ಪರದೇಶದಾಗ ಪರದೇಶಿಯಾಗಿ ಸುತ್ತುವಾಗ...ಯಾವ ನುಡಿ ಕೇಳಿದರ ರಕ್ತ ಬಿಸಿಯಾಗಿ ನಾಡಿ ಮಿಡಿತ ಜೋರಾಗಿ ಬಡಿವಂತೆ ಮಾಡುವುದೇ...ಕನ್ನಡ
ಒಮ್ಮೊಮ್ಮೆ ಇಂದಿನ ಸ್ಥಿತಿಯ ಕಂಡು ಚಿಂತೆ ಮಾಡುವುದು ಉಂಟು....ಹಿಂದಿನ ವೈಭವವ ಕಂಡು ಆಶ್ಚರ್ಯಗೊಂಡದ್ದು ಉಂಟು....
ಬರೆಯಲು ಬಳಪ...ಪೆನ್ನು ...ಪೆನ್ಸೀಲು...ಹಾಳೆ...ಹೀಗೆ ಬರೆದದ್ದ ಪ್ರಕಟ ಮಾಡಲು ಹಲವಾರು ಅವಕಾಶಗಳಿರುವ ಇಂದಿನ ವಾಸ್ತವಿಕ ಸಮಾಜಕ್ಕೂ..
.ಹಿಂದೆ...ಆಶ್ರಯಕ್ಕಾಗಿ ಅಲೆದಾಡಿ ರಾಜನೀಡಿದ ಆಶ್ರಯದ ಕೃತಘ್ನತೆಗಾಗಿ ಒಲ್ಲದ ಮನಸಲಿ ಅವನು ಅಸಮರ್ಥನಾದರು ಸಮರ್ಥ ನೆಂದು ಬಿಂಬಿಸಿ ಬರೆದು....
ಸಮರ್ಥ ರಾಜರ ಇತಿಹಾಸ ಉಳಿಸಿ ಎಳೆಯರ ಬೆಳವಣಿಗೆ ಮಾರ್ಗ ಮಾಡಿಕೊಟ್ಟ ಅದೆಷ್ಟೋ ಕವಿಗಳು ...
ಬರೆಯಲು ಈಗಿರುವ ಅನುಕೂಲವಿರದಿದ್ದರು ತಾಳೆ ಮರದ ಗರಿಯೋ....ಯಾವುದೋ ಮರದ ಎಲೆಯಲ್ಲಿಯೋ ಅವರ ಮೇರು ಪಾಂಡಿತ್ಯ ಅನಾವರಗೊಳ್ಳಿತಿತ್ತು...
ಪಾಂಡಿತ್ಯ ವೆಂದರೆ ಎಂತಹುದು ಕೇವಲ ಗದ್ಯದಂತ ಪದ್ಯ ಬರೆಯುವುದಲ್ಲ....
ಬರೆವ ಪದ್ಯಗಳಿಗೆ...ಕಾವ್ಯ ಗಳಿಗೆ. ....ತಮಗೆ ತಾವೇ ಷಟ್ಪದಿಯ ....ಸಾಂಗತ್ಯದ ...ಛಂದಸ್ಸಿನ ಚೌಕಟ್ಟುಗಳನ್ನು ವಿಧಿಸಿಕೊಂಡು ಅದೇ ಚೌಕಟ್ಟಿನೊಳಗೆ ಬರೆದು ಬಿರುದು ಪಡೆಯುತಿದ್ದರು....
ಈಗ ನಾವು ಗಮನಿಸಿದರೆ ಎರಡಕ್ಷರ ಗೀಚಿದೊಡನೆ...ಅದಕ್ಕೆ ದಕ್ಕಬಹುದಾದ ಬಹುಮಾನದ ಚಿಂತೆ...ಅದನ್ನು ಪ್ರಸಂಶಿಸಬೇಕೆನುವ ಬಿಗುಮಾನತೆಯ ಅಂಶ ಕೆಲವರಲ್ಲಿ ..."ಪುಸ್ತಕದೀ ತಾನ್ ಓದಿ ಮಸ್ತಕಕೆ ಇಳಿಸಿದರೇ ಮತ್ತೆ ಪುಸ್ತಕ ಬರೆಯಲು ಅನುವಾಗುವುದು ತಮ್ಮ"
ಹೀಗೆ ನನ್ನ ಸ್ನೇಹಿತ ಕವನ ಬರೆದಿದಿನಿ ನೋಡೋ ಅಂತ ತಂದು ಕೊಟ್ಟ ಸರಿ ಎಂದು ತೆಗೆದು ಕೊಂಡರೆ ನಾಲ್ಕು ಪುಟ ....ಅಶ್ಚರ್ಯ ಆಯ್ತು ಕಥೆ ಏನೋ ಅಂದೇ ....ಅಲ್ಲಲೇ ಕವಿತೆ..ಅಂದ
ಹುಮ್ ಸರಿ ಕಾವ್ಯವಸ್ತು ಏನು ಅಂದೇ..
ಅದಕ್ಕೆ ಅವನು ಕಾವ್ಯವಸ್ತು "ಕಾವ್ಯ" ನ ಅಂದ....
ಅರ್ಥ ಆಗ್ಲಿಲ್ಲ ಮೊದಲು ಗದ್ಯಕವಿತೆ ಓದಿದ ಮೇಲೆ ತಿಳಿತು ಕಾವ್ಯವಸ್ತು ಅವನ "ಗೆಳತಿ ಕಾವ್ಯ" ಅಂತ....
ಅವನಿಗೆ ಸಲಹೆ ಕೊಡಬೇಕು ನಾನು ಹೇಗ್ ಕೊಡೊದು ಅಂತ ಯೋಚನೆ ಮಾಡಿ ಕವನದ ರೂಪದಲ್ಲಿಯೇ ಕೊಡೋಣ ಅಂತ ಅವನನ್ನ ತಿದ್ದೋಕೆ ಒಂದ್ ಕವನ ಬರೆದೆ ಅದೇ ಇದು
ಅದಕ್ಕೆ ಶೀರ್ಷಿಕೆ ಏನಿಡೋದು ಅಂತ ಯೋಚನೆ ಮಾಡಿ...ಅವನನ್ನು ಕವಿ ಅಂದರೆ ಸಂತೋಷಪಡ್ತಾನೆ ಅಂತ "ಯುವ ಕವಿಗೆ ಮನವಿ" ಅಂತ ಶಿರ್ಷಿಕೆ ಕೊಟ್ಟು ಬರೆದೆ...
ಪ್ರಾಸವಿರದ ಕವಿತೆ ಓದಲು ತ್ರಾಸ
ಗದ್ಯದಂತಿದ್ದರೆ ಸಿಗುವುದೇ ರಸ
ಕಾವ್ಯ ಸಂದೇಶ ಸರಳವಾಗಿರಲಿ
ಕವಿ ದ್ವಂದ್ವ ಓದುಗನ ತಲುಪದಿರಲಿ
ವಿಷಯದ ಅರಿವಿರಲಿ
ಅತಿಷಯವಾಗದಿರಲಿ
ಕಾವ್ಯದ ವಸ್ತುವಿನಲಿ
ಕವಿಯ ಸ್ಲಷ್ಟತೆ ಇರಲಿ
ಮೇಧಾವಿತನ ತೋರಿಸುವ ಭರದಿ
ದಾಟದಿರಲಿ ಕಾವ್ಯ ಶರಧಿಯ ಪರಿಧಿ
ಕಾವ್ಯ ಕ್ಲಿಷ್ಟಮಾಡಿ ಪಡೆಯದಿರು ಮೆದುಳ ಬಲಿ
ಸರಳ ಕಾವ್ಯವೇನೆಂಬುದ ಕುಮಾರವ್ಯಾಸನ ಕಾವ್ಯದಿಂದ ಕಲಿ...
ಬರೆಯುವ ಮುನ್ನ ಚೆನ್ನಾಗಿ ಓದು
ಬರೆದದ್ದು ಅಚ್ಚಾಗುವ ಮುನ್ನ ಬರೆದದ್ದ ಓದು ಗೆಳೆಯ..
ಇಂದು ಬರೆಯುವವರ ಸಂಖ್ಯೆ ಕಡಿಮೆ ಇದೇ ..ಕಾರಣ -ಓದುವವರ ಸಂಖ್ಯೆ ಕಡಿಮೆಯಾಗಿದೆ...
ದಯಮಾಡಿ ಕನ್ನಡ ಪುಸ್ತಕ ...ಬೇರೆಯಾವುದೇ ಭಾಷೆಯ ಪುಸ್ತಕ ಓದಿದರು ಸರಿಯೇ...ಬೇರೆ ಭಾಷೆಯಲಿ ಓದಿ ಗ್ರಹಿಸಿದ್ದನ್ನ ಕನ್ನಡದಲ್ಲು ಬರೆದು ಸೀಮಿತವಾಗಿರುವ ಭಾಷೆಯ ವ್ಯಾಪ್ತಿ ವ್ಯಾಪಕವಾಗಲಿ.....ತಮಿಳು ..ತೆಲುಗು ವಿಶ್ವ ವ್ಯಾಪಕವಾಗಿವೆ..ಮಾತನಾಡಲು ಸಾದ್ಯವಿಲ್ಲವೆಂದರು...ಸಿನಿಮಾ ವಿಶ್ವದಾದ್ಯಂತ ಬಿಡುಗಡೆಗೊಂಡು ಭಾಷೆಯ ಅರಿವು ಮೂಡಿಸುತ್ತಿವೆ....ಕನ್ನಡವು ಆ ಸಾಲಿನಲ್ಲಿ ಮುಂಚುಣಿಯಾಗಬೇಕೆಂಬ ಆಸೆ ಇದೆ... ಹಾಗೆಯೇ ಕನ್ನಡ ವಿಶ್ವ ವ್ಯಾಪಕವಾಗಲೆಂಬ ಬಯಕೆ
ಕನ್ನಡ ರಾಜ್ಯೋತ್ಸವ ಆಚರಣೆ ಸೀಮಿತವಾಗದೆ....ಸಂಕಲ್ಪದ ದಿನವಾಗಲಿ ....
ಇಂತಿ ನಿಮ್ಮ ವಿಶ್ವಾಸಿ
ಶ್ಯಾಮ್ ಪ್ರಸಾದ್ ಭಟ್