Monday, February 25, 2019

                     ಕುಟುಕಿದ ಕಟುಕನ ಬೆಂಕಿ






                              

ಬೆಂಕಿ ಇಟ್ಟಿದ್ದು ಯಾರ ಬೀಡಿ ತುಂಡೋ
ಮರಗಳ್ಳರ ಹಿಂಡೋ..??  ನಾ ತಿಳಿಯೇ..

ಬೆಂಕಿ ಬಿದ್ದಿದೆ ಎನ್ನ ಮನೆಗೆ.
ಬೆಂಕಿ ಬಿದ್ದಿದೆ ಎನ್ನ ಒಡಲಿಗೆ...
ಕೂಗಿ ಹೇಳಲು ಬಾಯಿಲ್ಲ ಮೂಗ ನಾನು....
ಅಳಲು ನನ್ನವರಿಲ್ಲ..ಕಣ್ಣೀರೆ ಬೆಂಕಿಯ ನಡುವೆ ಬತ್ತಿ ಹೋಗಿವೆ...
ಊರಿಗೆ ಬಂದರೆ ಬಡಿದು ತಿನ್ನುವಿರೆ...
ಇಲ್ಲೇ ಇರಲು ಸುಟ್ಟು ಹಾಕುವಿರಿ..

ಭಕ್ಷಣೆಗೆ ಎಣೆಯಿಲ್ಲ ..
ರಕ್ಷಣೆ ನಮಗಿಲ್ಲ...
  ಕಾರು ಸುಡಲು..." ಓಡಿದಿರಿ"
ಕಾಡು ಸುಡಲು ನಿಂತು "ನೋಡಿದಿರಿ"

ಬೆಂಕಿ ಬಿದ್ದದ್ದು ಬಂಡಿಪುರಕಲ್ಲ..
ಬದುಕ ಬಂಡಿಗೆ...
                          ರಚನೆ..
              ಶ್ಯಾಮ್ ಪ್ರಸಾದ್ ಭಟ್