ಶಿಶುಗೀತೆ
ತಾರ
ಹೋದೆಯ ದೂರ
ದೂರದ ತಾರಾ
ಹುಡುಕಲು ನಿನ್ನ
ಹಗಲಾಯ್ತು
ಇರುಳಲಿ ಬರುವೆ
ಬೆಳಕನು ತರುವೆ
ಕತ್ತಲನು ಸರಿವೆ
ಮೋಡದಿ ನಿನ್ನ ಮುಚ್ಚಿ
ಮಿರ ಮಿರ ಮಿಂಚುವ ಮಿಂಚು
ಬಲ್ಲೆಯ ಅದರ ಸಂಚು
ನಿನ್ನನು ಮುಚ್ಚಿ ತಾನು ಮಿಂಚುವ ಸಂಚು
ಮುಗಿಲಿಗೆ ನೀನೆ ಮುತ್ತಿನ ಓಲೆ
ಅಂದವ ಹೆಚ್ಚಿಸೋ ಮುತ್ತಿನ ಮಾಲೆ
ಚಂದ ನಿನ್ನ ಹೊಳಪು
ನಿನ್ನ ಬಣ್ಣ ಬಿಳುಪು
ನಿನ್ನ ಮನೆ ಆಗಸದೊಳಗ
ಹೆಚ್ಚು ನಿನ್ನ ಗೆಳೆಯರ ಬಳಗ
ಹಾಡುತ ಹಾಡುತ ಹಗಲಾಯ್ತು
ನಿನ್ನ ಕಳಿಸಲು ಹೊತ್ತಾಯ್ತು...
ರಚನೆ
ಶ್ಯಾಮ್ ಪ್ರಸಾದ್ ಭಟ್
Superb lines....
ReplyDelete