ದ...
ಅದು ನನಗೆ ತಿಳಿದಿತ್ತು...
ಅದಾದ ಮೇಲೆ ಅವನು ಹೊಸ ಮೊಬೈಲ್ ಕೊಂಡಿರಲಿಲ್ಲ...
ಕೊಳ್ಳುವುದಾದರೆ ನನ್ನ ಸಲಹೆ ಕೇಳಿಯೇ ಕೇಳುತಿದ್ದ
..
ನಾನು ಅವನು ಭೇಟಿಯಾಗಿ ತುಂಬಾ ದಿನವಾಗಿತ್ತು..
ಎಲೆಕ್ಷನ್ ಕಾರಣ ನಾನು ಮನೆಗೆ ಬಂದಿದ್ದೆ...
ಅವನು..ಕೆಲಸದಲ್ಲಿ ಬಿಡುವು ಮಾಡಿಕೊಂಡು ಸಿಕ್ಕ...
ಅವನು ನನಗಿಂತ ಮೊದಲೇ ಬಂದು ಜಗಲಿ ಮೇಲೆ ಕೂತು..ಮೊಬೈಲ್ ನಲ್ಲಿ ಶಿವಕುಮಾರ ಸ್ವಾಮಿಗಳ ಬಗೆಗೆ...YouTube ನಲ್ಲಿ ಇದ್ದ...ಪವಾಡ ಪುರುಷ ಶಿವಕುಮಾರ ಸ್ವಾಮಿ ...ಎಂಬ ವೀಡಿಯೋ ನೋಡುತಿದ್ದ...
ಅವನಿಗೆ ಶಿವಕುಮಾರ ಸ್ವಾಮಿಗಳ ಮೇಲೆ...ತುಂಬಾ ಭಕ್ತಿ ಗೌರವ...
ನನಗೂ ಅವರನ್ನು ಕಂಡರೆ ಅಪಾರ ಗೌರವ...
ನಾನು ಬಂದು ತುಂಬಾ ಹೊತ್ತಾದರು ಮಾತಾಡದೆಯೆ...ವೀಡಿಯೋ ವನ್ನೇ ನೋಡುತಿದ್ದ...
ನಾನೇ ಮಾತು ಆರಂಭಿಸಿದೆ...
ಮೊಬೈಲ್ ಯಾವಾಗ ತಗೊಂಡ್ಯಪ್ಪ...
ಯಾರಿಗೂ ಹೇಳ್ಬೇಡ ಇದು ಸಿಕ್ಕದ್ದು...
ಎಲ್ಲೋ...?? ಎಂದೆ.
ಇಲ್ಲೇ ಹೊಸಪುರಕ್ಕೆ ಹೋಗುವ ರಸ್ತೆ ಯಲ್ಲಿ...ಎಂದ
ಯಾರದ್ದು ಅಂತಾ ಏನಾದ್ರು ಗೊತ್ತಾಯ್ತ ಎಂದೆ..
ಹುಮ್ ನಮ್ಮ ಜೊತೆ ಡಿಗ್ರಿ ಗೆ...ಹೊಸಪುರದಿಂದ ಒಬ್ಬ ರಾಮು ಅಂತಾ ಬರ್ತಿದ್ದ ನೋಡು ಅವನ್ದೇ...
ಫೋಟೋ ಎಲ್ಲಾ ಇತ್ತು...
ಹಾಗಿದ್ರೇ ಕೊಡೊದಲ್ವೇನೋ...??..
ಎಂದೆ
"ಯಾಕೆಂದರೆ ನನ್ನ ಮೊಬೈಲ್ ಮೈಸೂರಿನಲ್ಲಿ ಬಸ್ಸು ಹತ್ತುವಾಗ ಯಾರೋ ರಶ್ ನಲ್ಲಿ ನನ್ನ ಮೊಬೈಲ್ ಕದ್ದಿದ್ದ...ನಾನು ಮೊಬೈಲ್ ಕಳೆದು ಕೊಂಡಿದ್ದೆ....
ಈ ಘಟನೆ ನನ್ನ ಈ ಮನೋಧಾರಣೆ ತಳೆಸಿತ್ತು..."
ಅದಕ್ಕೆ ಅವನು ಹೇ ಸುಮ್ನಿರು ಮರಾಯ...ಮೊಬೈಲ್ ಇಲ್ದೇ ಬೋರ್ ಹೊಡಿತಿತ್ತು...ಅಪ್ಪನ ಜೊತೆ ಜಗಳ ಬೇರೆ ಹೊಸ ಮೊಬೈಲ್ ತಗೋಳೊಕೆ ಆಗ್ತಿರ್ಲಿಲ್ಲ.
ಹೇಗೋ..ನನ್ ಕಷ್ಟ ನೋಡಲಾರ್ದೇ...ದೇವರೇ ಕೊಟ್ಟಿರೋದು...ಎಂದು ಬಿಟ್ಟ
ನನಗೆ ಮರು ಮಾತಾಡಲು ಮಾತಿಲ್ಲದೆ ಸುಮ್ಮನಾದೆ...
ವೀಡಿಯೊ ನೋಡುತ್ತ....
ನೋಡೋ ಶಿವಕುಮಾರ ಸ್ವಾಮ್ಗಳು ಅವಾಗ ಮಠದಲ್ಲಿ ಹಚ್ಚಿದ ಒಲೆ ಇನ್ನು ಆರಿಲ್ವಂತೆ ಇದು ಪವಾಡ ಪುರುಷರಿಗೆ ಮಾತ್ರ ಹೀಗೆಲ್ಲ ಮಾಡೋಕ್ ಸಾದ್ಯ..
ಬೇರೆ ಸನ್ಯಾಸಿಗಳಂಗಲ್ಲ ಇವ್ರು...
ಅವ್ರ ಸಾವು ಯಾವತ್ತು ಬರುತ್ತೇ ಅಂತಾನು ಗೊತ್ತಿತ್ತಂತೆ...
ಅವರು ಎಂತಾ ಅನಾರೋಗ್ಯ ಇದ್ರು ದೇವರ ಪೂಜೆ ಮಾತ್ರ ಬಿಡ್ತ ಇರ್ಲಿಲ್ವಂತೆ...
ಇದೆಲ್ಲ ದೇವರ ಸ್ವರೂಪರಾದ ಅವರಿಗೆ ಮಾತ್ರ ಸಾದ್ಯ ನಮಗೆಲ್ಲ ಸಾದ್ಯ ಆಗಲ್ಲ ಅಲ್ವ... ಎಂದ...
ಹೌದಪ್ಪ ...
50000 ಜನಕ್ಕೆ ಪ್ರತಿನಿತ್ಯ ದಾಸೋಹ ಮಾಡೊದು ಕಷ್ಟವೇ ಆದರೆ ನಿಮ್ಮ ಮನೆ ತನಕ್ಕೆ...2 ಜನಕ್ಕೆ ದಾಸೋಹ ಮಾಡೊದು ಕಷ್ಟವೇನಲ್ಲ...
ನೀನು ದಿನಕ್ಕೆ...ಮೊಬೈಲ್ ನಲ್ಲಿ ಕಳೆಯುವ 12 ಗಂಟೆಯಲ್ಲಿ...ಹತ್ತು ನಿಮಿಷ ದೇವರ ಧ್ಯಾನ ಮಾಡೋದು ಕಷ್ಟ ವಾಗ ಬಹುದು....
ಅವರು ತಮ್ಮ ದೇಹ ಮತ್ತು ಜಗತ್ತಿನ ಮೇಲಿನ ಮೋಹ ಕಳೆದು ಕೊಂಡರು ....
ನೀನು ನಿನ್ನದಲ್ಲದ ಮೊಬೈಲ್ ಮೇಲಿನ ಮೋಹವನ್ನೇ ಕಳೆದು ಕೊಳ್ಳಲು ತಯಾರಿಲ್ಲ....
ಎಲ್ಲರು...ಅವರಂತೆ ಬದುಕಲಾಗಲ್ಲ ನಿಜ....ಅದರೆ ಅವರ ಆದರ್ಶಗಳನ್ನು ಚಿಕ್ಕ ಮಟ್ಟದಲ್ಲಿಯೇ...ಪಾಲಿಸ ಬಹುದು...
ಆ ಪಾಲನೆ ನಿನ್ನದಾದಾಗ...ಅವರು ದೇವರಾಗಿ ಕಾಣೋಲ್ಲ
ಆದರ್ಶ ವ್ಯಕ್ತಿಯಾಗಿ ಕಾಣುತ್ತಾರೆ....
ಹೀಗೆ ಹಲವರನ್ನು ದೇವರನ್ನಾಗಿಸಿ... ಅವರ ಆದರ್ಶ ಜೀವನವನ್ನ ಪವಾಡವಾಗಿ ಕಾಣುತಿದ್ದೇವೆ....
ನೀನು ನಿನಗೆ ಸಿಕ್ಕ...ಮೊಬೈಲ್ ರಾಮು ಗೆ ಕೊಟ್ಟಿದ್ದರೆ...ರಾಮು ದೃಷ್ಟಿ
ಯಲ್ಲಿ ಬಹಳ ಎತ್ತರದಲ್ಲಿರುತಿದ್ದೆ...
ಆದರ್ಶ ವ್ಯಕ್ತಿ ಗಳು ಸಣ್ಣ ವಿಷಯ ಸುಖಗಳನ್ನು ಗೆದ್ದು ದೊಡ್ಡ ಸಾಧನೆಯತ್ತ ತೊಡಗಿದವರು...
ನಾವು ಸಣ್ಣ ವಿಷಯಗಳನ್ನು ನಿರ್ಲಕ್ಷ್ಯ ಮಾಡುತ್ತ ದೊಡ್ಡ ದೊಡ್ಡ ಅಪರಾಧದತ್ತ ಸಾಗುತಿದ್ದೇವೆ...
ಒಬ್ಬ ವಿದ್ಯಾರ್ಥಿಗೆ ಒಂದು ವಿಷಯದಲ್ಲಿ ಫೇಲ್ ಆಗುವವರೆಗೂ ಮಾತ್ರ ಅವಮಾನ ಎನಿಸುತ್ತದೆ...ನಂತರ ಫೇಲ್ ಆಗುವ ವಿಷಯಗಳು ಅವನ ಲೆಕ್ಕಕ್ಕೆ ಬರುವುದಿಲ್ಲ ...
ಒಟ್ಟಾರೆ ಆದರ್ಶ ವ್ಯಕ್ತಿಗಳ ಮೂರ್ತಿಗಳನ್ನು ಹೆಚ್ಚಿಸಿ...ದೇವರನ್ನಾಗಿಸದೆ...
ಆದರ್ಶಗಳನ್ನು ಪಾಲಿಸಿ ಆದರ್ಶ ವ್ಯಕ್ತಿ ಗಳ ಸಂಖ್ಯೆ ಹೆಚ್ಚಿಸಿ....
ರಚನೆ
ಶ್ಯಾಮ್ ಪ್ರಸಾದ್ ಭಟ್