ಗೆಳೆಯನನ್ನು ಬಸ್ಸಿಗೆ ಹತ್ತಿಸಿ ಹಾಯುತ್ತಿರುವಾಗ....
ನನ್ನೂರಿನ ಕಡೆಗೆ ಹೋಗುವ ಬಸ್ಸಿನ ಕಂಡಕ್ಟರ್...ನನ್ನೂರಿನ ಹೆಸರು ಕೂಗುತ್ತ....ಹತ್ತಿ ಹತ್ತಿ ಬೇಗ ಬೇಗ ಎನ್ನುತ್ತಿದ್ದದ್ದನ್ನು ಕಂಡು ....ಒಮ್ಮೆಲೆ...ನನ್ನ ಊರಿನ ಹೆಸರು ಮೈ ರೋಮಾಂಚಿತ ಗೊಳಿಸಿತು ....
ಪರದೇಶದಲ್ಲಿ ಕನ್ನಡಿಗರಿಗೆ ಕನ್ನಡ ಬಲ್ಲವರು ಸಿಕ್ಕಾಗ ಆಗುವ ಅದೇ ತುಮುಲ ನನಗಾಯಿತು....
ಕೆಲಸಕ್ಕೆ ಸೇರಿ 1 ತಿಂಗಳಾಗಿಲ್ಲ..ಅಷ್ಟರಲ್ಲೇ ರಜೆ ಕೇಳಿದರೆ ಏನೆಂದು ಕೊಂಡಾರು....
ಅನಾರೋಗ್ಯದ ನೆಪ ಹೇಳಿ ಬಿಡಲೆ ..ಕೆಲಸಕ್ಕೆ ಸೇರಿ 2 ತಿಂಗಳಾದರು ಕಳೆಯ ಬೇಕು ರಜೆ ನೀಡಲು...ಸುಳ್ಳು ಹೇಳಿ ಅಷ್ಟರಲ್ಲೇ ವಿಶ್ವಾಸ ಕಳೆದು ಕೊಳ್ಳೋದು ಬೇಡ....ಎಂದೆನಿಸಿ...ಪಾಂಡು ರೂಮಿನೆಡೆಗೆ ನೆಡೆದು ಹೊರಟ
ಬಿಸಿಲ ಧಗೆ ತಡೆಯದೆ....ಬೀದಿ ಬದಿಯಲ್ಲಿದ್ದ ಕಲ್ಲಂಗಡಿ ಕೆಂಪು ಬಿಡಾರದಲ್ಲಿ ೧ ಪ್ಲೇಟ್ ಹಣ್ಣು ತಿಂದು ಹೊರಟ....ಅರ್ಧ ತಾಸಿನಲ್ಲಿ ರೂಮು ತಲುಪಿ..ಚಾಪೇ ಹಾಸಿ ಕುಳಿತು ಕೊಂಡ....೧ ತಿಂಗಳ ಹಿಂದೆ ಬೆಂಗಳೂರಿಗೆ ಬರುವಂತಾದ ಪ್ರಸಂಗ ನೆನೆಸಿಕೊಂಡ.....ನೆನಪಿನಲ್ಲೇ ಮುಳುಗಿದ....
ಅಮ್ಮನನ್ನು ನೋಡಿ ಇಲ್ಲಿಗೆ ಒಂದು ತಿಂಗಳೇ ಕಳೆದಿದೆ..
ಅಂದು ಮದ್ಯಾಹ್ನ ಪಾಂಡುವಿನ ಕುಟುಂಬದಲ್ಲಿ ನೆಡೆದ ಪ್ರಸಂಗ
ಪಾಂಡುವಿನದು ಒಂದು ಚಿಕ್ಕ ಕುಟುಂಬ ಅಪ್ಪ ರಾಮಾಚಾರಿ ವೃತ್ತಿಯಿಂದ ಬಡಗಿ (ಮರಗೆಲಸ) ತಾಯಿ ವಿಶಾಲಾಕ್ಷಿ
ಪಾಂಡು ತನ್ನ ಡಿಗ್ರಿ ಕಷ್ಟಬಿದ್ದು ಮುಗಿಸಿದ...
ಪಾಂಡುವಿನದು ಒಂದು ಚಿಕ್ಕ ಕುಟುಂಬ ಅಪ್ಪ ರಾಮಾಚಾರಿ ವೃತ್ತಿಯಿಂದ ಬಡಗಿ (ಮರಗೆಲಸ) ತಾಯಿ ವಿಶಾಲಾಕ್ಷಿ
ಪಾಂಡು ತನ್ನ ಡಿಗ್ರಿ ಕಷ್ಟಬಿದ್ದು ಮುಗಿಸಿದ...
ಡಿಗ್ರಿ ಮುಗಿದ ನಂತರ ಊರೂರು ಸುತ್ತೋದು ...ಸುತ್ತಾಡಿ ಮನೆಗೆ ಬಂದು ಮಲಗೋದು
ಡಿಗ್ರಿ ಮುಗಿದ ನಂತರ ಊರೂರು ಸುತ್ತೋದು ...ಸುತ್ತಾಡಿ ಮನೆಗೆ ಬಂದು ಮಲಗೋದು
ಡಿಗ್ರಿ ಮುಗಿದ ನಂತರ ಊರೂರು ಸುತ್ತೋದು ...ಸುತ್ತಾಡಿ ಮನೆಗೆ ಬಂದು ಮಲಗೋದು
ಟಿ ವಿ ನೋಡುತ್ತಾ ರಿಮೋಟ್ ಹಿಡಿದು ಗಂಟಗಟಲೆ ಕಾಲಕಳೆಯೊದು ಇದು ನಿತ್ಯ ಕರ್ಮದಂತೆ ಆಗಿತ್ತು...
ಅಪ್ಪನಿಗೆ ಸಹಾಯ ಮಾಡಲು ಸಹಾ ಹೋಗದೆ ....ಆ
ಬಡಗಿ ಕೆಲಸದಲ್ಲಿ ಆಸಕ್ತಿ ತೋರದೆ ಸೋಮಾರಿತನದಿಂದ ಕಾಲಕಳೆಯುತಿದ್ದ ಮಗನನ್ನು ಕಂಡು ತಂದೆ ತಾಯಿಗೆ ಬೇಸರವಿತ್ತು..
ಒಂಾದು ದಿನ ರಾತ್ರಿ
ಮಗನ ಈ ವರ್ತನೆಯಿಂದ ಬೆಸತ್ತ ರಾಮಾಚಾರಿ ಮಗನ ಮೇಲೆ ರೇಗಿದರು...ನೀನ್ ಹಿಂಗಾದ್ರೆ ಉದ್ದಾರ ಅಗಲ್ಲ....ತಿನ್ನೋದು ಮಲ್ಗೋದು...ನಾವಿರೋವರ್ಗೂ ನೋಡ್ಕೋಬೋದು....ಅಮೇಲೆ ನೀನೇ ನಿನ್ ಜೀವನ ನೋಡ್ಕೋಬೇಕು....
ಪಾಂಡು ವಯಸ್ಸಿನಲ್ಲಿ ಹುಮ್ಮಸ್ಸು ...ಕೋಪ ತುಸು ಹೆಚ್ಚೇ...
ನಂಗು ದುಡಿಯೋ ತಾಕತ್ ಇದೆ....ಈಗ ಬೆಂಗಳೂರಿಗ್ ಹೋದ್ರು ನೀನ್ ದುಡಿಯೋಕಿಂತ ಹೆಚ್ಚೇ ದುಡಿತಿನಿ.....
ಪಾಂಡು ವಯಸ್ಸಿನಲ್ಲಿ ಹುಮ್ಮಸ್ಸು ...ಕೋಪ ತುಸು ಹೆಚ್ಚೇ...
ನಂಗು ದುಡಿಯೋ ತಾಕತ್ ಇದೆ....ಈಗ ಬೆಂಗಳೂರಿಗ್ ಹೋದ್ರು ನೀನ್ ದುಡಿಯೋಕಿಂತ ಹೆಚ್ಚೇ ದುಡಿತಿನಿ.....
ಅಪ್ಪ ಕೋಪದಿಂದ ....ದುಡಿತಾನೆ ಕಡ್ದು ಎತ್ತಾಕ್ ಬಿಡ್ತಾನೆ ನೀನ್ ತಗಂಡಿರ ಮಾರ್ಕ್ಸಗೆ ಹೋಟ್ಲಲ್ಲಿ ಪ್ಲೇಟ್ ತೊಳಿಬೇಕು ಅಷ್ಟೆಯಾ....
ಪಾಂಡು ಕೋಪದಿಂದ ......ಈ ಮನೆಲಿ ನೆಮ್ದಿನೇ ಇಲ್ಲ....ಎಲ್ಲದ್ರು ಮನೆಬಿಟ್ಟು ಹೋಗ್ಬುಡ್ಬೇಕು ಅತ್ಲಾಗಿ....
ಪಾಂಡು ಕೋಪದಿಂದ ......ಈ ಮನೆಲಿ ನೆಮ್ದಿನೇ ಇಲ್ಲ....ಎಲ್ಲದ್ರು ಮನೆಬಿಟ್ಟು ಹೋಗ್ಬುಡ್ಬೇಕು ಅತ್ಲಾಗಿ....
ರಾಮಾಚಾರಿ .....ಹೋಗು...ಮೊದ್ಲು ತೊಲಗು....ಎಂದರು ಕೋಪದಿಂದ
ಇದನ್ನು ಕೇಳಿದ ಪಾಂಡು ಹೋಗ್ತಿನಿ ....ಇಲ್ ನಂಕೈಲಿ ಇರೋಕಾಗೋದೆ ಇಲ್ಲ....
ಅಮ್ಮ....ಅಮ್ಮ....ನಾನ್ ಹೋಗ್ತೀನಿ ಬೆಂಗಳೂರಿಗ್ ಹೋಗಿ ಅಲ್ಲೇ ಏನಾದ್ರು ಕೆಲ್ಸ ಮಾಡ್ತಿನಿ....ದುಡ್ ಕೊಡು...ಎಂದು ತಾನೆ ಅಮ್ಮ ದುಡ್ಡಿಡುತಿದ್ದ ಡಬ್ಬಿಗೆ ಕೈ ಹಾಕಿ ತಾನೆ 500 ರ ನೋಟಿತ್ತು ಅದನ್ನೇ ಕಿಸೆಗಿಳಿಸಿದ....
ತನ್ನ ಕಾಲೇಜು ಬ್ಯಾಗಿನಲ್ಲಿದ್ದ ಪುಸ್ತಕವೆಲ್ಲ ಹೊರಗೆ ಚೆಲ್ಲಿ...
ಬಟ್ಟೆ ತುಂಬಿಸಿ ಹೊರಟು ನಿಂತ ....
ಅಮ್ಮ....ಲೋ ಈ ಕತ್ಲೇಲಿ ಎಲ್ಲಿಗ್ ಹೋಗ್ತಿಯೋ....ಸುಮ್ನೇ ಬ್ಯಾಗ್ ತೆಗ್ದಿಟ್ಟು....ಕೆಲ್ಸ ನೋಡು.....ಎಂದರು..

ಏನ್ ಕೆಲ್ಸ ನೋಡ್ಲಿ ಏನ್ ಕೆಲ್ಸ ಇದೆ ಇಲ್ ಮಾಡಕೆ...ಹುಳಿ ಸುತ್ಗೆ ತಗಂಡ್ ಕುಟ್ಟಾದ....
ಪಾಂಡು ಚಪ್ಪಲಿ ಮೆಟ್ಟಿ ....ಬ್ಯಾಗ್ ನೇತು ಹಾಕಿಕೊಂಡು ಹೊರಟೆ ನಿಂತ ....ನಾನ್ ಬೆಂಗಳೂರಿಗ್ ರಾಜು ಮನೆಗೋಗ್ತಿನಿ ...ಕೆಲ್ಸ ಹುಡ್ಕಿದ್ರಾಯ್ತು....ಯಾವ್ ಬಡ್ಡಿಮಗ ನಂಗ್ ಕೆಲ್ಸ ಕೊಡಲ್ಲ.....
ಬಿಸಲಲ್ಲಿ ಹುಳಿ ಸುತ್ಗೆ ತಗಂಡ್ ಕುಟ್ಟದಲ್ಲ ಆಫೀಸ್ ಕೆಲ್ಸ....
ಎಂದು ತನ್ನ ತಂದೆಯ ಮುಖ ನೋಡಿ ಮೂದಲಿಸುವಂತೆ ನುಡಿದ....

ರಾಮಾಚಾರಿ ......ತನ್ನ ಕಸುಬಗೆ ಬಯ್ತಿಯೇನ್ಲಾ....ಎಂದು ಮಗನ ಮೇಲೆ ಕೈ ಎತ್ತಿದರು....
ಪಾಂಡು....ಏಟು ತಪ್ಪಿಸಿ ಕೊಂಡು ...ಅಮ್ಮ ನಾನ್ ಬರ್ತಿನಿ....ಎಂದೇಳಿ ಹೊರಟೇ ಬಿಟ್ಟಾ...
ಪಾಂಡುವಿನ ಊರು....ರಾಮುಗಳ್ಳಿ....ಅಚ್ಚ ಮಲೆನಾಡು...ಚಿಕ್ಕಮಗಳೂರು ಜಿಲ್ಲೆಗೆ ಸೇರುವ ಊರು...
ರಾಮುಹಳ್ಳಿಗೆ ಯಾವ ಬಸ್ಸಿನ ಸೌಕರ್ಯ ಸುಗಮವಾಗಿರಲಿಲ್ಲ ...ಬೆಳಗ್ಗೆ ಒಮ್ಮೆ ಮಾತ್ರ ಬರುವ ಬಸ್ಸು....
ಮತ್ತೆ ರಾಮುಹಳ್ಳಿಯನ್ನು ಮರುದಿನ ಬೆಳಗ್ಗೆ ತಿರುಗು ನೋಡುತಿತ್ತು...
ರಾಮುಹಳ್ಳಿಯಿಂದ 1 ಕಿ ಮೀ ದೂರದ ತುರುವೇ ಕೊಪ್ಪಲಿನ ಹೈ ವೇ ಯಲ್ಲಿ...ಹಾಸನ ....ಮೂಡಿಗೆರೆ..ಮಂಗಳೂರು ...
ಬೆಂಗಳೂರು ಬಸ್ಸುಗಳು ಬರುತ್ತವೆ....ರಾಮುಹಳ್ಳಿಯಿಂದ ತುರುವೇ ಕೊಪ್ಪಲಿನ ದಾರಿ ....ತುಂಬಾ ಕಾಫಿಕಾಡಿನ ದಾರಿ...
ಹಗಲಲ್ಲೇ....ಒಬ್ಬರೆ...ಓಡಾಡೋಕೆ ಭಯವಾಗೋ ದಾರಿ....ಮೂರು ವರ್ಷದ ಹಿಂದೆ ಒಂದು ರಸ್ತೆ ....ಹಾಕಿದರಾದರು....ಮಲೆನಾಡದ್ದರಿಂದ ವಿಪರೀತ ಮಳೆಗೆ ಟಾರು ಕಿತ್ತು ಹೋಗಿ....ಮಣ್ಣಿನ ರಸ್ತೆಯಂತೇ ಆಗಿ ಹೋಗಿತ್ತು....
ಪಾಂಡು...ಸರಿ ತುರುವೆ ಕೊಪ್ಪಲಿಗೆ ಹೋಗಿ...ಬಸ್ಸು ಹತ್ತೋಣ ಅಂತ ನೆಡೆಯಲು ಪ್ರಾರಂಭ ಮಾಡಿದ......ಸಂಜೆ 7 ರ ಸಮಯ ದಾಟಿ....8 ಕ್ಕೆ....ಕಾಲಿಡುತಿತ್ತು...ಸುತ್ತ...ಕತ್ತಲೆ...ಅಗಾಗ ಭಯ ಹುಟ್ಟಿಸಲೆಂದೇ ಬರುತಿದ್ದ....ಕಿರ್ರ್ ಕಿರ್ರ್ ಎಂಬ ....ಹುಳುವಿನ ಶಬ್ಧ....ಎದೆಯ ಬಡಿತ ಹೆಚ್ಚಿಸುತಿತ್ತು....

ನೆಡೆದು ಬಂದಂತೆ ತಿರುವು ಮುಗಿದಂತೆ....ಒಂದು ಎಸ್ಟೇಟ್ ಬೋರ್ಡ್ ಕಾಣಿಸಿತು....ಅದು.. ರಾಮುಹಳ್ಳಿಗೆ ಸ್ತಿತಿವಂತರಾಗಿದ್ದ....ನಂಜುಂಡೇಗೌಡರ ಎಸ್ಟೇಟ್ ಪ್ರಾರಂಭವಾಗುವ ದಾರಿ.... ಅವರ ಎಸ್ಟೇಟ್ ಅಂತು ರಸ್ತೆಯ ಎರಡು ಬದಿಗೂ ಚಾಚಿ ಕೊಂಡಿದೆ....
ದೊಡ್ಡ ಮರದ ಕೊನೆಗಳು ಅರ್ಧ ರಸ್ತೆಯ ಮೇಲೇ ತೂಗುತ್ತವೆ....
ಅವರ ತೋಟವನ್ನೆಲ್ಲ...ಕಾಯಲು ಆಳಿಟ್ಟು ಲೈಟ್ ಹಿಡಿದು ಸುತ್ತುತ್ತಿರುವಂತೆ ಮಿಂಚು ಹುಳುಗಳು ಸುತ್ತುತ್ತವೆ....
ಮುಂದೆ ಸಾಗುತಿದ್ದಂತೆ ಪಾಂಡುಗೆ ಹೆಜ್ಜೆ ಮುಂದಿಡಲು ಭಯ...
ಅವನ ಭಯದ ಕಾರಣ....
ನಂಜುಂಡೇಗೌಡರ ತೋಟದ ಆಳು ರಂಗನಿಗೆ ಒಂದು ಮನೆ ಕಟ್ಟಿಸಿ ಕೊಟ್ಟು ರಂಗ ನ ಸಂಸಾರ ಅಲ್ಲೇ ಇರಲು ವ್ಯವಸ್ಥೆ ಮಾಡಿದ್ದರು ...ರಂಗ ನಿಯ್ಯತ್ತಿನ ಆಳು ಅವನು ಅವನ ಅಪ್ಪ ಅಮ್ಮ ಎಲ್ಲಾ ಗೌಡರ ಎಸ್ಟೇಟಿನಲ್ಲೇ ಆಗಿನ ಕಾಲದಿಂದ ದುಡಿತಾ ಇರೋರೆ....

ರಂಗ ನ ಅಪ್ಪ ಅಮ್ಮ ಅನಿರೀಕ್ಷಿತ ಖಾಯಿಲೆಯಿಂದ ಕಣ್ಣು ಮುಚ್ಚಿದ ಮೇಲೆ....
ಗೌಡರೇ ರಂಗನಿಗೊಂದು ಮದುವೆ ಮಾಡಿದರು ....ಅವಳ ಹೆಸರು ಕೆಂಪಿ.....ಹೆಸರಿಗೆ ತಕ್ಕಂತೆ ಕೆಂಪಗೆ ತೊಂಡೆಹಣ್ಣಿನಂತಿದ್ದಳು....
ರಂಗ ಬೆಳಗ್ಗೆ ಎಸ್ಟೇಟ್ ಗೆ ಹೋದರೆ ಬರೋದು ಸಂಜೆ...
ಕೆಂಪಿ ಬಯಲು ಸೀಮೆಯ ಅರಸೀಕೆರೆ ಕಡೆಯವಳು...ಆದ್ದರಿಂದ ಮಲೆನಾಡಿನ ಕಾಫಿತೋಟದ ಕೆಲಸ ಅಷ್ಟಾಗಿ ತಿಳಿತಿರ್ಲಿಲ್ಲ....
ಕೆಂಪಿ ಬಯಲು ಸೀಮೆಯ ಅರಸೀಕೆರೆ ಕಡೆಯವಳು...ಆದ್ದರಿಂದ ಮಲೆನಾಡಿನ ಕಾಫಿತೋಟದ ಕೆಲಸ ಅಷ್ಟಾಗಿ ತಿಳಿತಿರ್ಲಿಲ್ಲ....
ರಂಗ ಮನೆ ಕೆಲ್ಸಕ್ಕೆ ಅಂತ ಕೆಂಪಿನ ಕರ್ಕೊಂಡ್ ಹೋಗಿದ್ದಾಗ
ಗೌಡರೇ..."ಲೋ ರಂಗ ಹೊಸ್ದಾಗ್ ಮದ್ವೆ ಅಗಿರ ಮಗೀನೆ ಕೆಲ್ಸಕ್ ಕರ್ಕ ಬಂದಿಯಲ್ಲ....."
ಒಂದ್ ವರ್ಷ ಕಳಿಲಿ ಅಮೇಕೆ ಕೆಲ್ಸ ಕಲ್ತ್ಕಂಡಿರ್ತದೆ ಮಾಡ್ತದೆ......ನಿನ್ ಮನೆ ಕೆಲ್ಸನೇ ಬೇಕಾದಷ್ಟಿರ್ತದೆ....ಎಂದಾಗ ....
ರಂಗ ಸರಿ ಗೌಡ್ರೆ ...ನೀವ್ ಹೆಂಗ್ ಹೇಳ್ತಿರ ಅಂಗೆ ಕರ್ಕಂಬರಕ್ಲ ಬುಡಿ ಎಂದ....

ಎಸ್ಟೇಟ್ ಮ್ಯಾನೇಜರ್ ಸ್ವಲ್ಪ ಎಡವಟ್ಟಿನವ....ಸ್ಪಲ್ಪ ಹೆಂಗಸರ ಹುಚ್ಚು...
ರಂಗ ಎಸ್ಟೇಟ್ ಕಡೆ ಹೋದದ್ದನ್ನು ನೋಡಿಯೇ....ರಂಗನ ಮನೆಗೆ ಹೋಗಿ ರಂಗ ಇಲ್ವ ....ಎಂದು ಕೇಳಿ....ಕಾಫೀ ಹೀರಿ ಬರುತಿದ್ದ....
ರಂಗ ಎಸ್ಟೇಟ್ ಕಡೆ ಹೋದದ್ದನ್ನು ನೋಡಿಯೇ....ರಂಗನ ಮನೆಗೆ ಹೋಗಿ ರಂಗ ಇಲ್ವ ....ಎಂದು ಕೇಳಿ....ಕಾಫೀ ಹೀರಿ ಬರುತಿದ್ದ....
ಹೀಗೆ ....ನೆಡಿತಾ ಇರೋದು ....ರಂಗನಿಗೆ ....ಹೇಗೋ ..ಆಳುಗಳಿಂದ ಗೊತ್ತಾಯ್ತು...
ಎಲಾ ಬಡ್ಡಿ ಮಗ ......ಅವ್ನ ರಕ್ತ ಕುಡಿದೇ ಬುಡಾಕಿಲ್ಲ...ನನ್ ಹೆಡ್ತಿ ಮೇಲೇ ಕಣ್ಣಾಕೌನ ಅವ್ನು....ಎಲಾ ಅವ್ನವ್ವುನ ಅಂತ ಹಲ್ಲು ಮಸೆದು...
ಮರುದಿನ ಕೆಲಸಕ್ಕೋಗದೆ ದೂರದಲ್ಲಿ ನಿಂತು ಕಾಯ್ದ.....ಅವನು ಅಂದು ಕೊಂಡದ್ದಕ್ಕಿಂತ ತುಸು ಹೆಚ್ಚೇ...ಮುಂದುವರೆದಿತ್ತು...
ಇದನ್ನೆಲ್ಲ.....ನೋಡಿದ ರಂಗ
ಕೈ ಯಲ್ಲಿದ್ದ.ಕುಡುಗೋಲು ಮಾತನಾಡಿ ಮ್ಯಾನೇಜರ್ ರಕ್ತ ಕಕ್ಕಿಸಿ ಕೊಂದ .....
ಅದಾದ ಮೇಲೆ...ರಂಗ ಅದೆಲ್ಲಿ ಹೋದ್ನೋ ಊರೋರಿಗೂ ಗೊತ್ತಿಲ್ಲ....ಕೆಂಪಿ ತವರು ಮನೆ ಸೇರಿದಳು....
ಆ ಘಟನೆ ಆದಾಗಿಂದ....ಆ ರಸ್ತೆಲಿ ನೆಡೆದು ಸಾಗೋರು....ಮ್ಯಾನೇಜರಪ್ಪ...ಭೂತ ಆಗಿ ಅಲ್ಲೇ...ಅವ್ನೇ ಮನೆ ಸುತ್ತ ಸುತ್ತುತಾ ಅವ್ನೇ....ಎಂದು ಮಾತಾಡಿದ್ದು....ಪಾಂಡುವು ಕೇಳಿದ್ದ....
ಅದನ್ನೆಲ್ಲ...ನೆನೆಸಿ ಕೊಂಡು ನೆಡೆದು ದಾರಿ ಸಾಗಿ..ಆ ಮನೆಯ ದಾರಿ ಸಮೀಪಿಸಿದ್ದ...
ಪಾಂಡು ಒಂದೇ ಉಸಿರಿಗೆ......ಓಡಲು ಶುರು ಮಾಡಿದವನು ....ತುರುವೇ ಕೆರೆಗೆ ಬಂದು ನಿಂತ...
ಸಮಯ ನೋಡಲು ಕೈ ಗಡಿಯಾರದಲ್ಲಿ....8 :30 ಎಂದು ತೋರಿತು....
ಗೆಳೆಯ ರಾಜು .....ಬೆಂಗಳೂರಿಂದ ಮನೆಗೆ ಬಂದಾಗ ....ವಾಪಸ್ಸು ಹೋಗುವ ಗಾಡಿ 11 :00 ರದ್ದು....ಅವನು ಬಂದಾಗಲೆಲ್ಲ.....ಬಸ್ಸು ಹತ್ತಿಸೋಕೆ....ರಾಜು ಅಪ್ಪ ಜೊತೆಗೆ ಪಾಂಡುವು ಹೋಗುತಿದ್ದ....
ತುರುವೇ ಕೊಪ್ಪಲಿನ ಹೋಟೆಲ್ ಗಜಲಕ್ಷಿ ಯೇ ಎಲ್ಲರು ಬಸ್ಸು ಕಾಯುವ ಬಸ್ ನಿಲ್ದಾಣ....
ಅಲ್ಲೆ...ಕೆಲಸ ಮಾಡುತಿದ್ದ ರಾಮಯ್ಯ ಪರಿಚಯದವ ....ಅವನ ಬಳಿ ಮಾತಾಡುತ್ತ...ಕುಳಿತ....ಮನೆಯಲ್ಲಾದದ್ದು...ಎಲ್ಲಾ ಹೇಳಿದ... ಅದಕ್ಕೆ ರಾಮಯ್ಯ.....ನೋಡು ಬೆಂಗಳೂರು ನೀನ್ ಅನ್ಕೊಂಡಿರೋ ಸ್ವರ್ಗನು ಅಲ್ಲ.....ನರಕ ನೂ ಅಲ್ಲ....
ತುಂಬಾ ಕಷ್ಟ ಪಡ್ಬೇಕಾಯ್ತದೆ....ಸುಮ್ನೆ ಮನೆಗ್ ನಡಿ....ಎಂದ....
ತುಂಬಾ ಕಷ್ಟ ಪಡ್ಬೇಕಾಯ್ತದೆ....ಸುಮ್ನೆ ಮನೆಗ್ ನಡಿ....ಎಂದ....
ಅದೇನ್ ಸ್ವರ್ಗವೋ ನರಕವೋ ನಾನು ನೋಡ್ಕಂಡೇ ಬರ್ತೀನಿ...ಎಂದ ಪಾಂಡು....
9:30 ಗೆ ರಾಮಯ್ಯ... ಹೋಟೆಲ್ ಬಾಗಿಲು ಜಗ್ಗಿ ಬೀಗ ಜಗಿದು ಹೊರಟ....
ಹೊಟೆಲ್ ಹೊರಗೆ ಇದ್ದ ಉದ್ದನೆಯ ಬೇಂಚಿನ ಮೇಲೆ....ಪಾಂಡು ಒಬ್ಬನೇ ಕುಳಿತ....
ಬೀದಿ ನಾಯಿಗಳನ್ನ ಬಿಟ್ಟರೆ...ಯಾರು ಇರಲಿಲ್ಲ....
ಪಾಂಡು ಗೆ ಭಯ ಜೊತೆಯಲ್ಲಿ ನಾಯಿಗಳಿರುವ ದೈರ್ಯ...
ಆಗಾಗ ಬೆಳಕು ಚೆಲ್ಲಿ ಬರುತಿದ್ದ ಗಾಡಿಗಳು....
ಬೀದಿ ನಾಯಿಗಳನ್ನ ಬಿಟ್ಟರೆ...ಯಾರು ಇರಲಿಲ್ಲ....
ಪಾಂಡು ಗೆ ಭಯ ಜೊತೆಯಲ್ಲಿ ನಾಯಿಗಳಿರುವ ದೈರ್ಯ...
ಆಗಾಗ ಬೆಳಕು ಚೆಲ್ಲಿ ಬರುತಿದ್ದ ಗಾಡಿಗಳು....
ಕೈ ಗಡಿಯಾರ ನೋಡಿ ಈಗ ಹತ್ತು ಬೆಂಗಳೂರಿನ ಕೆಂಪು ಬಸ್ಸು ಬರಲು ಇನ್ನು ಒಂದು ಗಂಟೆ ಬೇಕು ಎಂದು ....ಕುಳಿತಿದ್ದ ಉದ್ದನೆಯ ಬೇಂಚಿನ ಮೇಲೆ....ಮಲಗಿಕೊಂಡ...
ಸೊಳ್ಳೆ ಕಡಿತಕ್ಕೆ....ನಿದ್ರೆ ಹತ್ತಲಿಲ್ಲ....ಮತ್ತೆ ಎದ್ದು ....ನಾಲ್ಕು ಸುತ್ತು ಅಲ್ಲೇ ಸುತ್ತಾಡುತಿದ್ದಂತೆ ಸಮಯ ಕಳೆದು ....ಬಸ್ಸು ಬರುವ ಹೊತ್ತಾಯ್ತು.....ಮರೆಯಲ್ಲಿದ್ದರೆ...ಬಸ್ಸು ನಿಲ್ಲಿಸದೇ ಹೋದಾನು ಎಂದು ....ರಸ್ತೇ ಬದಿಯೇ ನಿಂತ....

ಅಂತೂ ಕಾದಿದ್ದ ಬಸ್ಸು ಬಂತು....
ಏರಿ.....ಕಿಟಕಿ ಪಕ್ಕದ ಸೀಟು ಹಿಡಿದು ಕೂತ....
ನಾಳೆ ಬೆಳಗ್ಗೆ ಬೆಂಗಳೂರಿಗೆ ಹೋಗುವ ಉತ್ಸಾಹ....ಮನದಲ್ಲಿ...
ಟಿಕೆಟ್ ಗೆ 250 ರೂಪಾಯಿ ಕೊಟ್ಟು...ಟಿಕೇಟ್ ತೆಗೆದುಕೊಂಡ....ಹಾಗೇಯೆ ಕಿಟಕಿಗೆ ಒರಗಿ ಕನಸಿಗೆ ಜಾರಿ ನಿದ್ರೆ ಹತ್ತಿತು....
ಟಿಕೆಟ್ ಗೆ 250 ರೂಪಾಯಿ ಕೊಟ್ಟು...ಟಿಕೇಟ್ ತೆಗೆದುಕೊಂಡ....ಹಾಗೇಯೆ ಕಿಟಕಿಗೆ ಒರಗಿ ಕನಸಿಗೆ ಜಾರಿ ನಿದ್ರೆ ಹತ್ತಿತು....
ಯಾರೋ ಜೋರಾಗಿ ತಟ್ಟಿದಂತಾಗಿ ಧಡಕ್ಕನೆ ಎದ್ದ....
ಏ ಇಳಿಯಪ್ಪ....ಮೆಜೆಸ್ಟಕ್ ಬಂತು .....
ಹೋ.....ಎಂದು ಗಡಿಯಾರ ನೋಡಿದ....ನಮಯ ಬೆಳಗಿನ ಜಾವ 5 ಗಂಟೆ....ಇನ್ನು ಕತ್ತಲು ಸರಿದಿರಲಿಲ್ಲ....
....ಶೌಚಾಲಕ್ಕೆ ಹೋಗಿ ಶೌಚ ಮುಗಿಸಿ...
ಹೊಟ್ಟೆ ಹಸಿವು ....ಶುರುವಾಯಿತು....
ಇನ್ನು ಹೋಟೆಲ್ ಯಾವು ತೆರೆದಿರಲಿಲ್ಲ....
ಯಾವುದೋ ಒಂದು ಫ್ಲಾಟ್ ಫಾರಂ ನಲ್ಲಿ ಕೂತು....
ಇನ್ನು ಹೋಟೆಲ್ ಯಾವು ತೆರೆದಿರಲಿಲ್ಲ....
ಯಾವುದೋ ಒಂದು ಫ್ಲಾಟ್ ಫಾರಂ ನಲ್ಲಿ ಕೂತು....
ಅಮ್ಮ...ಹಸಿವು ಎಂದೊಡನೆ ಊಟ ತರುತಿದ್ದಳು..
ಅಮ್ಮನ ನೆನಪಾಗಿ....ಕಣ್ಣು ಒದ್ದೆಯಾಯಿತು....
ಅಮ್ಮನ ನೆನಪಾಗಿ....ಕಣ್ಣು ಒದ್ದೆಯಾಯಿತು....
ಮತ್ತೆ ವಾಪಾಸ್ ಹೋಗಿ ಬಿಡಲೆ ಎಂದೆನಿಸಿದರು ಅಹಂ ಅಡ್ಡ ಬಂದು ತಡೆಯಿತು....
ರಾಜುವಿಗೆ ಫೋನ್ ಮಾಡೋಣವೆಂದು...ಬ್ಯಾಗಿನಲ್ಲಿಟ್ಟಿದ್ದ ಫೋನ್ ತೆಗೆದು ರಾಜು ನಂಬರ್ ಹುಡುಕಿ ಫೋನ್ ಮಾಡಿದ ಫೋನ್ ರಿಂಗಾಯ್ತಾದರು ಯಾರೂ ಫೋನ್ ತೆಗೆಯಲಿಲ್ಲ...
ಹಿಂದೊಮ್ಮೆ ರಾಜು ಊರಿಗೆ ಬಂದಾಗ.....ಹೇಳಿದ ಮಾತು ನೆನಪಾಯಿತು....
ಲೋ ಪಾಂಡು ನೀನ್ ಡಿಗ್ರಿ ಮುಗ್ಸಿ ಬೆಂಗಳೂರ್ ಗೆ ಬಾರೋ ನಾನೆಲ್ಲ....ನೋಡ್ಕೊತಿನಿ....ಕೈ ತುಂಬಾ ಸಂಬಳ ತಗೋಂಡ್ ಆರಾಮಾಗಿ ಇರ್ಬೋದು...ಅಂದಿದ್ದ..
ಬರುವಾಗಲೇ ಫೋನ್ ಮಾಡಬೇಕಿತ್ತು ಎಂದು ಕೊಂಡು ಮತ್ತೊಮ್ಮೆ...ಫೋನ್ ಮಾಡಿದ....
ಈ ಬಾರಿ ಫೋನ್ ಎತ್ತಿದ ರಾಜು....ಏನೋ ಪಾಂಡು ಬೆಳಗ್ ಬೆಳಗ್ಗೆ ನೆ ಫೋನ್ ಮಾಡಿದಿಯಾ....??
ಲೋ ರಾಜು ನಾನು ಬೆಂಗಳೂರಿಗ್ ಬಂದಿದಿನೋ...ಬಸ್ ಸ್ಟಾಂಡ್ ಲೇ ಇದಿನಿ......
ಹೋ....ಯಾವಾಗ್ ಬಂದೇ ಏನ್ ವಿಷ್ಯ ಏನ್ ಕತೆ...???
ಎಲ್ಲಾ ಹೇಳ್ತಿನಿ ಬಾ ಮರಾಯ ಎಂದ......ಪಾಂಡು...
ಸರಿ ಬಂದೆ.....ಅಲ್ಲೇ ಇರು ಬಂದು ಫೋನ್ ಮಾಡ್ತೀನಿ ಎಂದ...
ಇತ್ತ.....ರಾಜು ಗೆಳೆಯ ಬೈಕ್ ಕರೆಸಿಕೊಂಡು ....ಪಾಂಡು
ಕರೆತರಲು ಹೊರಟ....
ಪಾಂಡು ಮತ್ತು ರಾಜು ಇಬ್ಬರು ....ರಾಜುವಿನ ರೂಮನ್ನು ಸೇರಿದರು....
ರಾಜು ಒಬ್ಬನೇ ಇದ್ದದರಿಂದ ಪುಟ್ಟ ರೂಮನ್ನು ಕಡಿಮೆ ಬಾಡಿಗೆಗೆ ಹಿಡಿದಿದ್ದ....
ಪಾಂಡು ನೆಡೆದದ್ದೆನ್ನಲ್ಲ...ತನ್ನ ಪ್ರತಿಜ್ಞೆಯನ್ನು ಹೇಳಿದ...
ರಾಜು ಒಬ್ಬನೇ ಇದ್ದದರಿಂದ ಪುಟ್ಟ ರೂಮನ್ನು ಕಡಿಮೆ ಬಾಡಿಗೆಗೆ ಹಿಡಿದಿದ್ದ....
ಪಾಂಡು ನೆಡೆದದ್ದೆನ್ನಲ್ಲ...ತನ್ನ ಪ್ರತಿಜ್ಞೆಯನ್ನು ಹೇಳಿದ...
ಆಷ್ಟರಲ್ಲಾಗಲೆ ...ಸಮಯ 8 ಎಂದು ತೋರುತಿತ್ತು...
ರಾಜು ಗಡಿ ಬಿಡಿಯಲ್ಲಿ...ಹೊರಟು...
ಪಾಂಡುವಿಗೆ ತಿಂಡಿ ತಂದು ಕೊಟ್ಟು....
ರಾಜು ಗಡಿ ಬಿಡಿಯಲ್ಲಿ...ಹೊರಟು...
ಪಾಂಡುವಿಗೆ ತಿಂಡಿ ತಂದು ಕೊಟ್ಟು....
ಪಾಂಡು....ಡ್ಯೂಟಿ ಗೆ ಟೈಮ್ ಆಯ್ತು.....ನಾನ್ ಹೊರಡ್ಬೇಕು....ನಿನ್ ಕೆಲ್ಸದ್ ವಿಷ್ಯ ನಾನ್ ನೋಡ್ಕೋತಿನಿ...
ರೂಮ್ ಬಿಟ್ಟು ಎಲ್ಲೂ ಹೋಗ್ಬೇಡ ....ಇದು ನಮ್ಮೂರಲ್ಲ...
ಸಿ ಟಿ....ಹೊರಗ್ ಹೋದ್ರೆ ವಾಪಾಸ್ ಬರೋಕ್ ಗೊತ್ತಾಗಲ್ಲ...ಗಲ್ಲಿ ಗಲ್ಲಿಗೂ ಗಲಿ ಬಿಲಿ ಮಾಡೋ ಅಡ್ಡ..ಉದ್ಧ ರಸ್ತೆಗಳು....ಎಂದ....
ರೂಮ್ ಬಿಟ್ಟು ಎಲ್ಲೂ ಹೋಗ್ಬೇಡ ....ಇದು ನಮ್ಮೂರಲ್ಲ...
ಸಿ ಟಿ....ಹೊರಗ್ ಹೋದ್ರೆ ವಾಪಾಸ್ ಬರೋಕ್ ಗೊತ್ತಾಗಲ್ಲ...ಗಲ್ಲಿ ಗಲ್ಲಿಗೂ ಗಲಿ ಬಿಲಿ ಮಾಡೋ ಅಡ್ಡ..ಉದ್ಧ ರಸ್ತೆಗಳು....ಎಂದ....
ನಮ್ ಅಪ್ಪಗೆ ಫೋನ್ ಮಾಡಿ ಹೇಳ್ತೀನಿ ನೀನ್ ಬಂದಿದಿಯಾ ಅಂತಾ ...ನಮ್ ಅಪ್ಪ ನಿಮ್ ಮನೆ ಕಡೆ ಹೋದಾಗ ಹೇಳ್ತಾರೆ....ತಲೆಕೆಡುಸ್ಕೋ ಬೇಡ...
ಹೂ ಸರಿ ಎಂದ ಪಾಂಡು......
ಮದ್ಯಾಹ್ನ ಹೊತ್ತಾದಂತೆ....ಹಸಿವು ಶುರುವಾಗಿ....ಊಟಕ್ಕೆಂದು ಪಾಂಡು ರೂಮಿಗೆ ಬೀಗ ಜಡಿದು ಹೊರಟ....
ಪಕ್ಕದ ಬೀದಿಯಲ್ಲಿದ್ದ....ಹೋಟೆಲ್ ನಲ್ಲಿ ಊಟ ಮುಗಿಸಿ....
ಹಾಗೇ ಸುತ್ತಾಡಿ ಬರೋಣವೆಂದು ಇನ್ನು ಮುಂದಿನ ಬೀದಿಗೆ ಸಾಗಿದ....ನೆಡೆದು ನೆಡೆದು....ತನ್ನ ಬೀದಿಯನ್ನೇ..ಮರೆತ...ಫೋನ್ ಕೂಡ ರೂಮಿನಲ್ಲೇ ಉಳಿದಿತ್ತು....
ಅಯ್ಯೋ ನಾನೇನ್ ಮಾಡ್ಬಿಟ್ಟೆ...ಎಂದು ರಸ್ತೆ ಬದಿಯ ಫೂಟ್ ಪಾತ್ ನಲ್ಲಿ ಕುಳಿತ....
ಹೀಗೆ ಕೂತರೆ ಪ್ರಯೋಜನವಿಲ್ಲ.....ಎಲ್ಲಾ ಬೀದಿ ಸುತ್ತಿದರೂ ಸರಿಯೇ..ನನ್ನ ರೂಮಿನ ಬೀದಿ ಹುಡುಕ ಬೇಕೆಂದು ಸುತ್ತಿ ಸುತ್ತಿ....ವಿನಯ ನಗರ ತಲುಪಿದ....
ದಣಿವಾರಿಸಿ ಕೊಳ್ಳಲು ಕುಳಿತಿದ್ದಾಗ...ದೊಡ್ಡ ಬ್ಯಾಗು ಹೊತ್ತು ಒಂದು ಮನೆಯಿಂದ ಆಚೆ ಬಂದ ವ್ಯಕ್ತಿ ಯನ್ನು ಗಮನ ವಿಟ್ಟು...ನೋಡಿದಾಗ ಪರಿಚಯದವನಂತೆ ತೋರಿ ಹತ್ತಿರ ಹೋದ...
ನೋಡಿದರೆ....ರಾಜು.....
ಪಾಂಡು ಗೆ ಜೀವವೇ ಮರಳಿ ಬಂದಂತಾಯಿತು...
ಆದರೆ ರಾಜುವಿಗೆ ಮುಜುಗರ.....
ಕಾರಣ...ತಾನು ಊರಿನಲ್ಲೆಲ್ಲ.....ಕಂಪನಿಯಲ್ಲಿ ಮ್ಯಾನೇಜರ್ ಎಂದು ಹೇಳಿಕೊಂಡಿದ್ದ...
ಕಾರಣ...ತಾನು ಊರಿನಲ್ಲೆಲ್ಲ.....ಕಂಪನಿಯಲ್ಲಿ ಮ್ಯಾನೇಜರ್ ಎಂದು ಹೇಳಿಕೊಂಡಿದ್ದ...
ನೀನ್ಯಾಕೋ ಇಲ್ಲಿಗ್ ಬಂದೆ.....ನಾನ್ ಹೇಳಿರ್ಲಿಲ್ವ....ರೂಮ್ ಬಿಟ್ಟು ಬರ್ಬೇಡ ಅಂತಾ.....ಎಂದ ರಾಜು....
ಪಾಂಡು ಹಾಗೇ ಸುತ್ತಾಡಿ ಬರೋಣ ಅಂತ ಬಂದು ಹೀಗಾಗೋಯ್ತು....ಎಂದ...
ಸರಿ....ಬಾ ನನ್ ಜೊತೆ ಲಿ ಎಂದು ರಾಜು ತನ್ನ ಆಫೀಸಿ ಗೆ ಕರೆದು ಕೊಂಡು ಹೋದ.....ಆ ಆಫೀಸಿನ ಮ್ಯಾನೇಜರ್ ಜೊತೆ ಮಾತನಾಡಿ ಹೇಗೋ...ಪಾಂಡುವಿಗೂ ಕೆಲಸ ದೃಢಪಡಿಸಿದ....
ನಾಳೆ ಬರುವಾಗ ಡಾಕ್ಯುಮೆಂಟ್ ತರಲು ಹೇಳಿದರು...
ಕೆಲಸಕ್ಕೆ ಸೇರಿದ ಮೊದಲ ದಿನ......ಸೇಲ್ಸ ಮ್ಯಾನ್ ಕೆಲಸವನ್ನು ವಿವರವಾಗಿ ತಿಳಿಸಿ...ತಿಂಗಳಿಗೆ 5000 ಕೊಡುವುದಾಗಿ....ಕೆಲಸದ ಕ್ಷಮತೆ ಮೇಲೆ....ನಿಮಗೆ...ಹೆಚ್ಚಿನ ಬೋನಸ್ ಕೊಡುವುದಾಗಿ...ಹೇಳಿದರು...
ಕೆಲಸಕ್ಕೆ ಸೇರಿದ ಮೊದಲ ದಿನ......ಸೇಲ್ಸ ಮ್ಯಾನ್ ಕೆಲಸವನ್ನು ವಿವರವಾಗಿ ತಿಳಿಸಿ...ತಿಂಗಳಿಗೆ 5000 ಕೊಡುವುದಾಗಿ....ಕೆಲಸದ ಕ್ಷಮತೆ ಮೇಲೆ....ನಿಮಗೆ...ಹೆಚ್ಚಿನ ಬೋನಸ್ ಕೊಡುವುದಾಗಿ...ಹೇಳಿದರು...
ಬಿಸಿಲಿನಲ್ಲಿ ಹೆಣ ಭಾರದ ವಸ್ತುಗಳು ಬೆನ್ನ ಮೇಲೆ....
ಸುಮ್ಮನೆ ಕರೆದು ಸಮಯ ಹಾಳು ಮಾಡುವ ಅಪಾರ್ಟ್ ಮೆಂಟ್ ಜನರು.....
ತಿಂಗಳಿನ 5000 ಬಂದಾಗ ಅದರಲ್ಲಿ....ತಿಂಗಳೆಲ್ಲದರ ಬಾಡಿಗೆ ಇಬ್ಬರಾದ್ದರಿಂದ ಬೇರೆ ರೂಮು ತಿಂಗಳಿಗೆ 4000 ಇಬ್ಬರು ಹಂಚಿಕೊಂಡರು..ಊಟ ...ತಿಂಡಿ....ಬಸ್ ಚಾರ್ಜು ಅಂತಾ ನಿರ್ವಹಣೆಗೆ ಮಾಡಿದ್ದ ಸಾಲ ಕಳೆದು ಉಳಿದದ್ದು....500.....ಅದನ್ನು ಮನೆಗೆ ಕಳುಹಿಸಿದರೆ...ಅದಕ್ಕೆ ಅಪ್ಪ 1000 ಸೇರಿಸಿ ನನಗೇ ಕಳುಹಿಸುತ್ತಾರೆಂದು ಕೊಂಡು.....ಸುಮ್ಮನಾದ...

ಅಂದಿಗೆ ಅಪ್ಪ ನ ಶ್ರಮ ...ಬೆವರಿನ ಬೆಲೆ ತಿಳಿದಿತ್ತು....
ರಚನೆ
ಶ್ಯಾಮ್ ಪ್ರಸಾದ್ ಭಟ್
ರಚನೆ
ಶ್ಯಾಮ್ ಪ್ರಸಾದ್ ಭಟ್