ಟಕ್.....ಟಕ್....
ಯಾರೋ ಬಾಗಿಲು ಬಡಿದ ಸದ್ದಾಯ್ತು....
ಹೊರಗಿನಿಂದ ಮೇಜರ್.... ಮೇಜರ್....
ಆ ರಹಾ ಹು....
message From Your native...
ಎಂದು ಹೇಳಿ ವೈರ್ ಲೆಸ್ ಫೋನ್ ನ್ನು....ಕೈಗಿತ್ತನು...
ಫೋನ್ ಕೈಗೆ ತೆಗೆದು ಕೊಂಡ ಮೆಜರ್ ಗೆ ....
ಆ ಕಡೆಯಿಂದ ಅಳುತ್ತಾ....ರೀ ಅತ್ತೇ.....ಹೊಗ್ಬಿಟ್ರು ರೀ...
ಎಂದು ಹೇಳಿದ ಧ್ವನಿ ಕೇಳಿಸಿತು....
ಹೌದು ಅಮ್ಮನಿಗೆ ಆರೋಗ್ಯ ಸರಿ ಇಲ್ಲ ಹಾಸಿಗೆ ಹಿಡಿದಿದ್ದಾರೆ ಎಂಬ ಫೋನ್ ಮನೆಯಿಂದ ಬರುತಿತ್ತಾದರು ....
ಮೇಜರ್ ಅಜಿತ್ ಗೆ ಏನೂ ಮಾಡಲಾಗದ ಸ್ಥಿತಿ...
ಅದು 1962 ರ ಭಾರತ ಮತ್ತು ಚೀನಾ ಮುಸುಕಾಗಿ ಗುದ್ದಾಡುತಿದ್ದ ಸಮಯ....ಯಾವ ಸಮಯದಲ್ಲಾದರು ಚೀನೀ ಸೈನಿಕರು ....ದಾಳಿಯಿಡಬಹುದೆಂದು ಕಣ್ಣಲ್ಲಿ ಕಣ್ಣಿಟ್ಟು ಕಾಯ ಬೇಕಾಗಿದ್ದ ಸಮಯ ....ಅದಕ್ಕಾಗಿಯೇ...ಅಜಿತ್ ಅಮ್ಮನಿಗೆ ಆರೋಗ್ಯ ಸರಿ ಇಲ್ಲವೆಂದರು ರಜೆ ಪಡೆಯದೆ....ತನ್ನ ಕರ್ತವ್ಯ ನಿರ್ವಹಿಸುತಿದ್ದ...
ಆದರೆ ಈಗ ಇದ್ದಕಿದ್ದಂತೆ....ಸಿಡಿಲು ಬಡಿಯುವಂತ ನಿರೀಕ್ಷೀಸಿರದ ಸುದ್ದಿ ಬಂದಿದೆ....
ಒಬ್ಬನೇ....ಮಗ ತಾಯಿ ಕಾರ್ಯದಲ್ಲಿ ಪಾಲ್ಗೊಳ್ಳಲೇ ಬೇಕು...
ನೀನ್ ಸಮಾಧಾನ ಮಾಡ್ಕೋ ಶಾಂತ..... ನಾನ್ ಇವತ್ತೇ ಹೊರಡ್ತೀನಿ....ನಾಡಿದ್ದರ ಬೆಳಗ್ಗೆ ಅಷ್ಟರಲ್ಲಿ....ನಾನಲ್ಲಿರ್ತಿನಿ.....
ಸರಿ ಬೇಗ ಬನ್ನಿ.....ಎಂದು ಅಳುತ್ತಾ ಫೋನ್ ಇಟ್ಟಳು....
ಅಜಿತ್ ತನ್ನ ಚಿಕ್ಕಪ್ಪನಿಗೆ ಫೋನ್ ಮಾಡಿ...
ಚಿಕ್ಕಪ್ಪ ..ವಿಷ್ಯಾ ಗೊತ್ತಾಯ್ತು....
ಒಂದು ಕೂಲ್ ಶವ ಪೆಟ್ಟೆಗೆ ತರಿಸಿ....ಬಾಡಿಯನ್ನ ....ಇರಿಸಿ ನಾನು ಬರೋದು ಎರಡು ದಿನ ಆಗತ್ತೆ....
ಸರಿ ಪುಟ್ಟಣ್ಣ...
ಅಜಿತ್ ತಕ್ಷಣವೇ ಆರ್ಮಿ ಜನರಲ್ ಗೆ....ವಿಷಯ ತಿಳಿಸಿ ರಜಾ ಮಂಜೂರು ಮಾಡಿಸಿಕೊಂಡ...
ತುರ್ತು ಹೆಲಿಕಾಪ್ಟರ್ ಬಳಸಿ ಹಿಮಾಚಲ ಪ್ರದೇಶದ ಗಗ್ಗಲ್ ವಿಮಾನ ನಿಲ್ದಾಣ ತಲುಪಿದ .....
ಅಲ್ಲಿಂದ ದೆಹಲಿಗೆ ಮದ್ಯಾಹ್ನದ ವಿಮಾನ ಏರಿ ....
ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣ ತಲುಪಿ ....ಅಲ್ಲಿಂದ ಬೆಂಗಳೂರಿಗೆ ರಾತ್ರಿ 1:50 ರ ವಿಮಾನ ಹತ್ತಿ... ಹೊರಟವನು ಬೆಳಗಿನ ಮುಂಜಾವು 4:00 ಗಂಟೆಗೆ ತಲುಪಿದನು .
ಬೆಂಗಳೂರಿನಿಂದ ಮಡಿಕೇರಿಗೆ 6:00 ಗಂಟೆಗಳ ಪ್ರಯಾಣ.... 10:00 ಗಂಟೆ ಹೊತ್ತಿಗೆ ಮಡಿಕೇರಿಯ ತನ್ನ ಮನೆಗೆ ತಲುಪಿದ...
ಗೇಟಿನಿಂದ ...ಮುಂಬಾಗಿಲಿನ ವರೆಗೂ ಜನ ತುಂಬಿದ್ದರು...
ನಮ್ ಸುಬೇದಾರ್ ಹೆಂಡ್ತಿ ಅಂದ್ರೆ ಊರ್ಗೆಲ್ಲ ಗೌರವ
ಹೇ ನಮ್ ಸುಬೇದಾರ್ರು ಅವ್ರೇನ್ ಕಡ್ಮೆನಾ??
ಊರಿನ್ ಹಬ್ಬ ಜಾತ್ರೆ ಎಲ್ಲಾ...ಮುಂದೆ ನಿಂತ್ಕಂಡ್ ಮಾಡ್ಸೋರು
ಅವ್ವರು ಅಯ್ಯಾರು ಹೋದ್ಮಲೆ.....ಅವ್ರು ಆ ಸ್ಥಾನ ತುಂಬಿದರು
ಹೀಗೆ ಸುತ್ತ ಮುತ್ತ ನೆರೆದವರ ಮಾತುಗಳು ಮೇಜರ್ ಅಜೀತ್ ನ ಕಿವಿಗೆ ತಾಕಿ ದೂರ ಹೋಗುತಿದ್ದವು...
ಭಾರವಾದ ಮನಸ್ಸಿನಿಂದ ....ಭಾರವಾದ ಹೆಜ್ಜೆ ಇಡುತ್ತಾ ...ಮುಂಬಾಗಿಲಿಗೆ ಬಂದ ...
ಹೋ ಪುಟ್ಟಣ್ಣ ಬಂದ .....ಎಂದು ಬಾಗಿಲಲ್ಲಿ ಮುತ್ತಿದ್ದ ಜನ ಅತ್ತಿತ್ತ ಸರಿದರು....
ಅಜೀತನನ್ನು ನೋಡಿದೊಡನೆ... ಗರ್ಭವತಿ ಶಾಂತ ನಿಧಾನವಾಗಿ ಹೊಟ್ಟೆ ಹಿಡಿದು ಎದ್ದು ಕಣ್ಣೀರು ಸುರಿಸುತ್ತಾ ಬಳಿ ಬಂದಳು....
ರೀ..... ಅತ್ತೇ....
ಎಂದು ಅಳುತ್ತಾ ಅಜಿತನನ್ನು ತಬ್ಬಿದಳು....
ಶಾಂತಾ ಗೆ ಮೂರು ತಿಂಗಳು ತುಂಬಿ ನಾಲ್ಕನೇ ತಿಂಗಳು ನೆಡೆಯುತಿತ್ತು....
(ಅಜಿತ್ ಇಂದು ಬಂದು ತಲುಪುತ್ತಾನೆಂದು ಅಮ್ಮನ ದೇಹವನ್ನು ಪೆಟ್ಟಿಗೆಯಿಂದ ತೆಗೆದು ಅವರು ಯಾವಾಗಲು ಮಲಗುತಿದ್ದ ದಿವಾನ್ ಮೇಲೆ ಮಲಗಿಸಿದ್ದರು)
ಅಮ್ಮ....
ಮಲಗುವ ದಿವಾನ್ ಮೇಲೆ ಅಮ್ಮ....ಬಿಳಿ ವಸ್ತ್ರವ ಹೊದ್ದು ಅಲುಗಾಡದಂತೆ ಮಲಗಿದ್ದಳು....
ಹೋದ ಸಲ ಬಂದಾಗ ಅಮ್ಮ ಹೀಗೇ ದಿವಾನಿನ ಮೇಲೆ ಮಲಗಿದ್ದಳು...
ನಾನು ಕಳ್ಳ ಬೆಕ್ಕಿನ ಹೆಜ್ಜೆ ಇಟ್ಟು .....ಕಾಲು ಒತ್ತುತ್ತಾ ಕಾಲ ಬಳಿ ಕುಳಿತಾಗ
ಅಮ್ಮ...ಕಣ್ಣು ಬಿಟ್ಟೊಡನೆ ನನ್ನ ಕಂಡು ....ಅರೇ..ಯಾವಾಗ್ ಬಂದ್ಯೋ ಪುಟ್ಟಣ್ಣ....ಎಂದು ಬಾಚಿ ತಬ್ಬಿ ಅತ್ತು....ಏನಾದ್ರು ತಿಂದ್ಯೇನೋ ಮಗನೇ....ಎಂದು ಕೇಳಿದವಳು...
ಇವತ್ತು ನಾನು ಬಂದು ತುಂಬಾ ಹೊತ್ತಾದರು ...ಮಾತಾಡಿಸದೇ ಮಲಗಿದ್ದಾಳೆ....
ಎಂದು ಕಣ್ಣಿನಿಂದ ಹನಿಯೊಂದು ಜಾರಿ ಬಿತ್ತು...
ಯುದ್ಧದಲ್ಲಿ ಹೋರಾಡುವಾಗ ನನ್ನ ಸಹೋದ್ಯೋಗಿಗಳು ಕಣ್ಣೆದುರೆ ಶತ್ರುಗಳ ಗುಂಡಿಗೆ ಬಲಿಯಾದಾಗ ....ಕದಡದ ಹೃದಯ ಇಂದು ತಲ್ಲಣಿಸಿ ಹೋಗಿತ್ತು...
ಅಮ್ಮ...ಕೊಟ್ಟ ಕೈ ತುತ್ತು....ಅಮ್ಮ ಹಾಡಿದ ಲಾಲಿ...ಅಮ್ಮ ಹೇಳಿದ ಸಾಂತ್ವಾನ...ಅಮ್ಮ ನೀಡಿದ ದೈರ್ಯ......ಅಪ್ಪ ನಮ್ಮನ್ನೆಲ್ಲ ಅಗಲಿದಾಗ ಆಕೆ ತೋರಿದ ಧೈರ್ಯ ...ಜೀವನ ಸಾಗಿಸಿದ ಬಗೆ...
ಅಮ್ಮ ಕಲಿಸಿದ ಬೆಳೆಸಿದ ದೇಶ ಪ್ರೇಮ...
ನನ್ನನ್ನ ಒಬ್ಬ ಸೈನಿಕನನ್ನಾಗಿ ರೂಪಿಸಿದೆ...
ಆದರೆ.... ಆದರೆ.....
ಅಮ್ಮಾ.....ಎಂದು ನಿಂತವರ ಎದೆ ಕರಗುವಂತೆ ಜೋರಾಗಿ ದುಃಖ ಉಮ್ಮಳಿಸಿ ಬಂದು ಅತ್ತ....
ಅಲ್ಲೇ ನಿಂತಿದ್ದ ಚಿಕ್ಕಪ್ಪ...ರಂಗಣ್ಣ... ಅಜಿತ್ ನಿಗೆ ಸಮಾಧಾನ ಹೇಳಿ....ಹೊರ ಕರೆತಂದರು...
ಮದ್ಯಾಹ್ನ ಮುಗಿದು ಸಂಜೆ ಕೆಂಪೇರುವ ಹೊತ್ತಿಗೆ ತಾಯಿಯ ಅಗ್ನಿ ಕಾರ್ಯವನ್ನ ಒಬ್ಬನೇ ಮಗನಾಗಿದ್ದ ಅಜಿತ್ ಭಾರವಾದ ಮನಸ್ಸಿನಿಂದ ನೆರವೇರಿಸಿದ....
ಆ ದಿನ ಮನೆಯ ಎಲ್ಲಾ ಮೂಲೆಯಲ್ಲು ನೀರವ ಮೌನ....
ಮರುದಿನ ಅಜಿತನ ಚಿಕ್ಕಪ್ಪ...ಅಜಿತನ ಮನೆಗೆ ಬಂದರು...
ಪುಟ್ಟಣ್ಣ...
ಪುಟ್ಟಣ್ಣ ....
ಹಾಂ....ಬನ್ನಿ ಚಿಕ್ಕಪ್ಪ ...ಎಂದ ಅಜೆತ್
ಬಾ . ಬಾ ನಮ್ಮ ಮನೆಗೆ ಹೋಗಿ ಸ್ವಲ್ಪ ತಿಂಡಿ ತಿನ್ಕೊಂಡು ಶಾಂತಾಗು ಸ್ವಲ್ಪ ತಿಂಡಿ ತರೋಣ...
ಇಲ್ಲ ಚಿಕ್ಕಪ್ಪ ...ನನಗೆ ಹಸಿವಿಲ್ಲ....ಸರಿ ಮನೆಗೆ ಬೇಡ ಬಾಬಣ್ಣನ ಹೋಟೆಲ್ ಇಡ್ಲಿ ಅಂದ್ರೆ ನಿಂಗಿಷ್ಟ ಅಲ್ವ ಅಲ್ಲೇ ಹೋಗೋಣ ಬಾ... ಹೋಟೆಲ್ ಗೆ ಹೋಗಿ ಸ್ಪಲ್ಪ ಏನಾದ್ರು ತಿಂದು ...ಮನೆಯವ್ರಗೂ ಕಟ್ಟುಸ್ಕೊಂಡ್ ಬರೋಣ...
ಇಲ್ಲ ಚಿಕ್ಕಪ್ಪ ನಂಗ್ ಹಸಿವಿಲ್ಲ....ನೀವ್ ಹೋಗಿ..
ನೆನ್ನೆಯಿಂದ ಅನ್ನ ನೀರು ಮುಟ್ಟಿಲ್ಲ....ಹಸಿವಿಲ್ಲ...ಅಂದ್ರೆ ಹೆಂಗೋ....
ಬಾರೋ ಪುಟ್ಟಣ್ಣ.. ....ಆಗಿದ್ದೆಲ್ಲ....ಆಯ್ತು....ಈಗ ನಮ್ ಕೈಯಲ್ಲಿ ಏನು ಇಲ್ಲ....ಭಗವಂತ ನೆಡುಸ್ದಂಗ್ ನೆಡಿಬೇಕು.. ಬಾ ಹೊಲದ ಕಡೆ ಸ್ವಲ್ಪ ಸುತ್ತಾಡಿ ಬರುವಂತೆ....
ಅಜಿತ್ ಚಿಕ್ಕಪ್ಪನೊಂದಿಗೆ ಹೊರಟ
ಮನೆಯಿಂದ ಸ್ವಲ್ಪ ದೂರ ಕಾಲ್ನಡಿಗೆಯಲ್ಲಿ ಸಾಗಿದರು....ಸುಬೇದಾರ್ ಸುಬ್ಬಣ್ಣ ಕಾಫಿ ಎಸ್ಟೇಟ್ ...ಎಂಬ ಕಪ್ಪು ಬಣ್ಣದ ಬೋರ್ಡ್ ಪಕ್ಕದಲ್ಲಿ...ಆರು ಎಕರೆ ಜಮೀನು..
ಎಸ್ಟೇಟ್ ಒಳ ಹೊಕ್ಕ ಇಬ್ಬರು....
ಅಪ್ಪ ಇದ್ದಾಗ ಎಸ್ಟೇಟ್ ಕೆಲಸ ಎಲ್ಲಾ ನಿಂತು ಅಚ್ಚುಕಟ್ಟಾಗಿ ನೋಡಿಕೊಳ್ತಿದ್ರು ಅವ್ರು ಹೋದ್ ಮೇಲೆ...ಅಮ್ಮ ಅಪ್ಪ ನಂತೆ ಗಟ್ಟಿಗಿತ್ತಿ...ಅಪ್ಪ ಹೋದ ಮೇಲು ಎಸ್ಟೇಟ್ ನ ಈ ಸುಸ್ತಿತಿಯಲ್ಲಿ ಇಟ್ಟಿದ್ದಾರೆ...
ಚಿಕ್ಕಪ್ಪ ಒಂದು ಮಾತು...
ಏನ್ ಹೇಳು ಪುಟ್ಟಣ್ಣ ..
ಏನಿಲ್ಲ....ಈಗ ದೇಶದಲ್ಲಿ ಯುದ್ದದ ಸಮಯ ಹಾಗಾಗಿ...
ಶಾಂತಾಳ ಜವಾಬ್ದಾರಿ ....ಹಾಗೂ ಈ ಎಸ್ಟೇಟ್ ಜವಾಬ್ದಾರಿಯನ್ನು ನೀವೇ ತಗೊಳ್ಬೇಕು.
ಶಾಂತಾ ನನ್ನ ಮಗಳಂತೆ ಕಣಯ್ಯ....ಅವಳ ಜವಾಬ್ದಾರಿ ನಾನ್ ನೋಡ್ಕೋತೇನೆ.....ಎಸ್ಟೇಟ್ ನ ಚಿಂತೆ ಬೇಡ ನಾನಿದ್ದೇನೆ....ಧೈರ್ಯ ವಾಗಿ ಹೋಗಿ ಬಾ ಪುಟ್ಟಣ್ಣ
ಚಿಕ್ಕಪ್ಪ ನೀವಿಷ್ಟು ಧೈರ್ಯ ತುಂಬಿದರೆ ಸಾಕು ಚಿಕ್ಕಪ್ಪ....
ನಾನಿದ್ದೇನೆ ಸರಿ ಹೊತ್ತಾಯ್ತು.....ನಡಿ..ಎಂದು ಸರ ಸರ ನೆ ಸಾಗಿದರು..
ದಾರಿಯಲ್ಲಿ ಬಾಬಣ್ಣನ ಹೋಟೆಲ್ ಗೆ ಹೋಗಿ
ಅಜಿತ್ ಎರಡು ಇಡ್ಲಿ ತಿಂದ ....ಚಿಕ್ಕಪ್ಪ ನನ್ನದು ಮನೆಯಲ್ಲೆ ಆಯ್ತು ಎಂದರು....
ಬಾಬಣ್ಣ....ಮನೆಯಲ್ಲಿ ಶಾಂತ ಒಬ್ಬಳೇ ಇದಾಳೆ ಚಿತ್ರಾನ್ನವೋ ....ಪುಳಿಯೋಗರೆಯೋ ಪೊಟ್ಟಣ ಕಟ್ಟಿ ಎಂದರು ಚಿಕ್ಕಪ್ಪ...
ಚಿತ್ರಾನ್ನವಿಲ್ಲ.. ಪುಳಿಯೋಗರೆ ಉಂಟು ಆಗ ಬಹುದೋ...ಎಂದರು ಬಾಬಣ್ಣ...
ಅಜಿತ್ ....ಹಾಂ ಆಗಬಹುದು ಎಂದ
ಇಬ್ಬರು ಮನೆ ಕಡೆಗೆ ನೆಡೆದು ಸಾಗಿದರು...
ಮತ್ತೆ ಅಮ್ಮನಿಲ್ಲದ ಮನೆ ಹೊಕ್ಕಾಗ ....ಮನಸ್ಸಿಗೆ ಒಂಥರ ಭಾರವೆನಿಸಿ.....ಶಾಂತಾ....ಶಾಂತಾ...
ಶಾಂತ ಸಪ್ಪೆ ಮುಖ ಧರಿಸಿ...ಮೂಲೆಯಲ್ಲಿ ಕಂಬವನ್ನೊರಗಿ ಕುಳಿತಿದ್ದಳು....ಅತ್ತು ಅತ್ತು ಮುಖ ಬಾಡಿ ಹೋಗಿತ್ತು ಕಣ್ಣ ಸುತ್ತ ಕಪ್ಪು ಬಂದಿತ್ತು...
ಶಾಂತ ಹೀಂಗ್ ಕುತ್ಕಂಡ್ರೆ ಹೆಂಗೆ......ಹೋಗು ಮುಖ ತೊಕ್ಕಂಡ್ ಬಾ ಮಗಳೇ....ಹೊಟ್ಟೆಗ್ ಸ್ವಲ್ಪ ತಿನ್ನುವಂತೆ ಎಂದರು ಅಜಿತನ ಚಿಕ್ಕಪ್ಪ....
ಶಾಂತ ಒಮ್ಮೆ.....ಚಿಕ್ಕಪ್ಪನನ್ನು ಕೋಪದಿಂದ ದುರುಗುಟ್ಟಿ ನೋಡಿ ಒಳ ಬಚ್ಚಲಿಗೆ ಹೋದಳು.......
ಚಿಕ್ಕಪ್ಪನಿಗೆ ಇರಿಸುಮುರುಸಾಗಿ....ಸರಿ ಅಜಿತ ನಾನ್ ಇನ್ನ ಬತ್ತೀನಿ ಮನೆಲಿ ಆಕೆ ಒಬ್ಳೆ ಇದಾಳೆ ಮನೆ ಹೋಗ್ ನೋಡ್ ಬರ್ತಿನಿ....ಎಂದು ಹೊರಟರು....
ಏಟ್ ಒಂದ್ ಹತ್ ದಿನ ಇದ್ ಕಾರ್ಯ ಮುಗ್ಸೇ ಹೋಗ್ತಿಯಾ ಹೆಂಗೇ..ಎನ್ನುತ್ತಾ ಬಾಗಿಲ ಬಳಿ ಹೋದರು
ಇಲ್ಲ ಚಿಕ್ಕಪ್ಪ..... ಈಗ ದೇಶದಲ್ಲಿ ಸಂದಿಗ್ಢ ಕಾಲ...ಚೀನಾ ಜೊತೆ ಯುದ್ಧ ವಾಗೋ ಸಂಭವವಿದೆ....ಹಾಗಾಗಿ ನಾಳೆಯೇ ಹೊರಡ್ಬೇಕು....ಅದಕ್ ವ್ಯವಸ್ಥೆ ಇವತ್ ಮಾಡ್ಕಂಬೇಕು....ಎಂದ...
ಸರಿ ಮಾರಾಯ ದೇಶ ಮೊದ್ಲು...ಮನೆ ಆಮೇಲೆ...ನಾನಿಲ್ಲಿ ಏಲ್ಲಾ ನೋಡ್ಕಂತಿನಿ...ನೀ ನಿಶ್ಚಿಂತೆಯಿಂದ ಇರು....ಎಂದು ಹೇಳಿ ಹೊರಟರು...
ಶಾಂತ ತಿಂದ್ಯೇನೇ.....
ಹಾಂ ತಿಂತಿನಿ ರೀ....ನೀವ್ ತಿಂದ್ರೋ ಇಲ್ವೋ....??
ತಿನ್ಕೊಂಡೆ ಬಂದೆ....ನೀನ್ ತಿನ್ನಮ್ಮ..
ರೂಮ್ ಗೆ ಹೋಗಿ ತನ್ನ ಲೆಗೆಜ್ ಪೆಟ್ಟಿಗೆ ತೆರೆದು ....ತನ್ನ ಬಟ್ಟೆಗಳನ್ನೆಲ್ಲ...ತುಂಬಿಕೊಳ್ಳುತ್ತಾ.....
ಅಮ್ಮ ನ ಫೋಟೋ ಗೋಡೆಯಲ್ಲಿ ನಗುತ್ತಾ ಜೋತು ಬಿದ್ದಿತ್ತು....ಅದನ್ನು ಕೈ ಗೆತ್ತಿಕೊಂಡು ...ಮಗುವಿನಂತೆ
ಬಿಕ್ಕಿ... ಬಿಕ್ಕಿ ಅತ್ತ.....
ಅಮ್ಮನ ಫೋಟೋವನ್ನು ಬ್ಯಾಗ್ ನಲ್ಲಿರಿಸಿ....
ಕಬೋರ್ಡ್ ನಲ್ಲಿ....ಬಟ್ಟೆ ಹುಡುಕುತ್ತಾ ಅಮ್ಮನ ಸೀರೆ....ಕೆಳಗೆ ಬಿತ್ತು....
ಮತ್ತಷ್ಟು ದುಃಖ ಉಮ್ಮಳಿಸಿ ಬಂತು.....ಸೀರೆಯನ್ನು ತನ್ನ ಲೆಗೆಜ್ ಬ್ಯಾಗಿನೊಳಗೆ ತುಂಬಿಕೊಂಡು ...ಬ್ಯಾಗನ್ನು ಜಿಪ್ ಎಳೆದು ಬಂದ್ ಮಾಡಿದ....
ಅಷ್ಟರಲ್ಲಿ ಶಾಂತ ರೂಮಿನೊಳಗೆ ಬಂದಳು
ರೀ....ಹೊರಡ್ತಿದಿರಾ??...
ಹುಂ ಶಾಂತ ನಾಳೆ 10:30 ರ ಫ್ಲೈಟ್ ಗೆ ಹೋಗೊದೆಂದು ನಿರ್ದರಿಸಿದ್ದೇನೆ....
ರೀ ನನ್ನ ಬಗ್ಗೆ ...ಏನಾದರು ಯೋಚನೇ ಮಾಡಿದಿರಾ....??!!
ನಾನೊಬ್ಬಳೇ....ಈ ದೊಡ್ಡ ಮನೆಯಲ್ಲಿ ಒಂಟಿಯಾಗಿ ಹೇಗಿರ್ಲಿ.....ಮನೆಯ ಮೂಲೆ ಮೂಲೆಯಲ್ಲು ಅತ್ತೆಯವರ ಸದ್ದಿದೆ.....ಆ ಸದ್ದು ಇಲ್ಲದೇ ಈಗ ಮಂಕಾಗಿ ಹೋಗಿದೆ .....ಈ ನಿರ್ಜನ ನಿಶಬ್ಧತೆ ನಂಗ್ ಭಯ ಹುಟ್ಸುತ್ತೆ......ಹಾಗೂ ಇದ್ದದ್ದೇ ಆದ್ರೆ.....ಆ ಗುಂಡು ಮದ್ದಿನ ನಡುವೆ ನಿಮ್ಮ ಬದುಕು ಹೇಗಿದಿಯೋ....ಅನ್ನೋ ಚಿಂತೆ....ದಿನ ಫೋನ್ ಮಾಡಿ ಕುಶಲ ತಿಳಿಸ್ತೀರಾ ...ಅದು ಇಲ್ಲ....
ನೀವ್ ಬದ್ಕಿದಿರೋ ಇಲ್ವೋ.....ಅನ್ನೋ ಸುಳಿವು ಕೂಡ ಸಿಗೊಲ್ಲ.....ಆ ಯೋಚನೆಗಳನ್ನೆಲ್ಲ...ನನ್ನ ತಲೆಗೆ ಹಚ್ಚಿ...ನನ್ನ ಒಂಟಿ ಮಾಡಿ ಹೋಗಿ ನನ್ನ ಹುಚ್ಚಿ ಮಾಡ್ಬೇಕು ಅಂತಿದಿರಾ...!! ಎಂದು ಜೋರಾಗಿ ಬಿಕ್ಕಿ ಬಿಕ್ಕಿ ಅತ್ತು ...ಅಜಿತನನ್ನು ತಬ್ಬಿ ಮಗುವಂತೆ ಅತ್ತಳು....
ಶಾಂತ ಸಮಾಧಾನ ಮಾಡ್ಕೋ.....ಶಾಂತಾ....ಶಾಂತ....
...ಕಂಟ್ರೋಲ್ ಯುವರ್ ಸೆಲ್ಫ್....ಶಾಂತಾ...
ಶಾಂತಾ ನೀನೊಬ್ಳೆ ಇಲ್ಲಿರ್ಬೇಕಿಲ್ಲ...ನಾವೇನು ಒಂಟಿ ಏನು....? ನಮಗೂ ಬಂಧುಗಳಿಲ್ವೇ...ಹಿತೈಷಿಗಳಾಗಿ ಚಿಕ್ಕಪ್ಪ ಇದಾರೆ....ನಾನು ನಿನ್ನನ್ನ ಚಿಕ್ಕಪ್ಪನ ಮನೆಲಿ ಬಿಟ್ಟು ಹೋಗೋದಾಗಿ ಯೋಚಿಸ್ದೇ....ಹಾಗೇ ಎಸ್ಟೇಟ್ ವ್ಯವಹಾರನು ಅವರಿಗೇ ಜವಾಬ್ದಾರಿ ಹೇಳಿದಿನಿ... .....ಸರಿ ಅಂತ ಒಪ್ಕೊಂಡಿದಾರೆ......
ಯಾರು ನಿಮ್ಮ ಚಿಕ್ಕಪ್ಪ.ನೇ.....ಚಿಕ್ಕಪ್ಪ.....ಅಂತ ಶಾಂತ ಜೋರಾಗಿ ನಕ್ಕಳು.. ...
ಚಿನ್ನ ಕಾಯಲು ..ಕಳ್ಳನಿಗೇ ಒಪ್ಪಿಸ್ದಂಗಾಯ್ತು....ಅಯ್ಯೋ...
ಅಜಿತ್ ಆಶ್ಚರ್ಯದಿಂದ ಕಣ್ಣು ಕಣ್ಣು ಬಿಟ್ಟ ....
ರೀ ಆ ನಿಮ್ಮ ಚಿಕ್ಕಪ್ಪನಿಂದಲೇ....ಮನೆ ಹದಗೆಟ್ಟಿದ್ದು...
.
ನಿಮ್ಮ ಚಿಕ್ಕಪ್ಪ ನಿಗೆ ಮೊದಲಿಂದಲೂ ನಮ್ಮ ಎಸ್ಟೇಟ್ ಮೇಲೆ ಕಣ್ಣು ....
ವ್ಯವಹಾರದಲ್ಲಿ ಅತ್ತೆ ಅವರಿಗೆ ಸಹಾಯವಾಗಿರೋ ನೆಪದಲ್ಲಿ ಸಾಕಷ್ಟು ದುಡ್ಡು ನುಂಗಿದಾನೆ......ಅತ್ತೆಯವ್ರೇ ಏಷ್ಟೋ ಸಲ ನನ್ಹತ್ರಾನೇ ಹೆಳ್ತಿದ್ರು....
ಮೊನ್ನೆ ಹಣದ ವಿಚಾರವಾಗಿ ಚಿಕ್ಕಪ್ಪನಿಗೂ ....ಅತ್ತೆಯವ್ರಿಗೂ ಮಾತಿಗೆ ಮಾತಾಯ್ತಂತೆ....ಎಸ್ಟೇಟ್ ನ ಕೆಲಸದಾಳು ಹೇಳ್ತಿದ್ದ....
ಅದಾದ್ಮೆಲೆ ಅತ್ತೆ ಮಂಕಾಗೆ ಇದ್ರು.....ಯಾವ ಸಂಬಂಧಿಕರನ್ನು ನಂಬ ಬಾರ್ದಮ್ಮ..... ಅಂತ ಎಷ್ಟೋ ಸಲ ನನ್ಹತ್ರನೇ ಹೇಳಿದಾರೆ....
ಹೋ....ಹೋ.....ಚಿಕ್ಕಪ್ಪ ನ ಅಸಲಿ ಮುಖ ಇದಾ...
ಛೇ....ಎಂತಾ ಮನುಷ್ಯ ..
ಏನ್ ಮಾಡೋಣ ಅಂತಿಯಾ....ನಿಮ್ಮ ತಂದೆ ಮನೆಯಲ್ಲಿ ಇರ್ಬೋದಲ್ವ....ಎಂದ ಅಜಿತ್...
ರೀ ನಾನು ಎಲ್ಲಿದ್ರು ನಿಮ್ಮ ಚಿಂತೆ ಬಾಧಿಸದೇ ಇರಲ್ಲ....ನಿಮ್ಮ ಕ್ಷೇಮ ತಿಳೀದೆ ಒದ್ದಾಡುವಂತಾಗತ್ತೆ....
ರೀ ಒಂದ್ ಮಾತು.....
ಅದೇನ್ ಹೇಳು ಶಾಂತಾ...
ನಾನು ನಿಮ್ ಜೊತೆ ಬಂದ್ ಬಿಡ್ತಿನಿ ...ರೀ..
ಹಾಂ ....ಅದು ಸಾದ್ಯವಿಲ್ಲ..... ಅದೇನು ನಮ್ಮೂರು ಅನ್ಕೊಂಡ್ಯ.....ಅಸಾಧ್ಯವಾದ ಛಳಿ....ಹಿಮದ ಮಳೆ....ನಮಗೇ ಅಲ್ಲಿರೋಕೆ ಕಷ್ಟ .... ಆಗೊಲ್ಲ ಶಾಂತ...
ಶಾಂತಾ ...ನೀನು ಚಿಕ್ಕ ಹುಡುಗಿಯಂತೆ ಮಾತಾಡ್ಬೇಡ..ನಿನ್ ಹೊಟ್ಟೆಲಿ ನಮ್ಮ ಮಗು ಬೆಳಿತಿದೆ..ಈ ಸಮಯದಲ್ಲಿ....ಜೋಪಾನವಾಗಿ ನೀನು ತಾಯಿ ಮನೆಯಲ್ಲಿರೋದೇ ಸರಿ.... ಅರ್ಥ ಮಾಡ್ಕೋ ಶಾಂತಾ....
ನಾನ್ ಈಗಲೇ ಮಾವನವ್ರಿಗೆ ವಿಷಯ ತಿಳಿಸ್ತಿನಿ....
ಎಂದು ಲ್ಯಾಂಡ್ ಲೈನ್ ಫೋನ್ ಬಳಿ ಹೋದ...
ರೀ ಊರಲ್ಲಿ ಫೋನ್ ಸರಿ ಇಲ್ಲ.....ಅಪ್ಪನಿಗೆ ಅತ್ತೆ ತೀರಿಕೊಂಡ ವಿಷಯ ಕೂಡ ತಿಳಿಸೋಕಾಗ್ಲಿಲ್ಲ....
ಹೋ ...ಸರಿ ಈಗ 11 ಗಂಟೆ ಈಗ್ಲೆ ಹೊರಟ್ರೆ.....ಎರಡು ತಾಸಿನಲ್ಲಿ ನಿಮ್ಮ ಊರನ್ನೆ ತಲುಪ್ ಬೋದು.. ಸರಿ ಹೊರಡು ಬೇಗ....
ನಾನ್ ನಿನ್ನನ್ನ....ಬಿಟ್ಟು ಮಾವನವರನ್ನ ಕಂಡು ಮಾತಾಡ್ಕೊಂಡ್ ವಾಪಸ್ಸಾಗ್ತೇನೆ....
ಶಾಂತ ಹುಂ ಎಂದು ....ಅವಳ ಕಬೋರ್ಡ್ ತೆರೆದು ಬಟ್ಟೆಯನ್ನು....ಬ್ಯಾಗ್ ಗೆ ತುಂಬಿಕೊಳ್ಳಲು ಪ್ರಾರಂಭಿಸಿದಳು....
ನಾನ್ ಜೀಪ್ ನ ಶೆಡ್ ನಿಂದ ಹೊರ ತೆಗೆತೇನೆ ಎಂದು ಅಜಿತ್ ಹೊರ ಹೋದ....
ಇತ್ತ ಕಡೆ....ಶಾಂತ ಬಟ್ಟೆ ತುಂಬಿಕೊಳ್ಳುತ್ತಾ....ಅಜಿತನ ಶರ್ಟ್ ಒಂದನ್ನು ಕಣ್ಣಿಗೊತ್ತಿಕೊಂಡು ಅತ್ತಳು ...2-3 ಶರ್ಟ್ ನ್ನು ಬ್ಯಾಗಿನೊಳಗೆ ತುಂಬಿಕೊಂಡಳು....
ರೂಮಿನ ಟೇಬಲ್ ಮೇಲಿದ್ದ ...ಮದುವೆ ಸಂಧರ್ಭದಲ್ಲಿ ತೆಗಿಸಿದ ಜೋಡಿ ಫೋಟೋವನ್ನೇ ನೋಡುತ್ತಾ ಅದನ್ನು ಬ್ಯಾಗಿನೊಳಗೆ ಹಾಕಿದಳು....
ಸೀರೆ ಬದಲಿಸಿ ಹೊರ ಬಂದಳು...
ಹೊರ್ಟ್ಯ ಶಾಂತಾ....
ಹಾ ......ರೀ...ಬಂದೆ ಎರಡೇ ನಿಮಿಷ....
ಮನೆಯನ್ನ ಬಂದ್ ಮಾಡಿ.....
12 :30 ಗೆ ಹೊರಟರು..
ಮಡಿಕೇರಿಯಿಂದ ..ಸಕಲೇಶಪುರ ಎರಡು ಗಂಟೆ ಪ್ರಯಾಣ....
ಪ್ರಕೃತಿ ಯ ಮಡಿಲಲ್ಲಿ ....ಸುತ್ತಲು ಮರಗಿಡಗಳ ನಡುವೆ ಹಾದು ಹೋದ ಟಾರ್ ರಸ್ತೆಯಲ್ಲಿ ಸಾಗಿದ್ದು ತಿಳಿಯಲೇ ಇಲ್ಲ...
ಶನಿವಾರಸಂತೆ ಊರಿನ ....ಗುಡ್ಡದ ತಪ್ಪಲಿನಲ್ಲಿ ಮಾವನ ಮನೆ...
ಇವರು ಮನೆ ತಲುಪಿದಾಗ ಮಾವ ಮನೆಯಲ್ಲೆ ಇದ್ದರು...ಮಗಳು ಅಳಿಯನನ್ನು ಕಂಡು ಸಂತೋಷದಿಂದ ಬರಮಾಡಿಕೊಂಡರು...
ಅಜಿತ್ ಮತ್ತು ಮಾವನ ನಡುವೆ ಸುಮಾರು ಒಂದು ಗಂಟೆಗಳಿಗೂ ಹೆಚ್ಚು ಸಮಯ ಮಾತಿನಲ್ಲಿ ಸಮಯ ಸಾಗಿತು.....ಮಾವನಿಗೆ ನೆಡೆದ ವಿಷಯವೆಲ್ಲ...ತಿಳಿಸಿದ....ಮಗಳ ಜವಬ್ದಾರಿ ಸದ್ಯಕ್ಕೆ ನಿಮ್ಮದೆಂದು ತಿಳಿಸಿದ...
ಮಾವನವರು ಅಳಿಯಂದ್ರೆ ನೀವೇನು ಯೋಚನೆ ಮಾಡ್ಬೇಡಿ.....ನೀವ್ ನಿಶ್ಚಿಂತೆಯಿಂದ ಹೊರಡಿ ನೀವು ಮತ್ತೆ ಬರೋವಾಗ ನಿಮ್ಮ ಮಗ ನಿಮ್ಮನ್ನ ಬರ ಮಾಡ್ಕೋತಾನೆ....ಎಂದು ಸಂತೋಷದಿಂದ ಹೇಳಿದರು...
ಸರಿ ಹಾಗಿದ್ರೆ ಹೊರಡ್ತೇನೆ....ಎಂದು ಅಜಿತ್ ಹೊರಟು....ಹೊರ ಬಂದ....ಶಾಂತಳನ್ನು ಅಪ್ಪಿಕೊಂಡು ....ಜೋಪಾನ ಶಾಂತ....ನಾನ್ ಆಗಾಗಾ ಫೋನ್ ಮಾಡ್ತೀನಿ...
ಎಂದು ಕಣ್ಣೊರೆಸಿಕೊಂಡು ಹೊರ ಬಂದ...
ಎರಡು ತಾಸಿನ ಪಯಣ ಬಳಸಿ...ಮನೆಗೆ ಬಂದಾಗ...ಕತ್ತಲೆ ಕವಿದಿತ್ತು.....
ಮೂಕವಾದ ಮನೆಯಲ್ಲಿ ....ಒಬ್ಬಂಟಿಯಾದೆ ಎಂದು ಬೇಸರದಿಂದ ಮಲಗಿದ....
ಮರುದಿನ ಗಡಿಬಿಡಿಯಲ್ಲಿ.....ಹೊರಟು....10:30 ರ ಫ್ಲೈಟ್ ಹತ್ತಿ ಪಯಣ ಆರಂಭಿಸಿದ..
.
ಎರಡು ದಿನಗಳ ಪಯಣದಲ್ಲಿ.... ಹಿಮಾಚಲ ಪ್ರದೇಶದ ಗಗ್ಗಲ್ ವಿಮಾನ ನಿಲ್ದಾಣಕ್ಕೆ ಬಂದು ಸೇರಿದ ....
ಅಲ್ಲಿಂದ ತನ್ನ ಸೈನಿಕ ಬಿಡಾರಕ್ಕೆ...ಜೀಪಿನಿಂದ ತಲುಪ ಬೇಕಿತ್ತು....
ಎಲ್ಲಾ ಮುಂಚಿತವಾಗಿಯೇ ಸಿದ್ದವಿತ್ತು....ಹಿಮದ ಹಾದಿಯಲ್ಲಿ ....ಸಾಗುವಾಗ ....
ಜೀಪಿನ ಚಕ್ರಗಳು ಹಿಮದಲ್ಲೆ ಹೂತು
ನಿಂತಲ್ಲೇ ಸುತ್ತಾಕುತಿದ್ದವು..
ಸ್ವಲ್ಪದೂರ ಕಾಲ್ನಡಿಗೆಯಲ್ಲೆ....ಸಾಗಿ
ಅಲ್ಲಲ್ಲೇ ದಾರಿಯಲ್ಲೆ ಸಿಗುತಿದ್ದ ಸೈನಿಕ ಬಿಡಾರಗಳಲ್ಲಿ....ಕಾಫಿ ...ಚಹಾ...
ಸೇವಿಸಿ....ಜೀಪು ಸರಿಯಾದೊಡನೆ....ಮುಂದಿನ ಪಯಣ ಮುಂದುವರೆಸಿ...ತನ್ನ ತಮೂರ್ ಸೈನಿಕ ಬಿಡಾರವನ್ನು ಕಷ್ಟಪಟ್ಟು ಬಂದು ಸೇರಿದ.....
ಅಜಿತ್ ತಾನು ಡ್ಯೂಟಿಗೆ ಹಾಜರಿರುವುದನ್ನು ಖಚಿತ ಪಡಿಸಲು ಹೆಡ್ ಆಫೀಸ್ ಗೆ ತೆರಳಿದಾಗ....
ಆರ್ಮಿ ಜನರಲ್.....ಪ್ರಸ್ತುತ....ಚೀನಾ ಮತ್ತು ಭಾರತದ ನಡುವಿನ ಸಂಬಂಧ ದಿನದಿಂದ ದಿನಕ್ಕೆ ಹಳಸುತ್ತಿದೆ ....ಯುದ್ಧ ಘೋಷಣೆಯಾದರೆ ....ಅದನ್ನ ಎದುರಿಸೋಕೆ ನಮ್ಮಲ್ಲಿ ಅಗತ್ಯ ಶಸ್ತ್ರಗಲ ಕೊರತೆ ಇದೆ ....ಎಲ್ಲಾ ವಿಷಯವನ್ನು .....ಅಜಿತ್ ಗೆ ತಿಳಿಸಿದರು...
ನಾಳೆಯಿಂದ ಅಜಿತ್ ನ ಡ್ಯೂಟಿಯನ್ನು ತಿಳಿಸಿದರು.
ಅಜಿತ್ ಸೆಲ್ಯುಟ್ ನ ಗೌರವ ಸಲ್ಲಿಸಿ....ಹೊರಟ...
ಮರುದಿನದಿಂದ....ತನ್ನ ಕೆಳಗಿರುವ 2 ಬೆಟಾಲಿಯನ್ ಸೈನಿಕರಿಗೆ...ಯುದ್ಧ ಪೂರ್ವ ತರಬೇತಿ ನೀಡುವುದು ...ಹಾಗೂ ಯುದ್ಧ ಪ್ರಾರಂಭವಾದರೆ ....ಫುಡ್ ಲ್ಯಾಂಡಿಂಗ್ ಮಾರ್ಕ್ ಗಳನ್ನು ಗುರುತಿಸುವುದು....
ರಸ್ತೆ ..ಸೇತುವೆಗಳನ್ನು ಸುಗಮ ಗೊಳಿಸಿಕೊಳ್ಳುವುದು ಹೀಗೆ ಕೈ ತುಂಬಾ ಕೆಲಸ ಗಳಿದ್ದವು..
ಈ ಕೆಲಸಗಳ ನಡುವೆ....ಶಾಂತಾಳಿಗೆ ವಾರಕ್ಕೊಮ್ಮೆ ಕರೆ ಮಾಡುತಿದ್ದ ಕರೆ ತಿಂಗಳಿಗೊಮ್ಮೆ.....ಆಯಿತು....
ಅಮ್ಮ ತೀರಿಕೊಂಡು ನಾಲ್ಕು ತಿಂಗಳೇ ಕಳೆದಿತ್ತು....
ದಿನವೆಲ್ಲ...ದಣಿದು....ಬಿಡಾರಕ್ಕೆ ಬಂದು ಮಲಗಿದಾಗ....ಒಮ್ಮೊಮ್ಮೆ....ಅಮ್ಮ...ಕನಸಿನಲ್ಲಿ ಬಂದು ತಟ್ಟಿ ಎಬ್ಬಿಸಿದಂತಾಗುತಿತ್ತು.....
ಬ್ಯಾಗಿನಲ್ಲಿದ್ದ ಅಮ್ಮನ ಫೋಟೋ ನೋಡಿ ಕಣ್ಣೀರಿಟ್ಟು...
ಅಮ್ಮನ ಸೀರೆಯನ್ನ....ಹಾಸಿ ..ಮಲಗುತಿದ್ದ...ಅಮ್ಮ ನ ಮಡಿಲಲ್ಲಿ ಮಲಗಿದಷ್ಟೇ ಆನಂದವಾಗುತಿತ್ತು....
ಶಾಂತಾ ಎಷ್ಟು ಗೋಳಾಡ್ತಿದಾಳೋ ಏನೋ...ನಾಳೆ ಫೋನ್ ಮಾಡ್ಲೇ ಬೇಕು ಎಂದು ಕೊಂಡು ಮಲಗುತಿದ್ದ....
ನಾಳೆಯ ಕೆಲಸಗಳು ಫೋನ್ ಮಾಡುವುದನ್ನೆ ಮರೆಸುತಿದ್ದವು....
ಇತ್ತ ಕಡೆ ಶಾಂತಾಳಿಗೆ...ತಿಂಗಳು ಎಂಟರಿಂದ ಒಂಬತ್ತಕ್ಕೆ ಬಿದ್ದಿತ್ತು....ಆಗಾಗಾ ಹೊಟ್ಟೆಯಲ್ಲಿ ಸಹಿಸಲಸಾದ್ಯವಾದ ನೋವು ಬರುತಿತ್ತು....ಎಲ್ಲವನ್ನು...ತುಟಿಕಚ್ಜಿ ಸಹಿಸುತಿದ್ದಳು...
ಯಾವ ಸಮಯಕ್ಕಾದರು ಹೆರಿಗೆ ನೋವು ಕಾಣಿಸ ಬಹುದಿತ್ತು...
ಮನೆಯಲ್ಲಿ ಮೊಮ್ಮಗನು ಮನೆಗೆ ಬರುತ್ತಾನೆಂಬ ಸಂತೋಷ ಮನೆಮಾಡಿತ್ತು....
ಮಾವನಿಗೆ ತಾತನಾಗುವ ಸಂಭ್ರಮ....
ಆದರೆ ಶಾಂತಾಳಿಗೆ.....ತನ್ನ ಗಂಡ ಹೆರಿಗೆ ಸಮಯಕ್ಕೆ ಜೊತೆಯಲ್ಲಿರಬೇಕೆಂಬ ಬಯಕೆ.....
ಹೋದ ಬಾರಿ ಕರೆ ಮಾಡಿದಾಗ....ಇದು ಎಮರ್ಜೆನ್ಸಿ ಸಮಯ ರಜೆ ನೀಡೋಲ್ಲ ಶಾಂತಾ....ಎಂದು ದುಃಖ ದಿಂದ ಹೇಳಿದ್ದು ನೆನಪಾಯ್ತು....
ಒಂದು ದಿನ ಬೆಳಗ್ಗೆ....ತನ್ನ ಸೈನಿಕ ಕ್ಯಾಂಪ್ ನ ಡೇರೆ ಯ ಬಳಿ ಯಾರೋ ಅಪರಿಚಿತರು ಓಡಾಡುತಿದ್ದಾರೆಂಬ ಸುದ್ದಿ ಬಂತು...
ತಕ್ಷಣ ಅಜಿತ್ ಕಾರ್ಯಪ್ರವೃತ್ತನಾಗಿ ಅವರನ್ನು ಹಿಡಿದು ವಿಚಾರಿಸಲಾಗಿ....ನಾವು ಬಾರ್ಡರ್ ರಸ್ತೆ ಕೆಲಸದ ಆಳುಗಳು ಎಂದು ಹೇಳಿದರು...
ಚೀನಾ...ಈಗಾಗಲೇ....ಬಾರ್ಡರ್ ರಸ್ತೆಗಳನ್ನು ನಿರ್ಮಿಸಿ ಸುಸಜ್ಜಿತ ಟ್ಯಾಂಕರ್ ಗಳನ್ನು ಬಾರ್ಡರ್ ಗಳಲ್ಲಿ ಇಟ್ಟಿರುವ ಸಮಯಕ್ಕೆ....ನಾವಿನ್ನು ರಸ್ತೆ ನಿರ್ಮಿಸುತಿದ್ದೇವೆ...ಎಂದು ಮನಸ್ಸಿನಲ್ಲೆ ಅಂದು ಕೊಂಡು ...ಬಿಡಾರಕ್ಕೆ ವಾಪಸ್ಸಾದ...ಅಜಿತ್....
ಅಸಲಿ ವಿಚಾರವೆಂದರೆ.....ಆ ರಸ್ತೆ ನಿರ್ಮಾಣದ ಕೈಯಾಳುಗಳ ನಡುವೆ...ಚೀನಾದ ಬೇಹುಗಾರರು ಸೇರಿ ಹೋಗಿದ್ದರು....
ಶಾಂತಾಳಿಗೆ ಹೆರಿಗೆ ನೋವು ಕಾಣಿಸಿ ಹಿಂದಿನ ದಿನದ ರಾತ್ರಿಯೇ ಆಸ್ಪತ್ರೆ ಗೆ ದಾಖಲಿಸಿದ್ದರು....ಅವರ ಅಪ್ಪ..
ಮರುದಿನ ....ಹಿಮದ ಮಳೆ ಜೋರಾಗೇ ಆಗುತಿತ್ತು....ಹತ್ತಿರದವರನ್ನು ಗುರುತಿಸಲಸಾಧ್ಯವಾಷ್ಟು ಮಂಜು ಕವಿದಿತ್ತು.....ಅಜಿತ್ ಸಮವಸ್ತ್ರ ಧರಿಸಿ....ಗಸ್ತು ತಿರುಗಿ ಬರುವುದಾಗಿ ಹೊರಟ.....
ದಾರಿಯಲ್ಲಿ ಸಾಗುತಿದ್ದಂತೆ...ನೆನ್ನೆ....
ಕೆಲಸದವರೆಂದು ಪರಿಚಯಿಸಿಕೊಂಡಿದ್ದ....ಆ ಇಬ್ಬರು....ಬ್ಯಾಗ್ ಗಳನ್ನು ಹೊತ್ತು....ಓಡಿ ಮಂಜಿನ ಗುಡ್ಡದ ಕಡೆ ಮರೆಯಾದಂತನಿಸಿತು ....ಅಜಿತ್ ಕೂಡ ಅವರನ್ನ ಹಿಂಬಾಲಿಸಿ ಹೋದ ....
ಮರೆಯಲ್ಲಿ ನಿಂತು ನೋಡಿದಾಗ ....ಅವರು ನಮ್ಮ ಬಿಡಾರದ ಮ್ಯಾಪ್ ಗಳನ್ನು ಪಾಯಿಂಟ್ ಮಾಡಿಕೊಳ್ಳುತ್ತಾ ಏನೇನೋ ಮಾತನಾಡಿಕೊಳ್ಳುತಿದ್ದದು...ಕೇಳಿಸಿತು...
ಸಂಶಯದಿಂದ ಅವರನ್ನು ವಿಚಾರಿಸಲು ಹೊರಟ ಅಜಿತ್
ಕೌನ್ ಹೇ ಸಬ್ ಲೋಗ್ ...ಇದರ್ ಕ್ಯಾ ಕರ್ ರಹೇ ಆಪ್.... ಎಂದು ಕೇಳಿದ ಅಜಿತನಿಗೆ
ಅವರಲ್ಲೊಬ್ಬ... ಕುಚ್ ನಹಿ ಸಾಬ್ ಎಂದು ಉತ್ತರಿಸಿದ....
ಹಿಂದಿನಿಂದ ಬಲವಾಗಿ ಯಾರೋ ತಲೆಗೆ ಬಡಿದರು....
ನೋವಿನಲ್ಲಿ ಹಿಂತಿರುಗಿ ನೋಡಿದರೆ.....ದೊಡ್ಡ ಗುಂಪೇ ಇದೆ...ಗಾಬರಿ ಇಂದ ಬಂದೂಕು ತೆಗೆದು ಕೊಳ್ಳು ಹೋದ
ನಾಲ್ಕು ಜನರ ಗುಂಪು ಬಂದುಕನ್ನು ಕಸಿದು ಕೊಂಡು....
ಅದೇ ಬಂದುಕಿನಲ್ಲಿ " ಮಾರ್ ಉಸ್ಕೋ"....ಎಂದು...
ಅದೇ ಬಂದುಕಿನಿಂದ ....ಅಜಿತನ ಮೇಲೆ ಗುಂಡಿನ ಮಳೆಗರೆದರು....
ರಕ್ತ.. ಸಿಕ್ತವಾಗಿ.....ಅಜಿತ್ ಕ್ಷಣದಲ್ಲಿ ಹೆಣವಾಗಿ ಹೋದ.....
ಇತ್ ಕಡೇ ಶಾಂತಾಳಿಗೆ....ಹೆರಿಗೆ ನೋವು ಕಾಣಿಸಿ....
ಅತ್ತ ಕಡೆ ಅಜಿತನ ಪ್ರಾಣ ಪಕ್ಷಿ ಹಾರಿತು....
ಇತ್ತ ಕಡೆ ಶಾಂತಾ ಗಂಡು ಮಗುವಿಗೆ ಜನ್ಮವಿತ್ತಳು....
ಸೈನಿಕ ಬಿಡಾರಕ್ಕೆ...ಸಕಲೇಶಪುರ ದಿಂದ ಮಾವನವರು....ಕರೆ ಮಾಡಿದ್ದರು ...ಅದನ್ನು ತಿಳಿಸಲು ಬಂದ ಸಹೋದ್ಯೋಗಿ ಗೆ ...ಅಜಿತ್ ಬಿಡಾರದಲ್ಲಿ ಇಲ್ಲದಿರುವುದು ತಿಳಿಯಿತು ....ಗಸ್ತು ತಿರುಗುವ ಮಾರ್ಗದಲ್ಲೇ...ಹೋದಾಗ...ಅಜಿತನ ಹೆಜ್ಜೆ ಗುರುತುಗಳನ್ನು ಮಂಜು ಮುಚ್ಚುವಷ್ಟರಲ್ಲಿ....ಅಜಿತ್ ನ ಪ್ರಾಣತ್ಯಾಗದ ವಿಷಯ ತಿಳಿಯಿತು...
ಸಕಲ ಸೈನಿಕ ಗೌರವ ಗಳೋಂದಿಗೆ ಅಜಿತ ನ ದೇಹವನ್ನ ಹಸ್ತಾಂತರಿಸಲಾಯಿತು ....
ಇತ್ತ ಕಡೆ ವಿಷಯ ತಿಳಿದ ಶಾಂತಾ......
ಅವಳ ದುಃಖ ಕ್ಕೆ ಪಾರವೇ ಇಲ್ಲ.....
ಒಮ್ಮೆಲೆ ಬೋರ್ಗರೆದಂತೆ ದುಃಖವನ್ನ ಕಣ್ಣೀರ ಧಾರೆಯಾಗಿ ಸುರಿಸಿದಳು.....
ಯಾರು ಸಮಾಧಾನ ಹೇಳಿದರು ಆಕೆ ಕೇಳುವ ಸ್ಥಿತಿಯಲ್ಲಿರಲಿಲ್ಲ.....
ಅಮ್ಮ....ನ ಅಳುವಿನ ಕಾರಣ ತಿಳಿಯದ ಮಗು ....ತೊಟ್ಟಿಲಲ್ಲಿ ಮುಗ್ಧ ನಗುವನ್ನು ಬೀರುತಿತ್ತು...
ರಚನೆ
ಶ್ಯಾಮ್ ಪ್ರಸಾದ್ ಭಟ್
ಅರ್ಪಣೆ-
ರವಿಬೆಳಗೆರೆಯ ಮಾತು...ಕೃತಿಗಳೇ ಈ ಯುವ ಬರಹಗಾರನ ಕಥೆಗೆ ಸ್ಪೂರ್ತಿ