Wednesday, June 5, 2019

ಸರ್ವ ರೋಗದ ಮದ್ದು






ಹೀಗೆ ಕೆಲಸದ ಮೇಲೆ ಚನ್ನರಾಯಪಟ್ಟಣಕ್ಕೆ ಹೋಗಿದ್ದೆ...

ಹೋದ ಕೆಲಸವೆಲ್ಲ ಮುಗಿದು ಕೆಲಸಕ್ಕೆ ಸಂಬಂದಿಸಿದಂತೆ ಒಬ್ಬ ವ್ಯಕ್ತಿಯ ಭೇಟಿ ಜರುಗಲಿಲ್ಲ...

ಸರಿ ನಾಳೆ ಭೇಟಿ  ಮಾಡಿಯೇ ಹೋದರಾಯಿತೆಂದು ಕೊಂಡು

 ಚನ್ನರಾಯಪಟ್ಟಣದಲ್ಲಿ ದೂರದ ಸಂಬಂಧಿಯೊಬ್ಬರಿದ್ದಾರೆ ....

ಸಂಬಂಧ ದಲ್ಲಿ ದೂರದವರಾದರು ಬಂದು ಹೋಗುವ ಪರಿಪಾಠದಿಂದ ಆತ್ಮೀಯರು ಹತ್ತಿರದವರಾಗಿದ್ದರು...
ಸಂಬಂಧವನ್ನು ಗುಣಿಸಿ ಎಣಿಸಿ ನೋಡಿದರೆ ಅಣ್ಣ ..ಅತ್ತಿಗೆಯ  ಮನೆ
ಅವರ ಮನೆ ತಲುಪುವಷ್ಟರಲ್ಲಿ 2:00 ರ ಸಮಯ ...

ಊಟ ಮುಗಿಸಿ....ಸ್ವಲ್ಪ ವಿರಮಿಸಿದೆ ...

ನೀರು ಬದಲಾದದ್ದಕ್ಕೋ...ಏನೋ ಶೀತಾ ...ತಲೆನೋವು ಶುರುವಾಯ್ತು.
ಅಣ್ಣನನ್ನು ಕೇಳಿದೆ...

 ಲೋ ಇಲ್ಲಿ ಯಾವ್ದಾದ್ರು ಮೆಡಿಕಲ್ ಇದಿಯಾ...ಎಂದೆ ಅದಕ್ಕವನು  ನಾನೇ ಅಮೇಲೆ ಟೌನ್ ಗೆ ಹೋಗಿ ತಂದು ಕೊಡ್ತೆನೆ ಅಂದ

 ಬೇಡ ಬೇಡ  ಮರಾಯ ಹಾಗೇ ಸುತ್ತಾಡಿದಾಗೆ ಅಗುತ್ತೆ ಅಂತ ನಾನೇ ಹೊಗ್ ಬರ್ತೀನಿ...ಅಂತ ಹೊರಟೆ..

ಹಾಗೇ ಅಣ್ಣ ನ ಮನೆಯಿರುವ ಬೀದಿ ದಾಟಿ ಮುಖ್ಯ ರಸ್ತೆಗೆ ಸಂಪರ್ಕಿಸುವ ದಾರಿವರೆಗೂ ಒಂದು ಮೆಡಿಕಲ್ ಇಲ್ಲ....

ಸುಮ್ಮನೆ ನೆಡಿಯೋದ್ ಪ್ರಯೋಜನ ಇಲ್ಲ...ಯಾರ್ನಾದ್ರು ಕೇಳೋಣ....ಅಂತ ಅಲ್ಲೇ ಬದಿಯಲ್ಲಿ...
"ಕುಮಾರ ಬಾರ್ ಆಂಡ್ ರೆಸ್ಟೋರೆಂಟ್ " ನಲ್ಲಿ
ತುಂಬಾ ಜನರು ಇದ್ದದರಿಂದ ಆಲ್ಲಿಗೇ ಹೋದೆ...

ಅಪರಿಚಿತನೊಬ್ಬನಲ್ಲಿ....ಸಾರ್ ಇಲ್ಲಿ ಯಾವ್ದಾದ್ರು ಹತ್ರದಲ್ಲಿ ಮೆಡಿಕಲ್ ಇದೆಯಾ?? ಎಂದೆ...

ಅದಕ್ಕವನು...ನಗು ಮುಖದಿ

ತುಂಬಾ ಹತ್ರದಲ್ಲೇ ಐತೆ ಸಾರ್....ಹತ್ರದಲ್ಲೇ ಐತೆ ಸಾರ್....

ಸಾರ್ ಮೆಡಿಕಲ್ ಗೇ  ಬಂದು ಮೆಡಿಕಲ್ ಅಡ್ರೆಸ್ ಕೇಳ್ತಿರಲ್ಲ...ಸಾರ್...ಎಂದ..

ಅಯ್ಯೋ ...ಹೌದ ಎಂದು ಸುತ್ತ ಕಣ್ಣಾಡಿಸಿದರು ಒಂದು ಮೆಡಿಕಲ್ ಇಲ್ಲ....

...ಥಟ್ಟನೆ ಅವನ ಮಾತಿನ ಆಂತರ್ಯ ಅರ್ಥವಾಯಿತು"

ಏನ್ ಉಸಾರಿಲ್ಲ...ಸಾರ್ ಎಂದ...

ಶೀತ ತಲೆನೋವು ಎಂದೆ...
     30 ml...ತಗೋಳಿ ಎಲ್ಲ ಕಿತ್ಕಂಡ್ ಹೋಯ್ತದೆ ಎಂದ....

ಗಾದೆ ನೇ ಮಾಡೌರೆ ಕೇಳಿಲ್ವ ಸಾರ್
"ಸರ್ವ ರೋಗಕ್ಕು ಸಾರಾಯಿ ಮದ್ದು...."

ಸರಿ ಸರಿ ಕೇಳಿದಿನಿ...ಬಿಡು ಮರಾಯ ಅಂತ ಹೇಳಿ ಅಲ್ಲಿಂದ ಹೊರಟು...
ಸ್ವಲ್ಪ ಮುಂದೆ ನೆಡೆದೆ... ಭಗತ್ ಸಿಂಗ್ ಸರ್ಕಲ್ ನಲ್ಲಿ.....ಶ್ರೀ ಮೆಡಿಕಲ್ ಕಣ್ಣಿಗೆ ಬಿತ್ತು ...ಮಾತ್ರೆ ತಗೋಂಡು....

ಕತ್ತಲೆ ಆವರಿಸಿದ್ದರಿಂದ.....ಆಟೋ ಹಿಡಿದು ಅಣ್ಣನ ಮನೆ ಸೇರಿದೆ...

            ಮುಂಜಾನೆ ಕನಸು.
                 
                              ರಚನೆ
                  ಶ್ಯಾಮ್ ಪ್ರಸಾದ್ ಭಟ್